ಜಿಡೆಕಲ್ಲು ಉರಮಾಲು ರಸ್ತೆ ಸಂಚಾರ ಸಮಸ್ಯೆ- ದೂರು

0

ಪುತ್ತೂರು: ನಗರಸಭಾ ವ್ಯಾಪ್ತಿಯ ಜಿಡೆಕಲ್ಲು ಉರಮಾಲು ರಸ್ತೆ ದುರಸ್ತಿಗೊಳಿಸುವಂತೆ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿಯಿಂದ ಶಾಸಕರಿಗೆ, ನಗರಸಭಾ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ನಗರೋತ್ಥಾನ ಯೋಜನೆಯಡಿಯಲ್ಲಿ ಈ ರಸ್ತೆಯನ್ನು ಕೆಲವು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿತ್ತು. ರಸ್ತೆಯ ಸ್ವಲ್ಪಭಾಗ ಅಭಿವೃದ್ಧಿಗೆ ಅನುದಾನಗಳ ಕೊರತೆಯಿಂದ ಬಾಕಿ ಉಳಿದಿದೆ. ಇಲ್ಲಿ ರ್ಸಾಜನಿಕರಿಗೆ ಸಂಚರಿಸಲು ಕಷ್ಟವಾಗಿದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಕೆಸರು ತುಂಬಿ ವಾಹನಗಳಿಗೆ ಸಂಚರಿಸಲು ತೊಂದರೆಯಾಗಿದೆ. ಜಿಡೆಕಲ್ಲು-ಉರಮಾಲು-ತಾರಿಗುಡ್ಡೆ ಪ್ರದೇಶದ ಜನ ಈ ರಸ್ತೆಯನ್ನು ಹೆಚ್ಚಾಗಿ ಅವಲಂಬಿಸುತ್ತಿದ್ದು ರಸ್ತೆ ದುರಸ್ಥಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆಯಾದರೂ ಯಾವುದೇ ದುರಸ್ಥಿ ನಡೆದಿಲ್ಲ. ಆದ್ದರಿಂದ ಅನುದಾನಗಳನ್ನು ಬಿಡುಗಡೆಗೊಳಿಸಲು ಮತ್ತು ರಸ್ತೆ ದುರಸ್ಥಿಗೆ ಶೀಘ್ರ ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

LEAVE A REPLY

Please enter your comment!
Please enter your name here