ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ ಹಾಗೂ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ಇವರ ಸಂಯುಕ್ತ ಆಶ್ರಯದಲ್ಲಿ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ಇಲ್ಲಿ ನಡೆದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಬಹುಮಾನ ಪಡೆದಿರುತ್ತಾರೆ.
ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಶೃಜನ್ ಜೆ ರೈ ( ಜಗನ್ಮೋಹನ ರೈ ಮತ್ತು ಜಲಜಾ ರೈ ದಂಪತಿಗಳ ಪುತ್ರ)- ಪ್ರಥಮ ಸ್ಥಾನ, ರಿತೇಶ್ ನಾಯಕ್ (ರಾಜೇಶ್ ನಾಯಕ್ ಮತ್ತು ಸಂಧ್ಯಾ ನಾಯಕ್ ದಂಪತಿಗಳ್ ಪುತ್ರ) ಚತುರ್ಥ ಸ್ಥಾನ ಪಡೆದುಕೊಂಡಿದ್ದಾರೆ. ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಪ್ರಜ್ಞಾ ನಿಡ್ವಣ್ಣಾಯ (ರಾಮಗೋಪಾಲ ನೂಜಾಜೆ ಮತ್ತು ಪೂರ್ಣಿಮಾ ನೂಜಾಜೆ ದಂಪತಿಗಳ ಪುತ್ರಿ) ಸಾಧನಾ (ಚಂದ್ರಶೇಖರ ಮತ್ತು ಅಮುದಾ ದಂಪತಿಗಳ ಪುತ್ರಿ) ಆಶ್ರೀತಾ (ಶೀನಪ್ಪ ಪೂಜಾರಿ ಮತ್ತು ರಾಜೀವಿ ದಂಪತಿಗಳ ಪುತ್ರಿ) ಧನ್ಯ (ಬಾಲಕೃಷ್ಣ ಮತ್ತು ರೇಣುಕಾ ದಂಪತಿಗಳ ಪುತ್ರಿ) ದೀಕ್ಷಿತಾ(ದೇವಪ್ಪ ಗೌಡ ಮತ್ತು ಹೇಮಾವತಿ ದಂಪತಿಗಳ ಪುತ್ರಿ) ಇವರ ತಂಡ ಸಮಗ್ರ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ರಿದಮಿಕ್ ಯೋಗದಲ್ಲಿ ಪಿ ಕವಿತಾ ಕುಮಾರಿ (ಈಶ್ವರ ನಾಯ್ಕ ಮತ್ತು ಕುಸುಮಾವತಿ ದಂಪತಿಗಳ ಪುತ್ರಿ) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಹೃತಿಕ್ ನಾಯಕ್ (ರಾಜೇಶ್ ನಾಯಕ್ ಮತ್ತು ಸಂಧ್ಯಾ ನಾಯಕ್) ಪಂಚಮ ಸ್ಥಾನ, ರಿದಮಿಕ್ ಯೋಗದಲ್ಲಿ ಮುಕುಂದ ಎಸ್ (ಅರವಿಂದ ಎಸ್ ಮತ್ತು ಪವಿತ್ರಾ ಕೆ ದಂಪತಿಗಳ ಪುತ್ರ) ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಕರಣ್ ಗೌಡ (ಫಕೀರ ಗೌಡ ಮತ್ತು ಗುಲಾಬಿ ದಂಪತಿಗಳ ಪುತ್ರ), ನಿಶಾಂತ್ ಹೆಚ್ ಸಿ (ಚಂದ್ರಶೇಖರ ಮತ್ತು ಸವಿತಾ ದಂಪತಿಗಳ ಪುತ್ರ), ರಂಜಿತ್ ಕುಮಾರ್ (ಸುಂದರ ಪಿ ಮತ್ತು ವಿನೋದ ಕೆ ದಂಪತಿಗಳ ಪುತ್ರ) ಇವರ ತಂಡ ಸಮಗ್ರ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಗೆ ಶಾಲಾ ಯೋಗ ಶಿಕ್ಷಕರಾದ ರಂಗಪ್ಪ ಮತ್ತು ಅನುರಾಧ ತರಬೇತಿ ನೀಡಿರುತ್ತಾರೆ.