ಅಮ್ಮುಂಜ ಲಗೋರಿ ಫ್ರೆಂಡ್ಸ್ ಕ್ಲಬ್ ನಿಂದ ಡಾ.ಸುರೇಶ್ ಪುತ್ತೂರಾಯರವರಿಗೆ ಸನ್ಮಾನ

0

ಪುತ್ತೂರು: ಲಗೋರಿ ಫ್ರೆಂಡ್ಸ್ ಕ್ಲಬ್ ಅಮ್ಮುಂಜ ಇದರ ಆಶ್ರಯದಲ್ಲಿ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಅಮ್ಮುಂಜ ಸುಕುಮಾರ ಗೌಡರ ಮನೆ ವಠಾರದಲ್ಲಿ ಮಹಾವೀರ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ಪುತ್ತೂರಾಯರವರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಸನ್ಮಾನ ಸ್ವೀಕರಿಸಿದ ವೈದ್ಯರಾದ ಡಾ.ಸುರೇಶ ಪುತ್ತೂರಾಯರವರು ಶುಭನುಡಿಗಳನ್ನಾಡಿದರು. ಮಂಗಳೂರಿನ ಶ್ರೀನಿವಾಸ ಕಾಲೇಜಿನ ಪ್ರಾಧ್ಯಾಪಕರಾದ ಸೂರ್ಯನಾರಾಯಣ ಭಟ್, ಆರ್ಯಪು ಗ್ರಾಮ ಪಂಚಾಯತ್ ಮಾಜಿ ಸದಸ್ಯ ರೇಖನಾಥ ರೈ, ಆಕರ್ಷಣ್ ಇಂಡಸ್ಟ್ರೀಸ್ ನ ಸಾದಿಕ್ ರವರು ಉಪಸ್ಥಿತರಿದ್ದರು. ಸ್ಥಳೀಯ ಐ.ಟಿ.ಐ ವಿದ್ಯಾರ್ಥಿಗೆ ಶಾಲಾ ಶುಲ್ಕವನ್ನು ಕ್ಲಬ್ ನ ವತಿಯಿಂದ ಭರಿಸಲಾಯಿತು. ಮುಂಡೂರು ಶಾಲಾ ಶಿಕ್ಷಕಿ ಶ್ರೀಮತಿ ವನಿತಾ ರೈ ಸ್ವಾತಂತ್ರ ಸಂದೇಶವನ್ನು ನೀಡಿದರು.


ಲಗೋರಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಸುಕುಮಾರ ಗೌಡ ಸ್ವಾಗತಿಸಿ, ಕ್ಲಬ್ ನ ಗೌರವಾಧ್ಯಕ್ಷರಾದ ನೇಮಾಕ್ಷ ಸುವರ್ಣರವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಕ್ಲಬ್ ನ ಸದಸ್ಯರಾದ ಪ್ರವೀಣ್ ಗೌಡ ,ಹರೀಶ್ ಮಾದೆರಿ ,ಶಮಂತ್ ಗೌಡ ,ರಿತೇಶ್ ಅಮ್ಮುಂಜ, ಬ್ರಿಜೇಶ್, ತುಷಾರ್ ,ಕವಿತಾ ,ರಕ್ಷಾ, ಹಿತೇಶ್ ,ವಿಖ್ಯಾತ್, ಸೂರ್ಯ ಕಲ್ಲರ್ಪೆ ಹಾಗೂ ಸ್ಥಳೀಯರಾದ ಪ್ರದೀಪ್ ರೈ,ಶ್ರೀಜಿತ್ ರೈ, ಜಯಶಂಕರ್ ರೈ ,ಕಿಟ್ಟಣ್ಣ ರೈ ,ವಿಶ್ವನಾಥ ರೈ, ವಿಶ್ವನಾಥ ನಾಯ್ಕ, ವಿಶ್ವಜಿತ್ ಅಮ್ಮುಂಜ, ಹಸೈನಾರ್ ,ಉಮ್ಮರ್, ಕರೀಮ್, ಚಂದ್ರ ಸಪಲ್ಯ, ಸತೀಶ್ ,ಭವಾನಿ, ಸುಮಿತ್ರ, ಗೀತಾ ,ನಿಶ್ಮಿತಾ, ಸುನಂದ, ಶಾಲಿನಿ ಮತ್ತೀತರರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here