ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವಿಶಿಷ್ಟ ಸಾಧನೆಗೆ ಸತತ 3ನೇ ಬಾರಿ ಎಸ್‌ಸಿಡಿಸಿಸಿ ಬ್ಯಾಂಕ್ ಪ್ರಶಸ್ತಿಗೆ ಆಯ್ಕೆ

0

ಪುತ್ತೂರು: ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವಿಶಿಷ್ಟ ಸಾಧನೆಗೆ ಸತತ 3ನೇ ಬಾರಿ ಎಸ್‌ಸಿಡಿಸಿಸಿ ಬ್ಯಾಂಕ್ ಪ್ರಶಸ್ತಿಗೆ ಆಯ್ಕೆಗೊಂಡಿದ್ದು, ಆ.19ರಂದು ಎಸ್‌ಸಿಡಿಸಿಸಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ನಡೆಯುವ ಮಹಾ ಸಭೆಯಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.ನಡೆಯುವ ಮಹಾಸಭೆಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಪುತ್ತೂರು, ಸುಳ್ಯ, ಕಡಬ, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 13 ಶಾಖೆಗಳನ್ನು ಮತ್ತು ದರ್ಬೆಯಲ್ಲಿ ಪ್ರಧಾನ ಶಾಖೆಯನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಇದರ 2022-23 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮಾಡಿದ ವಿಶಿಷ್ಟ ಸಾಧನೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ 4ನೇ ಬಾರಿ ಮತ್ತು ಸತತ 3ನೇ ಬಾರಿಗೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಆದರ್ಶ ವಿವಿಧೋದ್ದೇಶ ಸಹಕಾರ ಸಂಘವು ಆರಂಭದಿಂದಲೂ ಆಡಿಟ್ ವರ್ಗೀಕರಣದಲ್ಲಿ ಸತತವಾಗಿ ‘ಎ’ ತರಗತಿ ಸ್ಥಾನವನ್ನು ಪಡೆದುಕೊಂಡು ಬರುತ್ತಿದ್ದು, ಸಂಘವು 2022-23ನೇ ಸಾಲಿನಲ್ಲಿ ರೂ. 595.46 ಕೋಟಿ ವ್ಯವಹಾರ ಮಾಡಿ, ರೂ.1.51 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ. ಮಾರ್ಚ್ 2023 ರ ಅಂತ್ಯಕ್ಕೆ ಒಟ್ಟು 7961 ಸದಸ್ಯರನ್ನು ಹೊಂದಿದ್ದು, ರೂ. 2.92 ಕೋಟಿಪಾಲು ಬಂಡವಾಳವನ್ನು, ರೂ. 116.38 ಕೋಟಿ ಠೇವಣಿಯನ್ನು ಮತ್ತು ರೂ.91.16 ಕೋಟಿ ಹೊರ ಬಾಕಿ ಸಾಲವನ್ನು ಹೊಂದಿದೆ. ಮಾತ್ರವಲ್ಲದೆ ಸಂಘವು ಆರಂಭಗೊಂಡ ವರ್ಷದಿಂದ ಸತತವಾಗಿ ಶೇಕಡಾ 10ಕ್ಕಿಂತ ಮೇಲಿನ ಡಿವಿಡೆಂಡನ್ನು ಸದಸ್ಯರಿಗೆ ನೀಡಿದ ಸಂಘವಾಗಿದೆ. ಪ್ರಸ್ತುತ ಸಂಘದಲ್ಲಿ ರೂ. 4.99 ಕೋಟಿಯಷ್ಟು ವಿವಿಧ ರೀತಿಯ ನಿಧಿಗಳಿರುತ್ತದೆ.

ಸಂಘಕ್ಕೆ 4ನೇ ಬಾರಿ ಎಸ್‌ಸಿಡಿಸಿಸಿ ಬ್ಯಾಂಕಿನ ಪ್ರಶಸ್ತಿ ಬಂದಿರುವುದು ಸಂತೋಷವನ್ನು ತಂದಿದೆ. ಸಂಘದ ಸಾಧನೆಗೆ ಮತ್ತು ಅಭಿವೃದ್ದಿಗೆ ಸಹಕಾರ ನೀಡುತ್ತಿರುವ ನಿರ್ದೇಶಕರಿಗೆ, ಸದಸ್ಯರಿಗೆ, ಠೇವಣಿದಾರರಿಗೆ, ಗ್ರಾಹಕರಿಗೆ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ. ಡಿಸಿಸಿ ಬ್ಯಾಂಕಿನ ಅಧ್ಯಕ್ಷರಿಗೆ, ಅಧಿಕಾರಿ ವರ್ಗದವರಿಗೆ ಮತ್ತು ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು ರವರಿಗೆ ನಮ್ಮ ಸಂಘದ ಪರವಾಗಿ ಕೃತಜ್ಞತೆಗಳು.
‘ಸಹಕಾರ ರತ್ನ’ ಕೆ. ಸೀತಾರಾಮ ರೈ ಸವಣೂರು
ಅಧ್ಯಕ್ಷರು, ಆದರ್ಶ ವಿವಿಧೋದ್ದೇಶ ಸಹಕಾರ ಸಂಘ

LEAVE A REPLY

Please enter your comment!
Please enter your name here