ಪುತ್ತೂರು: ಅರಿಯಡ್ಕ ಗ್ರಾಮದ ಪಾಪೆಮಜಲು ಎಂಬಲ್ಲಿ ವಾಸವಾಗಿರುವ ಬಿ.ಎ ಪದವೀಧರೆಯಾಗಿರುವ ವಿಕಲ ಚೇತನೆ ಚೈತ್ರಾರವರಿಗೆ ವಿಕಲಚೇತನದ ಅನುದಾನದಡಿಯಲ್ಲಿ ಲ್ಯಾಪ್ಟಾಪ್ ನೀಡುವಂತೆ ಕುಂಬ್ರ ವರ್ತಕರ ಸಂಘದಿಂದ ಅರಿಯಡ್ಕ ಗ್ರಾಪಂಗೆ ಮನವಿ ನೀಡಲಾಯಿತು. ಚೈತ್ರಾರವರ ವಿದ್ಯಾಭ್ಯಾಸಕ್ಕಾಗಿ ಕುಂಬ್ರ ವರ್ತಕರ ಸಂಘದಿಂದ ಧನಸಹಾಯ ನೀಡಲಾಗುತ್ತಿತ್ತು ಇದೀಗ ಚೈತ್ರಾರವರು ಬಿ.ಎ ಪದವೀಧರೆಯಾಗಿದ್ದು ಕಂಪ್ಯೂಟರ್ ಶಿಕ್ಷಣವನ್ನು ಕೂಡ ಕಲಿತಿದ್ದಾರೆ. ಅವರಿಗೆ ಮನೆಯಿಂದಲೇ ಸ್ವ ಉದ್ಯೋಗ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಅರಿಯಡ್ಕ ಗ್ರಾಪಂನ ವಿಕಲಚೇತನದ ಅನುದಾಡಿಯಲ್ಲಿ ಲ್ಯಾಪ್ಟಾಪ್ ನೀಡುವಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪದ್ಮ ಕುಮಾರಿ ಹಾಗೂ ಅಧ್ಯಕ್ಷ ಸಂತೋಷ್ ಮಣಿಯಾಣಿಯವರಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್ರಾಯ , ಸ್ಥಾಪಕ ಅಧ್ಯಕ್ಷ ಶ್ಯಾಮಸುಂದರ ರೈ ಕೊಪ್ಪಳ, ಮಾಜಿ ಅಧ್ಯಕ್ಷರುಗಳಾದ ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ಕೋಶಾಧಿಕಾರಿ ಸಂಶುದ್ದೀನ್ ಎ.ಆರ್. ಉಪಾಧ್ಯಕ್ಷ ಉದಯ ಆಚಾರ್ಯ ಹಾಗೂ ಅರಿಯಡ್ಕ ಗ್ರಾಪಂ ಸದಸ್ಯ ಹರೀಶ್ ರೈ ಜಾರತ್ತಾರ ಹಾಗೂ ಚೈತ್ರಾ ಅವರ ತಾಯಿ ಉಪಸ್ಥಿತರಿದ್ದರು.