ಪಡಿತರ ಚೀಟಿ ತಿದ್ದುಪಡಿಗೆ ಸೆಪ್ಟೆಂಬರ್ 1ರಿಂದ 10ರವರೆಗೆ ಕಾಲಾವಕಾಶ

0

ಮಂಗಳೂರು :ಜನತೆಯ ಬಹುಬೇಡಿಕೆಯಿಂದಾಗಿ  ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಕಾಲಾವಕಾಶದಲ್ಲಿ ಮತ್ತೆ ಬದಲಾವಣೆ ಮಾಡಲಾಗಿದ್ದು, ಸೆಪ್ಟೆಂಬರ್ 1ರಿಂದ 10ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.ಅರ್ಜಿ ಸಲ್ಲಿಕೆಗೆ ಆಗಸ್ಟ್ 21ರಂದು ಕೊನೆಯ ದಿನವಾಗಿತ್ತು. ಬಳಿಕ ಸೆ.23ರಂದು ಅವಕಾಶ ನೀಡಲಾಗಿತ್ತು.ಆದರೆ  ಸರ್ವರ್ ಸಮಸ್ಯೆಯ ಕಾರಣದಿಂದ ತುಂಬಾ ಜನರು ತಿದ್ದುಪಡಿ ಅರ್ಜಿ ಸಲ್ಲಿಕೆ ಮಾಡಲಾಗಲಿಲ್ಲ.

ಆ.25 ರಂದು ತುರ್ತು ಚಿಕಿತ್ಸೆಗಾಗಿ ಬಿಪಿಎಲ್ ಕಾರ್ಡ್ ನಲ್ಲಿ ಹೆಸರು ಸೇರಿಸಿದ ಅರ್ಜಿಗಳ ವಿಲೇವಾರಿ ಮಾಡಲು ಆಹಾರ ನೀರಿಕ್ಷಕರಿಗೆ  ಅವಕಾಶ ಕಲ್ಪಿಸಲಾಗಿದೆ.ಇದೀಗ ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಸೆ.01 ರಿಂದ ಸೆ.10 ರವರೆಗೆ   ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಅವಕಾಶ ಕಲ್ಪಿಸಲಾಗಿದೆ.

LEAVE A REPLY

Please enter your comment!
Please enter your name here