ಪುತ್ತೂರು: ಯಾದವ ಸಭಾ ಪ್ರಾದೇಶಿಕ ಸಮಿತಿ ಆರ್ಲಪದವು, ಪಾಣಾಜೆ ಇದರ ಆಶ್ರಯದಲ್ಲಿ ನಡೆಯಲಿರುವ 17ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಆಮಂತ್ರಣ ಪತ್ರಿಕೆ ಆ.19ರಂದು ಆರ್ಲಪದವು ಶ್ರೀ ಸುಬ್ರಹ್ಮಣ್ಯೆಶ್ವರ ಭಜನಾ ಮಂದಿರದಲ್ಲಿ ಬಿಡುಗಡೆಗೊಂಡಿತು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಸದಾಶಿವ ರೈ ಸೂರಂಬೈಲ್, ಪ್ರಗತಿಪರ ಕೃಷಿಕ ಲಕ್ಷ್ಮೀನಾರಾಯಣ ರೈ ಕೆದಂಬಾಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಬಾಬು ರೈ ಕೋಟೆ, ಉದ್ಯಮಿಗಳಾದ ವರದರಾಯ ನಾಯಕ್, ಪುತ್ತೂರು ತಾಲೂಕು ಯಾದವ ಸಭಾ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಪಾಣಾಜೆ ಗ್ರಾ.ಪಂ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ತೂಂಬಡ್ಕ, ವಿದ್ಯಾಶ್ರೀ ಪ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಚಂದ್ರ.ಎ.ಬಿ, ಸತ್ಯನಾರಾಯಣ ಮಣಿಯಾಣಿ ತಲೆಪ್ಪಾಡಿ, ರವೀಂದ್ರ ಭಂಡಾರಿ ಬೈಂಕ್ರೋಡ್, ಪುಷ್ಪರಾಜ್ ರೈ ಕೋಟೆ, ಭರತೇಶ್ ರಾವ್, ಪ್ರಕಾಶ್ ಕುಲಾಲ್, ಹರಿಪ್ರಸಾದ್ ಕುಲಾಲ್, ಹರೀಶ್ ಪೂಜಾರಿ ಕಡಮಾಜೆ, ಹರೀಶ್ ಜಿ.ಎಸ್., ಕುಂಞ ಮಣಿಯಾಣಿ, ಗೋಪಾಲ ಮಣಿಯಾಣಿ ದೇವಸ್ಯ, ರಾಮಚಂದ್ರ ಮಣಿಯಾಣಿ, ಶಿವರಾಮ ಮಣಿಯಾಣಿ, ನಾರಾಯಣ ಮಣಿಯಾಣಿ ಸುಡುಕ್ಕುಳಿ, ಕಾರ್ತಿಕ್ ಡಿ.ಜಿ., ರಾಧಾಕೃಷ್ಣ ಯಾದವ್, ಯಾಧವ ಸಭಾ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಧನಂಜಯ ಮಣಿಯಾಣಿ ಉಪಸ್ಥಿತರಿದ್ದರು. ಶ್ರೀಹರಿ ಪಾಣಾಜೆ ಸ್ವಾಗತಿಸಿ, ವಂದಿಸಿದರು.
ಕೃಷ್ಣ ಜನ್ಮಾಷ್ಣಮಿಯು ವಿವಿಧ ಧಾರ್ಮಿಕ, ಕ್ರೀಡೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ. ವೇ.ಮೂ. ಶ್ರೀ ಗೋಪಾಲಕೃಷ್ಣ ಅಡಿಗ ಅಪಿನಿಮೂಲೆ ರವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ವಿದ್ಯಾರ್ಥಿಗಳಿಗೆ, ಪುರುಷ ಮತ್ತು ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆ, ಭಕ್ತಿಗೀತೆ ಸ್ಪರ್ಧೆ, ಎರಡು ವಿಭಾಗದಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ, ಧಾರ್ಮಿಕ ಸಭೆ ಬಹುಮಾನ ವಿತರಣೆ, ಶಟ್ಲ್ ಬ್ಯಾಟ್ ಮಿಟನ್ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.