ಕಡಬ: ಸೇವಾಪ್ರತಿನಿಧಿಗಳ ವಿಶೇಷ ಕಾರ್ಯಾಗಾರ

0

ವೃತ್ತಿ ಗೌರವದಿಂದ ಸಮಾಜದಲ್ಲಿ ಸ್ಥಾನಮಾನ: ಪ್ರವೀಣ್ ಕುಮಾರ್

ಕಡಬ: ಸಮಾಜದಲ್ಲಿ ಸೌಲಭ್ಶಗಳ ವಂಚಿತ ಕುಟುಂಬದೊಂದಿಗೆ ಬೆರೆತು ಯೋಜನೆಯ ಸೌಲಭ್ಶಗಳನ್ನು ದುರ್ಬಲರಿಗೆ ದೊರೆಯುವಂತೆ ಮಾಡಿ ಸಬಲರಾಗಿಸುವ ಯೋಜನೆಯ ಸೇವಾಪ್ರತಿನಿಧಿ ಕೆಲಸವು ಸಮಾಜಕ್ಕೆ ಮಾದರಿಯಾಗಬೇಕು, ಸೇವಾ ಪ್ರತಿನಿಧಿಯವರು ತಮ್ಮ ಗ್ರಾಮದಲ್ಲಿಯೇ ಪ್ರಾಮಾಣಿಕ ಸೇವೆ ನೀಡಿ ಜನರ ಪ್ರೀತಿಪಾತ್ರರಾದರೆ ಇದಕ್ಕಿಂತ ಹೆಚ್ಚಿನ ಗೌರವ ಬೇರೊಂದಿಲ್ಲ ಎಂದು ಯೋಜನೆಯ ಪುತ್ತೂರು ಜಿಲ್ಲಾ ವ್ಶಾಪ್ತಿಯ ನಿರ್ಧೇಶಕ ಪ್ರವೀಣ್ ಕುಮಾರ್ ಹೇಳಿದರು.


ಅವರು ಕಡಬದ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ತಾಲೂಕಿನ ಸೇವಾ ಪ್ರತಿನಿಧಿಗಳ ವಿಶೇಷ ಕಾರ್ಯಾಗಾರ ಉಧ್ಘಾಟಿಸಿ ಮಾತನಾಡಿದರು. ತಮ್ಮ ವೃತ್ತಿಯನ್ನು ಗೌರವಿಸಿದರೆ ಸಮಾಜದಲ್ಲಿ ಗುರುತಿಸುವಂತೆ ನಮ್ಮ ಪ್ರಾಮಾಣಿಕ ಕೆಲಸವೇ ಮಾಡುತ್ತದೆ. ಯೋಜನೆಯು ನಿಗದಿಪಡಿಸಿದ ಜವಾಬ್ದಾರಿಯನ್ನು ಶಿಸ್ತುಬದ್ದವಾಗಿ ನಿರ್ವಹಿಸಿದಾಗ ಆತ್ಮಶಾಂತಿಯ ಜೊತೆಗೆ ಕೌಟುಂಬಿಕ ನೆಮ್ಮದಿಯು ದೊರಕಲಿದೆ ಎಂದರು.

ತಾಲೂಕು ಯೋಜನಾಧಿಕಾರಿ ಮೇದಪ್ಪಗೌಡ ಯನ್. ಮಾತನಾಡಿ, ಆರ್ಥಿಕವಾಗಿ ಮತ್ತು ಅನಾರೊಗ್ಶದಿಂದ ಬಳಲುತ್ತಿರುವ ಕುಟುಂಬಗಳನ್ನು ಗುರುತಿಸಿ ಮಾಶಾಸನ ವಿಶೇಷ ಸಹಾಯಧನ ಹಾಗೂ ಸ್ವಸಹಾಯ ಸಂಘಗಳ ಮೂಲಕ ಬ್ಶಾಂಕ್ ವ್ಶವಹಾರದ ಆರ್ಥಿಕ ನೆರವು ನೀಡುವ ಸಲಹೆಗಳನ್ನು ನೀಡಿ ಸಮಸ್ಶೆಗೆ ಶೀಘ್ರ ಸ್ಪಂದನೆ ನೀಡುವ ಬಗ್ಗೆ ಅಗತ್ಶ ಮಾರ್ಗದರ್ಶನ ನೀಡಿದರು. ತಾಲೂಕು ಕಛೇರಿ ಹಣಕಾಸು ಪ್ರಬಂಧಕಿ ಸುಜಾತ ಜಿಲ್ಲಾ ಸಿ.ಎಸ್.ಸಿ. ನೊಡಲ್ ಅಧಿಕಾರಿ ಶ್ರೀ ರಾಮ್ ಹಾಗೂ ತಾಲೂಕಿನ ವಲಯ ಮೇಲ್ವೀಚಾರಕರು, ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳು ಕಛೇರಿ ಸಹಾಯಕರುಗಳು ಉಪಸ್ಥಿತರಿದ್ದರು. ಕಡಬ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರ್ವಹಿಸಿದರು. ತಾಲೂಕಿನ 60 ಸೇವಾ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here