ಅಧ್ಯಕ್ಷರಾಗಿ ರೇಖಾ ರಮೇಶ್ ಪಂಜಾಜೆ, ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಆಯ್ಕೆ
ವಿಟ್ಲ: ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ರೇಖಾ ರಮೇಶ್ ಪಂಜಾಜೆ ಹಾಗೂ ಉಪಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್‌ರವರು ಆಯ್ಕೆಯಾಗಿದ್ದಾರೆ. ಇವರಿಬ್ಬರೂ ಕಾಂಗ್ರೆಸ್ ಬೆಂಬಲಿತ ಸದಸ್ಯರು. ಗ್ರಾಮ ಪಂಚಾಯತ್ ನಲ್ಲಿ 20 ಮಂದಿ ಸದಸ್ಯರಿದ್ದು, 14 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಗೂ 6 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯೆ ರೇಖಾ ರಮೇಶ್ ಪಂಜಾಜೆ ಹಾಗೂ ಬಿಜೆಪಿ ಬೆಂಬಲಿತ ಸದಸ್ಯೆ ವನಿತಾ ನಾಮಪತ್ರ ಸಲ್ಲಿಸಿದರು. ಮತದಾನ ನಡೆದ ವೇಳೆ ರೇಖಾ ರಮೇಶ್ ಪಂಜಾಜೆರವರು ವಿಜೇತರಾದರು. ಉಪಾಧ್ಯಕ್ಷತೆಗೆ ಸ್ಥಾನ ಕಾಂಗ್ರೆಸ್ ಬೆಂಬಲಿತ ಸದಸ್ಯ ಅಬ್ದುಲ್ ರಹಿಮಾನ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯ ಮನೋಜ್ ಬನಾರಿರವರು ಸ್ಪರ್ಧಿಸಿದ್ದರು. ಮತದಾನ ನಡೆದ ವೇಳೆ ಅಬ್ದುಲ್ ರಹಿಮಾನ್ ರವರು ವಿಜೇತರಾದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಿಷ್ಣು ನಾರಾಯಣ ಹೆಬ್ಬಾರ್ ಚುನಾವಣೆ ಪ್ರಕ್ರಿಯೆ ನಡೆಸಿ ಕೊಟ್ಟರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿ ಸಹಕರಿಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಮಜೀದ್, ಗಣೇಶ ಕುಮಾರ್ ಭಟ್, ಕುಸುಮ, ವನೀತ, ರಘುರಾಮ ಶೆಟ್ಟಿ, ನಾರಾಯಣ ಗೌಡ, ದೇವಕಿ, ಮೊಯ್ದು ಕುಂಞಿ ಹಾಜಿ ಬೈರಿಕಟ್ಟೆ, ಲಿಲ್ಲಿ ಮೊಂತೆರೋ, ಗ್ರೇಸಿ ಕ್ರಾಸ್ತಾ, ಕೃಷ್ಣನಾಯ್ಕ ಮರ್ತನಾಡಿ, ಮೊಯ್ದು ಕುಂಞಿ ಮಂಡ್ಯೂರು, ಸೆಲ್ಮತುಲ್ ಬುಸ್ರಿಯಾ, ಸೆಲೆಸ್ತಿನ ಡಿ ಸೋಜ, ನಳಿನಿ, ಧರ್ಣಮ್ಮ, ಮನೋಜ್ ಕುಮಾರ್, ವೀಣಾ ಡಿ ಸೋಜ ಉಪಸ್ಥಿತರಿದ್ದರು.