ಸಂಸದ ನಳಿನ್ ಕುಮಾರ್ ಕಟೀಲ್ ,ಶಾಸಕಿ ಭಾಗೀರಥಿ ಮುರುಳ್ಯ ಭಾಗಿ
ಸವಣೂರು: ಪಾಲ್ತಾಡಿ ಗ್ರಾಮದ ಬಂಬಿಲ ಶ್ರೀಮಹಮ್ಮಾಯಿ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಕುರಿತು ಸಭೆಯು ದೇವಸ್ಥಾನದ ಆವರಣದಲ್ಲಿ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದ ರೀತಿಯಲ್ಲಿ ನಡೆಯಬೇಕು.ಕ್ಷೇತ್ರದ ಜೀರ್ಣೋದ್ಧಾರ ಕಾರ್ಯವು ಅತೀ ಶೀಘ್ರದಲ್ಲಿ ನೆರವೇರಲು ಎಲ್ಲರೂ ಕೈಜೋಡಿಸಬೇಕು. ಕ್ಷೇತ್ರವು ಅಭಿವೃದ್ಧಿಯಾದಾಗ ಊರಿಗೆ ಶ್ರೇಯಸ್ಸು ಎಂದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಎಲ್ಲರೂ ಶ್ರದ್ದಾಪೂರ್ವಕವಾಗಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಕೊಳ್ಳಬೇಕು.ಎಲ್ಲರೂ ಜವಾಬ್ದಾರಿ ತೆಗದುಕೊಂಡು ದೇವಸ್ಥಾನ ಬೇಗ ಜೀರ್ಣೋದ್ಧಾರಗೊಳ್ಳುವಲ್ಲಿ ಶ್ರಮಿಸಬೇಕು.ಊರಿನ ಹಾಗೂ ಪರವೂರಿನ ಎಲ್ಲಾ ಆಸ್ತಿಕ ಬಂಧುಗಳು ಸೇರಿಕೊಂಡು ದೇವಸ್ಥಾನದ ನಿರ್ಮಾಣವಾಗಲಿ ಎಂದರು.
ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್, ಹಿರಿಯರಾದ ಬಿ.ಕೆ.ರಮೇಶ್,ಕ್ಷೇತ್ರದ ಮೊಕ್ತೇಸರ ಬಲ್ಲು ಬಂಬಿಲ ,ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕುಶಾಲಪ್ಪ ,ಜಯರಾಮ ಭಟ್ ಬೆಟ್ಟ ,ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಸುರೇಶ್ ರೈ ಸೂಡಿಮುಳ್ಳು, ಶಿವರಾಮ ಗೌಡ ಮೆದು,ಹರೀಶ್ ಕುತ್ತಾರು, ಬಾಳಪ್ಪ ಪೂಜಾರಿ ಬಂಬಿಲದೋಳ,ಯೋಗೀಶ್ ಪೂಜಾರಿ ಶಾಂತಿಗೋಡು, ಸುಪ್ರಿತ್ ರೈ ಖಂಡಿಗ,ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ.,ಮಾಜಿ ಉಪಾಧ್ಯಕ್ಷ ರಾದ ಕಿಟ್ಟಣ್ಣ ರೈ ನಡುಕೂಟೇಲು, ಶೀನಪ್ಪ ಶೆಟ್ಟಿ ನೆಕ್ರಾಜೆ,ಸದಸ್ಯರಾದ ಗಿರಿಶಂಕರ ಸುಲಾಯ, ಸತೀಶ್ ಅಂಗಡಿಮೂಲೆ, ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಕುಂಬ್ರ ದಯಾಕರ ಆಳ್ವ , ರಾಮಕೃಷ್ಣ ಪ್ರಭು ಸವಣೂರು, ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ, ದೀಕ್ಷಿತ್ ಜೈನ್ ಚೆನ್ನಾವರ, ಪ್ರವೀಣ್ ಬಂಬಿಲದೋಳ,ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಸತ್ಯ ಕುಮಾರ್ ಬಿ.ಎನ್.,ಕೋಶಾಧಿಕಾರಿ ಬಾಬು ಬಿ. ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.
ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ರಚಿಸಲಾಯಿತು. ಗುರುರಾಜ್ ಬಂಬಿಲ ಪ್ರಾರ್ಥಿಸಿದರು.ಶಶಿ ಕುಮಾರ್ ಬಿ.ಎನ್.ಸ್ವಾಗತಿಸಿ, ವಂದಿಸಿದರು.ಕೃಷ್ಣಪ್ಪ ಬಂಬಿಲ
ಕಾರ್ಯಕ್ರಮ ನಿರೂಪಿಸಿದರು.