ಪಾಲ್ತಾಡಿ ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ, ಆಟಿದ ಕೂಟ

0

ಸವಣೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲ್ತಾಡಿ ಇಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಆಟಿದ ಕೂಟ ಕಾರ್ಯಕ್ರಮ ನಡೆಯಿತು.

ಬೆಳಗ್ಗಿನ ಧ್ವಜಾರೋಹಣವನ್ನು ನಿವೃತ್ತ ಸೈನಿಕ ಸಂಜೀವ ಗೌಡ ಪಾಲ್ತಾಡಿ ಇವರು ನೆರವೇರಿಸಿದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಸುಭಾಸ್ ರೈ ಕಡಮಜಲು ದೇಶಭಕ್ತಿ ಹಾಗೂ ಆಟಿ ತಿಂಗಳ ವೈಶಿಷ್ಟ್ಯದ ಕುರಿತು ಮಾತನಾಡಿದರು.

ವಿಶ್ವ ಪರಿಸರ ದಿನಾಚರಣೆ ಹಾಗೂ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಜಯರಾಮ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸವಣೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಕಿಟ್ಟಣ್ಣ ರೈ ನಡುಕೂಟೇಲು, ಗ್ರಾಮ ಪಂಚಾಯತ್ ಸದಸ್ಯರಾದ ತಾರಾನಾಥ್ ಬೊಳಿಯಾಲ, ಚೇತನಾ ಶಿವಾನಂದ, ಹರೀಶ್ ಕಾಯರ್ ಗುರಿ, ಭರತ್ ರೈ ಕಲಾಯಿ, ಹಿರಿಯ ವಿದ್ಯಾರ್ಥಿ ಪ್ರವೀಣ್ ರೈ ನಡುಕೂಟೇಲು ಮೊದಲಾದವರು ಉಪಸ್ಥಿತರಿದ್ದು ಶುಭ ಕೋರಿದರು.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮೆರವಣಿಗೆ, ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆಟಿ ಕೂಟದ ಪ್ರಯುಕ್ತ ಬೆಳಗ್ಗಿನ ಉಪಹಾರಕ್ಕೆ ಪತ್ರೊಡೆ,ಕ್ಷೀರ ಹಾಗೂ ಮಧ್ಯಾಹ್ನದ ಭೋಜನಕ್ಕೆ ಅನ್ನ,ಸಾಂಬಾರ್, ಕಣಿಲೆ ಗಸಿ, ಚಗ್ತೆ ಸೊಪ್ಪಿನ ಪಲ್ಯ, ಉಪ್ಪು ಹಲಸಿನ ಪಲ್ಯ, ಕೆಸುವಿನ ಬೇರಿನ ಗಸಿ, ಕೆಸುವಿನ ಎಲೆಯ ಚೇಟ್ಲ & ಹಲಸಿನ ಬೀಜ, ಗೋಧಿ ಪಾಯಸ ಹೀಗೆ ವಿವಿಧ ಖಾದ್ಯ ಗಳನ್ನು ಮಾಡಲಾಗಿತ್ತು.

LEAVE A REPLY

Please enter your comment!
Please enter your name here