ಚಂದ್ರಯಾನ -3:ಸಂತಫಿಲೋಮಿನಾ ಕಾಲೇಜಿನಲ್ಲಿ ಸಂಭ್ರಮಾಚರಣೆ

0

ಪುತ್ತೂರು: ಸಂತಫಿಲೋಮಿನಾ ಕಾಲೇಜಿನ ಸಭಾಭವನದಲ್ಲಿ ಚಂದ್ರಯಾನ 3 ಯೋಜನೆಯಲ್ಲಿ ಭಾಗಿಯಾಗಿ ಅದರ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ಎಲ್ಲ ವಿಜ್ಞಾನಿಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಅಯೋಜಿಸಲಾಯಿತು.


“2023 ಅಗೋಸ್ಟ್ 23 ಭಾರತೀಯರಾದ ನಮಗೆ ಎಂದೂ ಮರೆಯಲಾಗದ ದಿನ. ಸವಾಲುಗಳನ್ನು ಛಲದಿಂದ ಎದುರಿಸಿ ಚಂದ್ರಯಾನ ಯಶಸ್ವಿಯಾಗಿದೆ. ಆ ಮೂಲಕ ನಮ್ಮ ವಿಜ್ಞಾನಿಗಳು ಮತ್ತು ತಂತ್ರವಿದರು ಜಾಗತಿಕ ಮಟ್ಟದಲ್ಲಿ ತಮ್ಮ ಅಸಾಧಾರಣ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಅವರೆಲ್ಲರೂ ಅಭಿನಂದನೀಯರು” ಎಂದು ಉಪಪ್ರಾಂಶುಪಾಲರಾದ ಡಾ. ಎ. ಪಿ.ರಾಧಾಕೃಷ್ಣ ಹೇಳಿದರು.


ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ರೆ.ಫಾ.ಎಂಟೋನಿ ಪ್ರಕಾಶ್ ಮಂತೆರೋ ಅಭಿನಂದಿಸುತ್ತಾ ” ಚಂದ್ರಯಾನದ ಯಶಸ್ಸು ನಮ್ಮೆಲ್ಲರ ಯಶಸ್ಸು. ಇದರ ಹಿಂದೆ ನಿರಂತರವಾಗಿ ಶ್ರಮಿಸಿದ ವಿಜ್ಞಾನಿಗಳು, ತಂತ್ರವಿದರು ತಮ್ಮ ವಿದ್ಯಾಭ್ಯಾಸವನ್ನು ಅತ್ಯಂತ ಪ್ರತಿಷ್ಠಿತ ವಿದ್ಯಾಲಯಗಳಲ್ಲೇ ಮಾಡಿದವರಲ್ಲ. ಆದರೆ ಅವರು ಮಾಡಿದ ಸಾಧನೆ ಅಸಾಧಾರಣವಾದದ್ದು. ಎಳೆಯರಿಗೆ ಪ್ರೇರಣೆ” ಎಂದು ಹೇಳಿದರು.

ಉಪನ್ಯಾಸಕಿ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ಡಾ.ವಿಜಯ ಮೊಳೆಯಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಪ್ರೊ.ಗಣೇಶ್ ಭಟ್, ಡಾ.ಮಾಲಿನಿ, ಪ್ರೊ.ವಿನಯಚಂದ್ರ, ಡಾ.ಚಂದ್ರಶೇಖರ್, ಅಭಿಷೇಕ್, ಗೀತಾಪೂರ್ಣಿಮಾ ಮತ್ತು ಇನ್ನಿತರ ಅಧ್ಯಾಪಕರು ಭಾಗವಹಿಸಿದರು

LEAVE A REPLY

Please enter your comment!
Please enter your name here