ನಿವೃತ ಅಂಗನವಾಡಿ ಸಹಾಯಕಿ ಕಮಲಾಕ್ಷೀ ರೈ ,ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ,ಶಿಕ್ಷಕ ಗಂಗಾಧರರಿಗೆ ಗೌರವಾರ್ಪಣೆ
ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ ಬೀಳ್ಕೊಡುಗೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶಾಲಾಭಿವೃದ್ದಿ ಸಮಿತಿ ಹಾಗೂ ಹಳೆವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಬಾಲಕೃಷ್ಣ ರೈ ಅವರು ದೀಪಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ವಹಿಸಿದ್ದರು.
ಬೀಳ್ಕೊಡುಗೆ ಕಾರ್ಯಕ್ರಮ
ಚೆನ್ನಾವರ ಶಾಲೆಯಲ್ಲಿ೧೫ ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಬಂಟ್ವಾಳ ತಾಲೂಕಿನ ಮೊಂಟೆಪದವು ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ವರ್ಗಾವಣೆಯಾದ ಶಿಕ್ಷಕಿ ಶ್ವೇತಾ ಅವರನ್ನು ಸನ್ಮಾನಿಸಿ ಚಿನ್ನದ ಉಡುಗೊರೆ ನೀಡಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕಿ ಶ್ವೇತಾ ಅವರನ್ನು ವಿವಿಧ ಸಂಘ ಸಂಸ್ಥೆಗಳಿಂದ , ವಿದ್ಯಾರ್ಥಿಗಳಿಂದ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಶಿಕ್ಷಕಿ ಶ್ವೇತಾ ಅವರು ಶಾಲೆಗೆ ಗೋಡ್ರೆಜ್ ಕೊಡುಗೆಯಾಗಿ ನೀಡಿದರು.
ಗೌರವಾರ್ಪಣೆ
ಚೆನ್ನಾವರ ಅಂಗನವಾಡಿ ಕೇಂದ್ರದ ನಿವೃತ ಸಹಾಯಕಿ ಕಮಲಾಕ್ಷೀ ರೈ ,ಸವಣೂರು ಗ್ರಾ.ಪಂ.ಅಧ್ಯಕ್ಷೆಯಾಗಿ 2.5 ವರ್ಷಗಳ ಉತ್ತಮ ಆಡಳಿ ನಡೆಸಿದ ರಾಜೀವಿ ಶೆಟ್ಟಿ ,ಚೆನ್ನಾವರ ಶಾಲೆಯಲ್ಲಿ ನಿಯೋಜನೆ ಮೇರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ ,ಅಮೈ ಶಾಲಾ ಶಿಕ್ಷಕ ಗಂಗಾಧರ ಅವರಿಗೆ ಗೌರವಾರ್ಪಣೆ ಮಾಡಲಾಯಿತು.
ಚೆನ್ನಾವರ ಶಾಲಾ ನಿವೃತ ಮುಖ್ಯಗುರು ಶಾಂತಾ ಕುಮಾರಿ ಎನ್ ,ಇಂಡಿಯನ್ ಸ್ಕೂಲ್ ಅಬುದಾಭಿ ಇಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ದಿನೇಶ್ ಎನ್.ಸುವರ್ಣ ,ಸವಣೂರು ಗ್ರಾ.ಪಂ.ಸದಸ್ಯೆ ವಿನೋದಾ ಸಿ. ರೈ ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಚೆನ್ನಾವರ ,ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಜಯಂತಿ ರೈ ನೆಲ್ಯಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಪುರಂದರ ಕೆ. ಸ್ವಾಗತಿಸಿ,ಶಾಲಾ ಮುಖ್ಯಶಿಕ್ಷಕ ಮಲ್ಲೇಶಯ್ಯ ಎಚ್. ಎಂ. ಪ್ರಸ್ತಾವನೆಗೈದರು.ಶಿಕ್ಷಕಿ ಭವ್ಯಾ ವಂದಿಸಿದರು.ಶಿಕ್ಷಕಿ ಅಫೀಫಾ ಸಹಕರಿಸಿದರು.ಶಶಿಕುಮಾರ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.