ಕಾಣಿಯೂರು: ಕಾಣಿಯೂರು ಗ್ರಾ.ಪಂ.ನ 2ನೇ ಅವಧಿಗೆ ಅಧ್ಯಕ್ಷ ,ಉಪಾಧ್ಯಕ್ಷ ಆಯ್ಕೆ ಗ್ರಾ.ಪಂ.ನ ಕಣ್ವರ್ಷಿ ಸಭಾಭವನದಲ್ಲಿ ಆ.19ರಂದು ನಡೆಯಿತು.
ನೂತನ ಅಧ್ಯಕ್ಷರಾಗಿ ವಿಶ್ವನಾಥ ಕೊಪ್ಪ ಹಾಗೂ ಉಪಾಧ್ಯಕ್ಷರಾಗಿ ಗಂಗಮ್ಮ ಗುಜ್ಜರ್ಮೆ ಅವಿರೋಧವಾಗಿ ಆಯ್ಕೆಯಾದರು. ಇವರಿಬ್ಬರೂ ಬಿಜೆಪಿ ಬೆಂಬಲಿತ ಸದಸ್ಯರು ಒಟ್ಟು 16 ಸದಸ್ಯರ ಪೈಕಿ 15 ಬಿಜೆಪಿ ಬೆಂಬಲಿತರಾಗಿದ್ದು ಒರ್ವ ಪಕ್ಷೇತರರಾಗಿದ್ದಾರೆ. ಅಧ್ಯಕ್ಷತೆ ಹಿಂದುಳಿದ ವರ್ಗ ಎ ಹಾಗೂ ಉಪಾಧ್ಯಕ್ಷತೆ ಪ.ಜಾ.ಮಹಿಳೆಗೆ ನಿಗದಿಯಾಗಿತ್ತು.ಅಧ್ಯಕ್ಷ,ಉಪಾಧ್ಯಕ್ಷತೆಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಕಾಣಿಯೂರು ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಪುಂಡಲೀಕ ಪೂಜಾರ ಆಯ್ಕೆ ಪ್ರಕ್ರಿಯೆ ನಡೆಸಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ದೇವರಾಜ್ ಸಹಕರಿಸಿದರು.
ಬಳಿಕ ನಡೆದ ಸಭೆಯಲ್ಲಿ ನಿರ್ಗಮಿತ ಅಧ್ಯಕ್ಷೆ ಲಲಿತಾ ಧರ್ಕಾಸು,ಉಪಾಧ್ಯಕ್ಷ ಗಣೇಶ ಉದನಡ್ಕ ನೂತನ ಅಧ್ಯಕ್ಷ,ಉಪಾಧ್ಯಕ್ಷರಿಗೆ ಅಽಕಾರ ಹಸ್ತಾಂತರ ಮಾಡಿದರು.ನೂತನ ಅಧ್ಯಕ್ಷ,ಉಪಾಧ್ಯಕ್ಷರಿಗೆ ಗ್ರಾ.ಪಂ.ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಸುಲೋಚನಾ ಮಿಯೋಲ್ಪೆ, ದೇವಿಪ್ರಸಾದ್ ದೋಳ್ಪಾಡಿ ಅವರು ಶುಭ ಹಾರೈಸಿದರು. ನಿರ್ಗಮಿತ ಅಧ್ಯಕ್ಷೆ ಲಲಿತಾ ದರ್ಖಾಸು, ಉಪಾಧ್ಯಕ್ಷ ಗಣೇಶ್ ಉದನಡ್ಕ, ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಪ್ರವೀಣ್‌ಚಂದ್ರ ರೈ ಕುಮೇರು, ವಸಂತ ಪೆರ್ಲೋಡಿ, ದೇವಿಪ್ರಸಾದ್ ದೋಳ್ಪಾಡಿ, ಲೋಕಯ್ಯ ಪರವ ದೋಳ್ಪಾಡಿ, ತಾರಾನಾಥ ಇಡ್ಯಡ್ಕ, ಸುನಂದ ಅಬ್ಬಡ, ಕೀರ್ತಿಕುಮಾರಿ ಅಂಬುಲ, ತೇಜಕುಮಾರಿ ಉದ್ಲಡ್ಡ, ಸುಲೋಚನಾ ಮಿಯೋಳ್ಪೆ, ಅಂಬಾಕ್ಷಿ ಕೂರೇಲು, ಮೀರಾ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ತಿಮ್ಮಪ್ಪ ಗೌಡ ಬೀರುಕುಡಿಕೆ ಕುಮಾರ್, ಚಿತ್ರಾ, ಶಶಿಕಲಾ, ಕೀರ್ತಿ ಕುಮಾರ್, ಪಾರ್ವತಿ ಸಹಕರಿಸಿದರು.
