ಪುತ್ತೂರು ಬಿಲ್ಲವ ಸಂಘದಿಂದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀಜಿಯವರ 169ನೇ ಜನ್ಮ ದಿನಾಚರಣೆ

0

ನಾರಾಯಣಗುರುಗಳು ನಮ್ಮ ಉಸಿರು, ಅವರೇ ಶಕ್ತಿ-ಡಾ. ನಾರಾಯಣ ಪೂಜಾರಿ

ಪುತ್ತೂರು: ನಾರಾಯಣಗುರುಗಳು ಅದ್ಭುತ ಶಕ್ತಿ, ಚೇತನ ಹಾಗೂ ನಮ್ಮ ಉಸಿರು. ನಾರಾಯಣಗುರುಗಳ ತತ್ವ, ಸಿದ್ಧಾಂತಗಳನ್ನು ಪ್ರಾಮಾಣಿಕವಾಗಿ, ಆತ್ಮಸಾಕ್ಷಿಯಾಗಿ ನಮ್ಮ ಜೀವನದಲ್ಲಿ ಪಾಲನೆ ಮಾಡಬೇಕಾಗಿದೆ ಎಂದು ಮೂಲ್ಕಿ ವಿಜಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ರಸಾಯನ ಶಾಸ್ತ್ರ ಪ್ರಾಧ್ಯಾಪಕರಾದ ಡಾ.ಕೆ.ನಾರಾಯಣ ಪೂಜಾರಿಯವರು ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ವತಿಯಿಂದ ಆ.31ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 169ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಗುರುಸಂದೇಶ ನೀಡುತ್ತಾ ಮಾತನಾಡಿದರು. ಜಾತಿ ಪಿಡುಗನ್ನು ಹೋಗಲಾಡಿಸಿದ ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬಂತೆ ಅವರ ಧ್ಯೇಯದೊಂದಿಗೆ ಜೀವಿಸಿದಾಗ ನಮಗೆ ಸಮಾಜದಲ್ಲಿ ಸಹಬಾಳ್ವೆ ಮತ್ತು ಶಾಂತಿಯುತವಾಗಿ ನೆಲೆಸಲು ಸಹಕಾರಿಯಾಗುತ್ತದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ಧೇಶದಿಂದ ಶಿಕ್ಷಣ ಸಂಸ್ಥೆಗಳನ್ನು ತೆರೆದು ಸಾಕ್ಷರತರನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಾತು ಕಡಿಮೆ, ಹೆಚ್ಚು ದುಡಿಮೆ ಎಂಬಂತೆ ನಾರಾಯಣಗುರುಗಳು ಸಮಾಜದ ಉನ್ನತಿಗೆ ಶ್ರಮಿಸಿದವರಾಗಿದ್ದಾರೆ ಎಂದರು.

ವ್ಯಕ್ತಿಯನ್ನು ಸ್ವತಂತ್ರವಾಗಿ ಬೆಳೆಸಿದಾಗ ಸಮಾಜದಲ್ಲಿ ವಿಶೇಷ ಸ್ಥಾನಮಾನ-ಸತೀಶ್ ಕೆಡೆಂಜಿ:
ಅಧ್ಯಕ್ಷತೆ ವಹಿಸಿದ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಯಾವುದೇ ಸಂಕಷ್ಟ ಸಂದರ್ಭ ಎದುರಾದರೂ ಹಿರಿಯರು ಈ ನಮ್ಮ ಬಿಲ್ಲವ ಸಂಘವನ್ನು ಕಟ್ಟಿ ಬೆಳೆಸಿರುತ್ತಾರೆ. ಸಮುದಾಯಲ್ಲಿನ ಸಮಾಜ ಬಾಂಧವರು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಬೇಕು ಎನ್ನುವಂತೆ ಈ ಸಂಘವು ಮುಂದಡಿಯಿಡುತ್ತಿದೆ. ಓರ್ವ ವ್ಯಕ್ತಿಯನ್ನು ಸ್ವತಂತ್ರವಾಗಿ ಬೆಳೆಸಿದರೆ ಮಾತ್ರ ಆತ ಸಮಾಜದಲ್ಲಿ ವಿಶೇಷ ಸ್ಥಾನಮಾನ ಪಡೆಯುತ್ತಾನೆ. ಗುರುಜಯಂತಿ ಸಂದರ್ಭ ಸುಮಾರು 2500 ಸಾವಿರ ಗುರುಪೂಜೆ ಆಗಿರುವುದು ಸಂಘದ ಒಗ್ಗಟ್ಟು ಎತ್ತಿ ತೋರಿಸುತ್ತದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಜವಾಬ್ದಾರಿ ಅರಿತುಕೊಂಡು ಕಲಿತು ಸಾಧನೆ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವಂತಾಗಬೇಕು ಎಂದರು.

