ಪುತ್ತೂರು: ಬನ್ನೂರು ಕೃಷ್ಣನಗರ ಸಮೀಪದಲ್ಲಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆ.30 ರಂದು “ರಕ್ಷಾಬಂಧನ” ಕಾರ್ಯಕ್ರಮ ಆಚರಿಸಲಾಯಿತು.
ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಶೇಖರ ನಾರಾವಿಯವರು ರಕ್ಷಾಬಂಧನದ ಮೌಲ್ಯಗಳನ್ನು ತಿಳಿಸಿ ಪುಟಾಣಿ ಮಕ್ಕಳ ಕೈಯಲ್ಲಿ ರಕ್ಷೆಯನ್ನು ಕಟ್ಟಿಸಿ, ಸಿಹಿ ತಿಂಡಿ ನೀಡಿ ಮಕ್ಕಳಿಗೆ ಆಶೀರ್ವಾದಿಸಿ, ಮುಂದೆ ಈ ಒಂದು ಪುಟ್ಟ ಸಂಸ್ಥೆಯು ಒಂದು ಉತ್ತಮ ವಿದ್ಯಾಸಂಸ್ಥೆಯಾಗಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಇವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥೆಯ ಸಂಚಾಲಕ ಎ.ವಿ ನಾರಾಯಣ ಅವರು ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಉಮೇಶ್ ಮಳುವೇಲು ಹಾಗೂ ಸಂಸ್ಥೆಯ ಖಜಾಂಚಿ ವನಿತಾ ಎ.ವಿ., ನಿರ್ದೇಶಕರಾದ ಗಂಗಾಧರ ಗೌಡ ಎ.ವಿ., ಶಿಕ್ಷಕ-ರಕ್ಷಕ ಸಂಘದ ಸದಸ್ಯ ಪ್ರೇಮಚಂದ್ರ, ಸಂಸ್ಥೆಯ ಸಹಾಯಕ ನಾರಾಯಣ ಕುಲಾಲ್, ಭುವನೇಶ್ವರಿ, ಅಶ್ವಿನಿ ಹಾಗೂ ಪುಟಾಣಿ ಮಕ್ಕಳು ಉಪಸ್ಥಿತಿಯಲ್ಲಿದ್ದರು. ಶಾಲೆಯ ಪುಟಾಣಿಯರಾದ ನಿಷ್ಕಾ, ತನಿಷ್ಕ ಮತ್ತು ಶಿವಾನಿ ಇವರು ಪ್ರಾರ್ಥನೆ ನಡೆಸಿದರು, ಸಂಸ್ಥೆಯ ಪ್ರಾಂಶುಪಾಲೆ ಉಷಾ ಕಿರಣ ಕೆ.ಯಸ್ ಸ್ವಾಗತಿಸಿದರು, ಶಿಕ್ಷಕಿಯರಾದ ವನಿತಾ ವಂದಿಸಿದರು, ಯಶುಭ ರೈ ಕಾರ್ಯಕ್ರಮವನ್ನು ನಿರೂಪಿಸಿದರು.