ಸಾಮೂಹಿಕವಾಗಿ ಒಂದೇ ಮನಸ್ಸಿನಿಂದ ಪೂಜಿಸಿದರೆ ದೇವರು ಒಲಿಯುತ್ತಾನೆ- ಹರಿಣಿ ಪುತ್ತೂರಾಯ
ನಿಡ್ಪಳ್ಳಿ; ಶ್ರದ್ದೆಯಿಂದ ಭಕ್ತಿಯಿಂದ ದೇವರನ್ನು ಪೂಜಿಸಿದರೆ ನಮಗೆ ಸಕಲೈಶ್ವರ್ಯವನ್ನು ನೀಡುತ್ತಾರೆ ಎಂಬುದು ನಮ್ಮ ನಂಬಿಕೆ. ಇಂದು ತಾಯಂದಿರು ಒಟ್ಟು ಸೇರಿ ಶುದ್ಧ ಮನಸ್ಸಿನಿಂದ ಆ ಮಹಾಲಕ್ಷ್ಮೀಯನ್ನು ಪೂಜಿಸುವ ದಿನ. ಆದುದರಿಂದ ಸಾಮೂಹಿಕವಾಗಿ ಎಲ್ಲರೂ ಒಟ್ಟು ಸೇರಿ ಒಂದೇ ಮನಸ್ಸಿನಿಂದ ಈ ರೀತಿ ಪೂಜಿಸಿದರೆ ದೇವರು ಒಲಿಯುತ್ತಾರೆ ಎಂದು ಪುತ್ತೂರು ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹರಿಣಿ ಪುತ್ತೂರಾಯ ಹೇಳಿದರು.
ಅವರು ಅ.25 ರಂದು ಬೆಟ್ಟಂಪಾಡಿ ದೇವಾಲಯದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಸಮಿತಿ ಶ್ರೀ ಕ್ಷೇತ್ರ ಬೆಟ್ಟಂಪಾಡಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯ ಇದರ ಸಹಕಾರದೊಂದಿಗೆ 5 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು
ನವೋದಯ ಪ್ರೌಡ ಶಾಲೆ ಬೆಟ್ಟಂಪಾಡಿ ಇದರ ಮುಖ್ಯ ಶಿಕ್ಷಕಿ ಪುಷ್ಪಾವತಿ .ಯಸ್, ಬೆಟ್ಟಂಪಾಡಿ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಬೀಡು, ಪಾಣಾಜೆ ಪ್ರಾ.ಕೃಪ.ಸ.ಸಂಘದ ನಿರ್ದೇಶಕ ಕುಮಾರ ಭಟ್ ಬುಳೆನಡ್ಕ, ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ , ಗಾಯಕಿ ಕು.ಸಮನ್ವಿ ರೈ ಮದಕ, ಪೂಜಾ ಸಮಿತಿ ಗೌರವಾಧ್ಯಕ್ಷ ವೇದಮೂರ್ತಿ ರಾಧಾಕೃಷ್ಣ ಭಟ್ ಕಕ್ಕೂರು, ಪೂಜಾ ಸಮಿತಿ ಕಾರ್ಯದರ್ಶಿ ರವಿನಾಥ ಕೋನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂಜಾ ಸಮಿತಿ ಅಧ್ಯಕ್ಷೆ ಸುಲೋಚನಾ ಜೆ.ರೈ ಕೊಮ್ಮಂಡ ಅಧ್ಯಕ್ಷತೆ ವಹಿಸಿದ್ದರು.
ಪೂಜಾ ಸಮಿತಿಯ ಕೋಶಾಧಿಕಾರಿ ಸುಪ್ರೀತಾ ಎಸ್.ರೈ ಸ್ವಾಗತಿಸಿ, ಕಾರ್ಯದರ್ಶಿ ರವಿನಾಥ ಕೋನಡ್ಕ ವರದಿ ವಾಚಿಸಿದರು. ಜತೆ ಕಾರ್ಯದರ್ಶಿ ಲಕ್ಷ್ಮೀನಾರಾಯಣ ರೈ ನುಳಿಯಾಲು ವಂದಿಸಿದರು. ಪ್ರೀಯದರ್ಶಿನಿ ಅಂಗ್ಲಮಾಧ್ಯಮ ಶಾಲಾ ಶಿಕ್ಷಕಿ ಭವ್ಯ ಕಾರ್ಯಕ್ರಮ ನಿರೂಪಿಸಿದರು. ಸವಿತಾ ರೈ ಮದಕ, ಸುಮನ.ಎಸ್ ಬಲ್ಲಾಳ್, ಪ್ರೇಮಲತಾ ಜೆ.ರೈ ಆನಡ್ಕ, ಅರುಣ್ ಪ್ರಕಾಶ್ ರೈ ಮದಕ, ಸವಿತಾ ಚಂದ್ರನ್ ತಲೆಪ್ಪಾಡಿ,ಅನನ್ಯ, ಶಿವಕುಮಾರ್ ಬಲ್ಲಾಳ್ ಬೀಡು, ಶಂಕರ ಗುಂಡ್ಯಡ್ಕ ಅತಿಥಿಗಳಿಗೆ ಹೂಗುಚ್ಚ ನೀಡಿ ಗೌರವಿಸಿದರು.
ನಂತರ ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ಪೂಜಾ ಸಮಿತಿ ಪದಾಧಿಕಾರಿಗಳು ಸರ್ವ ಸದಸ್ಯರು, ಯೋಜನೆಯ ಪದಾಧಿಕಾರಿಗಳು,ಸೇವಾ ಪ್ರತಿನಿಧಿಗಳು, ಸದಸ್ಯರು ಸಹಕರಿಸಿದರು.ದೇವಸ್ಥಾನದ ಆಡಳಿತ ಸಮಿತಿ,ಅಭಿವೃದ್ಧಿ ಸಮಿತಿ ಸದಸ್ಯರು ಪಾಲ್ಗೊಂಡರು.