ಪೆರ್ನೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವದ ಅಂಗವಾಗಿ 3000 ವೃಕ್ಷ ಅಭಿಯಾನ

0

ನಾಳೆ(ಆ.20)ಕಲ್ಲರ್ಪೆ‌ ಸಂಘದ ಅಧ್ಯಕ್ಷರ ನಿವಾಸದಲ್ಲಿ ಚಾಲನೆ
ವಾಣಿಯನ್/ಗಾಣಿಗ ಸಮಾಜದ ಪ್ರತಿ ಮನೆಯಲ್ಲಿ ವೃಕ್ಷ ಅಭಿಯಾನ
ಪ್ರಕೃತಿಗೆ ಹಸಿರು ಹೊದಿಸಿ ಒಂದು ಕಳಿಯಾಟ ಕಾಲ’ ಎಂಬ ವಿಶೇಷ ಪರಿಕಲ್ಪನೆಯಲ್ಲಿ ಅಭಿಯಾನ

ಪುತ್ತೂರು: ವಾಣಿಯನ್/ಗಾಣಿಗ ಸಮುದಾಯದ ಆರಾಧ್ಯ ಕ್ಷೇತ್ರ ಪೆರ್ನೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ 20 ವರ್ಷಗಳ ಬಳಿಕ ಅಂದರೆ ಮುಂದಿನ 2024ರಲ್ಲಿ ನಡೆಯಲಿರುವ ಕಳಿಯಾಟ ಮಹೋತ್ಸವವನ್ನು ಅವಿಸ್ಮರಣೀಯ ಗೊಳಿಸುವ ಉದ್ದೇಶದಿಂದ ‘ಪ್ರಕೃತಿಗೆ ಹಸಿರು ಹೊದಿಸಿ ಒಂದು ಕಳಿಯಾಟ ಕಾಲ’ ಎಂಬ ವಿಶೇಷ ಪರಿಕಲ್ಪನೆಯಲ್ಲಿ ಸಮಾಜದ ಪ್ರತಿ ಮನೆಯಲ್ಲಿ ವೃಕ್ಷ ಅಭಿಯಾನ 3000 ಫಲವೃಕ್ಷ ಸಸಿಗಳನ್ನು ನೆಡುವ ಬೃಹತ್ ಕಾರ್ಯಕ್ರಮವನ್ನು ಕಳಿಯಾಟ ಸಮಿತಿ ಹಾಗೂ ಕ್ಷೇತ್ರದ ವತಿಯಿಂದ ಆಯೋಜಿಸಲಾಗಿದ್ದು ಆ.20ರಂದು‌ ಚಾಲನೆ ದೊರೆಯಲಿದೆ.


ಪುತ್ತೂರು ವಾಣಿಯನ್/ ಗಾಣಿಗ ಸಮುದಾಯ ಬಾಂಧವರ ಪ್ರತಿ ಮನೆಯಲ್ಲೂ ಫಲ ವೃಕ್ಷ ನೆಡುವ ವಿಶೇಷ ಪ್ರಯತ್ನ.
ವಾಣಿಯನ್ /ಗಾಣಿಗ ಸಮುದಾಯದವರು ಕುಲದೇವತೆಯನ್ನಾಗಿ ಆರಾಧಿಸಿಕೊಂಡು ಬರುತ್ತಿರುವ ಪೆರ್ನೆ ಶ್ರೀ ಮುಚ್ಚಿಲೋಟ್ ಭಗವತಿ ನೆಲೆಸಿರುವ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕಡ್ಡಾಯ ಸಾಮೂಹಿಕ ವಿವಾಹದಂತಹ ವಿಭಿನ್ನ ಕಾರ್ಯಕ್ರಮಗಳ ಮೂಲಕ ಎಲ್ಲರ ಗಮನ ಸೆಳೆದಿದೆ. ಹಿಂದೂ ಸಂಪ್ರದಾಯದ ಅನೇಕ ಆಚಾರ ವಿಚಾರಗಳನ್ನು ಇಂದಿಗೂ ಉಳಿಸಿಕೊಂಡು ಪಾಲಿಸುತ್ತಿರುವುದು ಈ ಸಮುದಾಯದ ಹೆಗ್ಗಳಿಕೆ. ಪ್ರಕೃತಿಯ ಸಂರಕ್ಷಣೆಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕೆಂಬ ಆಶಯನ್ನು ಎತ್ತಿ ಹಿಡಿದು ಗಿಡ ನೆಡುವ ಮತ್ತು ಸಂರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತದೆ. ನಾಡನ್ನು ಪರಿಪೂರ್ಣವಾಗಿ ಭಕ್ತಿ ಸಾಗರದಲ್ಲಿ ಮಿಂದೆಬ್ಬಿಸುವ ಕಳಿಯಾಟ ಮಹೋತ್ಸವವು ಮುಗಿದು ಹೋದರೂ, ಹಚ್ಚ ಹಸಿರಿನೊಂದಿಗೆ ಪ್ರಕೃತಿಯಲ್ಲಿ ತಲೆಯೆತ್ತಿ ಮೆರೆದಾಡಲು ಈ ಮರಗಳಿರಬೇಕು ಎಂಬ ಆಶಯದೊಂದಿಗೆ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿ ಮನೆ ಹಾಗೂ ಇತರ ಬಂಧು ಮಿತ್ರರ ಮನೆಗಳು ಸೇರಿ ಏಕಕಾಲದಲ್ಲಿ ಒಟ್ಟು 3000 ಸಸಿಗಳನ್ನು ನೆಡಲಾಗುವುದು.


ಈ ಕಾರ್ಯಕ್ರಮವನ್ನು ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಸಲು ಪುತ್ತೂರು ವಾಣಿಯನ್ /ಗಾಣಿಗ ಸಮಾಜ ಸೇವಾ ಸಂಘ ಸಿದ್ಧತೆಗಳನ್ನು ನಡೆಸಿಕೊಂಡಿದೆ. ಪುತ್ತೂರು ಸಂಘದ ವ್ಯಾಪ್ತಿಯಲ್ಲಿ ಸಂಘದ ಅಧ್ಯಕ್ಷರಾದ ಪ್ರಸಾದ್ ಬಿ. ಇವರ ಕಲ್ಲರ್ಪೆ ಮನೆಯಲ್ಲಿ ಪೂರ್ವಾಹ್ನ 10 ಗಂಟೆಗೆ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಳಿಕ ಪುತ್ತೂರು ಸಂಘದ ವ್ಯಾಪ್ತಿಗೊಳ ಪಟ್ಟ ಕಡಬ ಹಾಗೂ ಪುತ್ತೂರು ತಾಲೂಕಿನ ಸುಮಾರು 400 ಸಮಾಜ ಬಾಂಧವರ ಮನೆಗಳಲ್ಲಿ ಫಲವೃಕ್ಷ ಸಸಿಗಳನ್ನು ನೆಡಲಾಗುವುದು ಎಂದು ಪುತ್ತೂರು ವಾಣಿಯನ್ ಗಾಣಿಗೆ ಸಮಾಜ ಸೇವಾ ಸಂಘ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here