ಕೊಣಾಜೆ ಗ್ರಾ.ಪಂ. ಅಧ್ಯಕ್ಷೆಯಾಗಿ ರುಕ್ಮಿಣಿ, ಉಪಾಧ್ಯಕ್ಷರಾಗಿ ನವೀನ್ ಎಂ.

0

ಕಡಬ: ಕೊಣಾಜೆ ಗ್ರಾ.ಪಂ.2ನೇ ಅವಽಗೆ ಅಧ್ಯಕ್ಷೆಯಾಗಿ ರುಕ್ಮಿಣಿ ಹಾಗೂ ಉಪಾಧ್ಯಕ್ಷರಾಗಿ ನವೀನ್ ಎಂ. ಆಯ್ಕೆಯಾಗಿದ್ದಾರೆ.
ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ರುಕ್ಮಿಣಿ ಹಾಗೂ ಮೈತ್ರಿಯವರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನವೀನ್ ಎಂ. ಹಾಗೂ ಸರೋಜಿನಿ ಅವರು ನಾಮಪತ್ರ ಸಲ್ಲಿಸಿದ್ದು, ಮತದಾನ ನಡೆದಾಗ ರುಕ್ಮಿಯವರು 3 ಹಾಗೂ ಮೈತ್ರಿಯವರು 2 ಮತಗಳನ್ನು ಪಡೆದು ರುಕ್ಮಿಯವರು ಗೆಲುವು ಸಾಧಿಸಿದರು.. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನವೀನ್ ಅವರು 3 ಹಾಗೂ ಸರೋಜಿನಿಯವರು 2 ಮತಗಳನ್ನು ಪಡೆದು ನವೀನ್ ಎಂ, ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕೊಣಾಜೆ ಗ್ರಾ.ಪಂ.ನಲ್ಲಿ ಒಟ್ಟು 5 ಸದಸ್ಯ ಸ್ಥಾನಗಳಿದ್ದು, ಅದರಲ್ಲಿ ಮೂರು ಮಂದಿ ಸದಸ್ಯರು ಬಿಜೆಪಿ ಬೆಂಬಲಿತರಾಗಿದ್ದು, ಓರ್ವ ಸದಸ್ಯರು ಕಾಂಗ್ರೆಸ್ ಬೆಂಬಲಿತರು ಮತ್ತು ಇನ್ನೋರ್ವ ಸದಸ್ಯರು ಪಕ್ಷೇತರರಾಗಿ ಗುರುತಿಸಿಕೊಂಡಿದ್ದರು. ಇಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿತ್ತು. ಚುನಾವಣಾಧಿಕಾರಿಯಾಗಿ ಕಡಬ ಜೂನಿಯರ್ ಕಾಲೇಜಿನ ಉಪನ್ಯಾಸಕ ಜ್ಞಾನೇಶ್ವರ್ ಚುನಾವಣಾ ಪ್ರಕ್ರಿಯೆ ನಡೆಸಿದರು. ಗ್ರಾ.ಪಂ. ಅಭಿವೃದ್ದಿ ಅಽಕಾರಿ ಪದ್ಮನಾಭ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here