ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯತ್‌ನಲ್ಲಿ ಅಂಚೆ ಕಚೇರಿಯವರ ಸಹಯೋಗದಲ್ಲಿ ಆ.23ರಂದು ಆಧಾರ್ ಸೇವೆ ನಡೆಯಿತು.
ನೆಲ್ಯಾಡಿ ಉಪ ಅಂಚೆಕಚೇರಿಯಲ್ಲಿ ಕಳೆದ ಏಳೆಂಟು ತಿಂಗಳಿನಿಂದ ಆಧಾರ್ ಸೇವೆ ಸ್ಥಗಿತಗೊಂಡಿತ್ತು. ಇದರಿಂದಾಗಿ ಗ್ರಾಮಸ್ಥರು ಉಪ್ಪಿನಂಗಡಿ, ಕಡಬ, ಆಲಂಕಾರು ಕೇಂದ್ರಗಳಿಗೆ ಅಲೆದಾಟ ನಡೆಸುತ್ತಿದ್ದರು. ಈ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವಿಸ್ತೃತ ವರದಿಯೂ ಪ್ರಕಟಗೊಂಡಿತ್ತು. ಇದೀಗ ಪುತ್ತೂರು ಅಂಚೆ ಇಲಾಖೆಯವರ ಸಹಕಾರದೊಂದಿಗೆ ನೆಲ್ಯಾಡಿ ಗ್ರಾಮ ಪಂಚಾಯತ್‌ನಲ್ಲಿ ಆ.23ರಂದು ಆಧಾರ್‌ಗೆ ಸಂಬಂಧಿತ ಸೇವೆ ನೀಡಲಾಯಿತು. 1 ದಿನ ಮಾತ್ರ ಆಧಾರ್ ಕ್ಯಾಂಪ್ ಮಾಡಲು ನಿರ್ಧರಿಸಲಾಗಿತ್ತು. ಆದರೆ ನೆಲ್ಯಾಡಿ ಹಾಗೂ ಅಸುಪಾಸಿನ 200ಕ್ಕೂ ಹೆಚ್ಚು ಗ್ರಾಮಸ್ಥರು ಬಂದ ಹಿನ್ನೆಲೆಯಲ್ಲಿ ಕ್ಯಾಂಪ್ ಅನ್ನು ಮತ್ತೆರಡು ದಿನಗಳಿಗೆ ವಿಸ್ತರಣೆ ಮಾಡಲಾಗಿದೆ. ಮೊದಲ ದಿನ 90 ಮಂದಿಗೆ ಆಧಾರ್‌ಗೆ ಸಂಬಂಧಿಸಿದ ಸೇವೆ ನೀಡಲಾಗಿದೆ. ಆ.24 ಹಾಗೂ 25ರಂದು ತಲಾ 40 ಮಂದಿಗೆ ಟೋಕನ್ ನೀಡಲಾಗಿದೆ. ಗ್ರಾ.ಪಂ.ನಲ್ಲಿ ಆಧಾರ್ ಸೇವೆ ಮಾಡಿರುವುದರಿಂದ ಗ್ರಾಮಸ್ಥರಿಗೆ ಬಹಳಷ್ಟು ಅನುಕೂಲವಾಗಿದೆ.
ಕ್ಯಾಂಪ್ 2 ದಿನ ವಿಸ್ತರಣೆ:
ಆ.23ರಂದು ಮಾತ್ರ ಕ್ಯಾಂಪ್ ಮಾಡಲು ನಿರ್ಧರಿಸಲಾಗಿತ್ತು. ಆದರೆ ಬಹಳಷ್ಟು ಮಂದಿ ಬಂದ ಹಿನ್ನೆಲೆಯಲ್ಲಿ ಎರಡು ದಿನ ವಿಸ್ತರಣೆ ಮಾಡಲಾಗಿದೆ. ಆ.24 ಹಾಗೂ 25ರಂದು ಕ್ಯಾಂಪ್ ನಡೆಯಲಿದ್ದು ದಿನವೊಂದಕ್ಕೆ 40ರಂತೆ ಎರಡು ದಿನಕ್ಕೆ 80 ಮಂದಿಗೆ ಈಗಾಗಲೇ ಟೋಕನ್ ವಿತರಣೆ ಮಾಡಿದ್ದೇವೆ.
ಯಾಕೂಬ್ ಯು.ಯಾನೆ ಸಲಾಂ ಬಿಲಾಲ್
ಅಧ್ಯಕ್ಷರು, ಗ್ರಾ.ಪಂ.ನೆಲ್ಯಾಡಿ