ಪುತ್ತೂರು: ಕೂರ್ನಡ್ಕದಲ್ಲಿ ನೂತನವಾಗಿ ಪ್ರಾರಂಭಿಸಲಾದ ಶಹಝ್ ಕೋರ್ಟ್ ಅಪಾರ್ಟ್‌ಮೆಂಟ್ ಆ. 25ರಂದು ಶುಭಾರಂಭಗೊಂಡಿತು. ಪ್ರಾತ:ಕಾಲದಲ್ಲಿ ನೂತನ ಅಪಾರ್ಟ್‌ಮೆಂಟನ್ನು ಪುತ್ತೂರು ಮುದರ್ರಿಸ್ ಅಸೈಯದ್ ಅಹಮದ್ ಪೂಕೋಯ ತಂಙಲ್‌ರವರು ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಅವರು ಟೇಪನ್ನು ಕತ್ತರಿಸುವ ಮೂಲಕ ಶಹಾಝ್ ಅಪಾರ್ಟಮೆಂಟ್‌ನ್ನು ಉದ್ಘಾಟಿಸಿ ಮಾತನಾಡಿ ಜನರಿಗೆ ಅವಶ್ಯಕತೆವಾಗಿರುವ ಶಹಾಝ್ ಅಪಾರ್ಟ್‌ಮೆಂಟನ್ನು ಸುಂದರವಾಗಿ ನಿರ್ಮಿಸುವುದರ ಮೂಲಕ ಇನ್ನಷ್ಟು ಅಪಾರ್ಟಮೆಂಟನ್ನು ಸ್ಥಾಪಿಸುವ ಮೂಲಕ ಜನರ ಅವಶ್ಯಕತೆಗಳನ್ನು ಪೂರೈಸುವಂತಾಗಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರು ನಗರಸಭಾ ಆಯುಕ್ತರಾದ ಮಧುಮನೋಹರ್‌ರವರು ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪುತ್ತೂರು ನಗರಸಭಾ ಸ್ಥಳೀಯ ಸದಸ್ಯ ಯೂಸುಫ್ ಡ್ರೀಮ್, ನಗರಸಭಾ ಆರೋಗ್ಯ ಅಧಿಕಾರಿ ಶ್ವೇತಾ ಕಿರಣ್, ಕಲ್ಲರ್ಪೆ ಶಿಝಸ್ ಅಪಾರ್ಟ್‌ಮೆಂಟ್ ಮಾಲಕ ಸಲೀಂ ಹಸನ್ ದುಬೈ, ಮೌಂಟನ್ ವ್ಯೂ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮಹಮ್ಮದ್ ಸಾಬು ಕೂರ್ನಡ್ಕ, ಫೈರೋಜ್ ಇಸ್ಮಾಯಿಲ್ ಪುರುಷರಕಟ್ಟೆ, ದಿನೇಶ್ ಮೊದಲಾದವರು ಅತಿಥಿಗಳಾಗಿ ಆಗಮಿಸಿದ್ದರು. ಶಹಝ್ ಅಪಾರ್ಟ್‌ಮೆಂಟ್ ಕೋರ್ಟ ಪಾಲುದಾರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ಕುಕ್ಕುವಳ್ಳಿ ಸ್ವಾಗತಿಸಿ ವಂದಿಸಿದರು. ಶಹಸ್ ಕೋರ್ಟ್ ಅಪಾರ್ಟಮೆಂಟ್‌ನ ಮಾಲಕ ಶರೀಫ್ ಕುಕ್ಕುಳ್ಳಿ ಅವರು ಮಾತನಾಡಿ ಕೂರ್ನಡ್ಕದ ಹೃದಯ ಭಾಗದಲ್ಲಿ ನೂತನವಾಗಿ ಪ್ರಾರಂಭಿಸಲಾದ ಶಹಝ್ ಅಪಾರ್ಟ್‌ಮೆಂಟ್ ಎಲ್ಲಾ ಸೌಕರ್ಯಗಳೊಂದಿಗೆ ಜನರ ಅವಶ್ಯಕತೆನುಸಾರವಾಗಿ ಸುಂದರವಾಗಿ ನಿರ್ಮಿಸಲಾಗಿದೆ. ಇಲ್ಲಿ ಎಲ್ಲಾ ಸೌಕರ್ಯ ಒಳಗೊಂಡಿದೆ ಎಂದು ಹೇಳಿ ಎಲ್ಲರ ಸಹಕಾರ ಯಾಚಿಸಿದರು.