ಎಲ್ಲರ ಸಹಕಾರದಿಂದ ಅಭಿವೃದ್ದಿ ಕಾರ್ಯ ನಡೆಸಿದ ತೃಪ್ತಿ ಇದೆ- ಲಲಿತಾ ದರ್ಖಾಸು:
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಗಮಿತ ಅಧ್ಯಕ್ಷೆ ಲಲಿತಾ ದರ್ಕಾಸು ,ಮೊದಲ ಅವಧಿಯ 2.5 ವರ್ಷಗಳಲ್ಲಿ ಆಡಳಿತ ನಡೆಸಲು ಎಲ್ಲಾ ಸದಸ್ಯರು,ಅಽಕಾರಿಗಳು, ಸಿಬ್ಬಂದಿಗಳು ಸಹಕಾರ ನೀಡಿದ್ದಾರೆ.ಎಲ್ಲರ ಸಹಕಾರದಿಂದ ಅಭಿವೃದ್ದಿ ಕಾರ್ಯ ನಡೆಸಿದ ತೃಪ್ತಿ ಇದೆ ಎಂದರು.
ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ- ಗಣೇಶ್ ಉದನಡ್ಕ:
ನಿರ್ಗಮಿತ ಉಪಾಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ ,2.5 ವರ್ಷಗಳಲ್ಲಿ ಎಲ್ಲರೂ ಉತ್ತಮ ಸಹಕಾರ ನೀಡಿದ್ದಾರೆ.ಹಲವು ವರ್ಷಗಳಿಂದ ತೆರಿಗೆ ವಸೂಲಾತಿಯಲ್ಲಿ ಗ್ರಾ.ಪಂ.ಹಿಂದೆ ಇತ್ತು.ಕಳೆದ ವರ್ಷ ತೆರಿಗೆ ವಸೂಲಾತಿಯಲ್ಲಿ ಶೇ.100ಸಾಧನೆ ಮಾಡಲಾಗಿದೆ.ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ,ಸಿಬ್ಬಂದಿಗಳಿಗೆ ಹಾಗೂ 3 ಗ್ರಾಮದ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಕಳೆದ ಅವಧಿಯಲ್ಲಿ ಸುಮಾರು 13 ಕೋಟಿ ರೂ. ಅನುದಾನ ಗ್ರಾ.ಪಂ.ಗೆ ಬಂದಿದ್ದು,ಅದಕ್ಕೆ ಕಾರಣೀಭೂತರಾದ ಮಾಜಿ ಸಚಿವರಾದ ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ನಳಿನ್ ಕುಮಾರ್ ಕಟೀಲ್,ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಸುಳ್ಯದ ಹಾಲಿ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಧನ್ಯವಾದ ಸಲ್ಲಿಸಿದ ಅವರು, ಪಕ್ಷದ ಹಿರಿಯರು ಹಾಗೂ ಬೂತ್ ಸಮಿತಿಯ ಪದಾಧಿಕಾರಿಗಳೂ ಸಲಹೆ ನೀಡಿದ್ದಾರೆ.ಈ ಬಾರಿಯ ಗ್ರಾಮಸಭೆಗೆ ಯಾವುದೇ ಬೇಡಿಕೆಯ ಅರ್ಜಿ ಬಂದಿಲ್ಲ. ಗ್ರಾಮಸ್ಥರ ಅರ್ಜಿಗಳನ್ನು ಕಾಲ ಕಾಲಕ್ಕೆ ವಿಲೇವಾರಿ ಮಾಡಿ ಅವರ ಬೇಡಿಕೆ ಈಡೇರಿಸಿದ ಕಾರಣ ಜನರು ಗ್ರಾಮಸಭೆಯಲ್ಲಿ ಅರ್ಜಿ ಸಲ್ಲಿಸುವ ಪ್ರಮೇಯವೇ ಬಂದಿಲ್ಲ ಎಂದು ಹೇಳಿದರಲ್ಲದೆ ಕಳೆದ ಅವಧಿಯ ಅಧ್ಯಕ್ಷೆ ಲಲಿತಾ ದರ್ಖಾಸು ಅವರು ಪ್ರಾಮಾಣಿಕರಾಗಿ ಕರ್ತವ್ಯ ಸಲ್ಲಿಸಿದ್ದಾರೆ.ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನಡೆಸಿದ್ದು,ಪಕ್ಷದ ಚಟುವಟಿಕೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಮಾದರಿಯಾಗಿ ಗುರುತಿಸಿಕೊಂಡಿದ್ದಾರೆ ಎಂದರು.
ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ಎಲ್ಲರ ಸಹಕಾರದಲ್ಲಿ ಆಡಳಿತ ನಡೆಸಲಾಗುವುದು- ವಿಶ್ವನಾಥ ಕೊಪ್ಪ: ನೂತನ ಅಧ್ಯಕ್ಷ ವಿಶ್ವನಾಥ ಕೊಪ್ಪ ಮಾತನಾಡಿ, ಹಿಂದಿನ ೨.೫ ವರ್ಷಗಳ ಅವಧಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಲಲಿತಾ ದರ್ಖಾಸು ಹಾಗೂ ಗಣೇಶ್ ಉದನಡ್ಕ ಅವರಿಗೆ ಅಭಿನಂದನೆ ಸಲ್ಲಿಸಿದರು. ಮುಂದಿನ ಆಡಳಿತವನ್ನು ಯಾವುದೇ ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ಎಲ್ಲರ ಸಹಕಾರದಲ್ಲಿ ನಡೆಸಲಾಗುವುದು ಎಂದರು.
ಎಲ್ಲರ ಸಹಕಾರ ಅಗತ್ಯ – ಗಂಗಮ್ಮ ಗುಜ್ಜರ್ಮೆ:
ನೂತನ ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ ಮಾತನಾಡಿ,ಹಿಂದಿನ ಆಡಳಿತ ಸಮಿತಿಗೆ ನೀಡಿದ ಸಹಕಾರದಂತೆ ಈ ಆಡಳಿತ ಮಂಡಳಿಗೂ ಎಲ್ಲರೂ ಸಹಕಾರ ನೀಡಬೇಕೆಂದು ವಿನಂತಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದನೆ:
ನೂತನವಾಗಿ ಆಯ್ಕೆಯಾಗಿರುವ ಕಾಣಿಯೂರು ಗ್ರಾ. ಪಂ. ಅಧ್ಯಕ್ಷ, ಉಪಾಧ್ಯಕ್ಷರಿಗೆ ಸುಳ್ಯ ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿ ಇಂದಿರಾ ಬಿ.ಕೆ, ಪುತ್ತೂರು ಪಿ ಎಲ್ ಡಿ ಬ್ಯಾಂಕ್ ನ ನಿರ್ದೇಶಕ ದೇವಯ್ಯ ಖಂಡಿಗ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರುಗಳು, ಕೊಪ್ಪ ಬಾಂಧವರು ಅಭಿನಂದನೆ ಸಲ್ಲಿಸಿದರು.