ಅಧ್ಯಕ್ಷರಾಗಿ ಶ್ರೀಧರ ಬಾಳೆಕಲ್ಲು – ಉಪಾಧ್ಯಕ್ಷರಾಗಿ ಗೀತಾ ಆಯ್ಕೆ
ವಿಟ್ಲ: ಮಾಣಿಲ ಗ್ರಾಮ ಪಂಚಾಯತ್ ನ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಆ.18ರಂದು ನಡೆಯಿತು. ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಶ್ರೀಧರ ಬಾಳೆಕಲ್ಲು ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಗೀತಾ ರವರು ಆಯ್ಕೆಯಾಗಿದ್ದಾರೆ.
ಮಾಣಿಲ ಗ್ರಾಮ ಪಂಚಾಯತ್ ನಲ್ಲಿ 8 ಮಂದಿ ಸದಸ್ಯರಿದ್ದು ಅದರಲ್ಲಿ ೫ ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಗೂ 3 ಬಿಜೆಪಿ ಬಂಬಲಿತ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಶ್ರೀಧರ ಬಾಳೆಕಲ್ಲು ಹಾಗೂ ಬಿಜೆಪಿ ಬೆಂಬಲಿತ ಸದಸ್ಯರಾಗಿರುವ ಚಂದ್ರಶೇಖರರವರು ನಾಮಪತ್ರ ಸಲ್ಲಿಸಿದ್ದರು. ಬಳಿಕ ನಡೆದ ಮತದಾನದಲ್ಲಿ ಶ್ರೀಧರ ಬಾಳೆಕಲ್ಲುರವರಿಗೆ 5 ಮತ ಲಭಿಸುವುದರೊಂದಿಗೆ ಅವರು ವಿಜಯಿಯಾಗಿದ್ದರು.ಉಪಾಧ್ಯಕ್ಷ ಸ್ಥಾನವು ಎಸ್.ಸಿ.ಮಹಿಳೆಗೆ ಮೀಸಾಲಾಗಿರುವುದರಿಂದ ಕಾಂಗ್ರೆಸ್ ಪಕ್ಷದಲ್ಲಿ ಎಸ್.ಸಿ.ಮಹಿಳೆ ಸದಸ್ಯರಿಲ್ಲದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ಗೀತರವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ವಿಟ್ಲ ಸಿ.ಡಿ.ಪಿ.ಒ., ಉಷಾರವರು ಚುನಾವಣಾ ಪ್ರಕ್ರೀಯೆ ನಡೆಸಿಕೊಟ್ಟರು, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಸಂತಿ, ಕಾರ್ಯದರ್ಶಿ ರಾಮ ನಾಯ್ಕ್ ರವರು ಸಹಕರಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಬಾಳೆಕಲ್ಲು, ಮಾಲತಿ, ಶೋಭ, ವನಿತ, ಚಂದ್ರಶೇಖರ, ವಿಷ್ಣುಕುಮಾರ್ ಉಪಸ್ಥಿತರಿದ್ದರು.
ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ. ರಾಜಾರಾಮ್ ಕೆ.ಬಿ., ಕೆ.ಪಿ.ಸಿ.ಸಿ. ಸದಸ್ಯರಾದ ಎಂ.ಎಸ್. ಮಹಮ್ಮದ್, ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ, ವಿಟ್ಲ – ಉಪ್ಪಿನಂಗಡಿ ವಕ್ತಾರರಾದ ರಮಾನಾಥ ವಿಟ್ಲ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಉಪಾಧ್ಯಕ್ಷರಾದ ಜಯರಾಮ ಬಲ್ಲಳ್, ರಾಜ್ಯ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ನಝೀರ್ ಮಠ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಸಣ್ಣಣ್ಣ ಮಡಿವಾಳ ಉಪ್ಪಿನಂಗಡಿ, ವಿನಾಯಕ ಪೈ, ಸ್ಥಳೀಯರಾದ ಮೊಯಿದ್ದೀನ್ ಕುಟ್ಟಿ, ಇಬ್ರಾಹಿಂ ಕೆರೀಂ ಎನ್.ಎಮ್, ಮುಸ್ತಫ ಎನ್.ಎಮ್. ಅನಿಲ್ ಕೊಮ್ಮಂಜೆ, ನಾರಾಯಣ ಪಿ.ಕೆ., ಕೃಷ್ಣಪ್ಪ ಪೂಜಾರಿ ತಾರಿದಳ, ರಝಾಕ್ ಎನ್.ಎಂ. ಉಪಸ್ಥಿತರಿದ್ದರು.