ಜ್ಞಾನವನ್ನು ಉಪಯೋಗಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಬೆಳೆಯುವವರಾಗಿ-ಡಾ.ಗೀತಾಪ್ರಕಾಶ್:
ಲಯನ್ಸ್ ಜಿಲ್ಲೆ 317ಡಿ ಇದರ ಪೂರ್ವ ರಾಜ್ಯಪಾಲ ಡಾ.ಗೀತಪ್ರಕಾಶ್ ವಿಟ್ಲ ಮಾತನಾಡಿ, ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬ ನಾರಾಯಣ ಗುರುಗಳ ತತ್ವವು ಇಂದು ಈ ವೇದಿಕೆಯಲ್ಲಿ ಶಿಕ್ಷಣದಲ್ಲಿ ಸಾಧನೆ ಗಳಿಸಿದವರನ್ನು ಅಭಿನಂದನೆ ಮಾಡಿರುವುದು ಸಾಕ್ಷಿಯಾಗಿದೆ. ಊಟ ಮಾಡಿದರೆ ಹಸಿವು ನೀಗುತ್ತದೆ ಎಂಬ ಜ್ಞಾನದಂತೆ ನಮ್ಮಲ್ಲಿರುವ ಜ್ಞಾನದ ಅನುಷ್ಠಾನವಾಗಬೇಕಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ನಮ್ಮ ಸಮಾಜ ಬಾಂಧವರು ಸಂಘಟಿತರಾಗಬೇಕು, ರಾಷ್ಟ್ರಮಟ್ಟದಲ್ಲಿ ನಾಯಕರು ಉದ್ಭವವಾಗಬೇಕು. ಸನ್ಮಾನಿತ ವಿದ್ಯಾರ್ಥಿಗಳು ಮುಂದಿನ ದಿನ ಬಿಲ್ಲವ ಸಂಘದೊಡನೆ ಸೇರಿಕೊಂಡು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವಂತಾಗಬೇಕು ಎಂದರು.

ಪರಸ್ಪರ ಕೈ ಜೋಡಿಸಿದಾಗ ಬಾಂಧವ್ಯ ವೃದ್ಧಿ-ರಾಜೇಶ್ ಬಿ:
ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ರಾಜೇಶ್ ಬಿ.ಮಾತನಾಡಿ, ಯುವವಾಹಿನಿ ಧ್ಯೇಯವಾಕ್ಯವೆನಿಸಿದ ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಮೂಲ ಆಶಯದೊಂದಿಗೆ ನಾರಾಯಣ ಗುರುಗಳ ತತ್ವ ಹಾಗೂ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡು ನಾವು ಮುಂದೆ ಸಾಗಬೇಕಿದೆ. ಸಂಘದ ಸದಸ್ಯರ ತನು-ಮನ-ಧನಗಳ ಸಹಕಾರದೊಂದಿಗೆ ಕೈಜೋಡಿಸುವ ಮೂಲಕ ಸಂಘವು ಬೆಳೆದು ಬಂದಿರುತ್ತದೆ ಮಾತ್ರವಲ್ಲ ಪರಸ್ಪರ ಬಾಂಧವ್ಯದ ಬೆಸುಗೆ ವೃದ್ಧಿಯಾಗುತ್ತಿದೆ. ಸಂಘವು ಸದೃಢವಾಗಿ ಬೆಳೆಯಬೇಕಾದರೆ ತನ್ನ ಗ್ರಾಮ ಸಮಿತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಗಿದಾಗ ಸಾಧ್ಯವಾಗುತ್ತದೆ ಎಂಬುದಕ್ಕೆ ಪುತ್ತೂರು ಬಿಲ್ಲವ ಸಂಘ ಉದಾಹರಣೆಯಾಗಿದೆ ಎಂದರು.

ಕಾರ್ಯಕಾರಿ ಸಮಿತಿಗೆ ಆಯ್ಕೆಯಾದವರಿಗೆ ಗೌರವ:
2023-24ನೇ ಸಾಲಿನ ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ಆಯ್ಕೆಯಾಗಿರುವ ಪಿ.ಆನಂದ ಟೈಲರ್, ಪಿ.ಆನಂದ ಪೂಜಾರಿ, ಶೀನಪ್ಪ ಪೂಜಾರಿ, ಜಯರಾಮ ಕರ್ಮಲ, ಅವಿನಾಶ್ ಹಾರಾಡಿ, ವೇದಾವತಿ, ಸಂಗೀತಾ ಮನೋಹರ್, ಜಯಲಕ್ಷ್ಮೀ ಸುರೇಶ್ ಕೇಪುಳು, ದೇವಿಕಾ ಬನ್ನೂರು, ವಲಯ ಸಂಚಾಲಕರಾದ ಕಿರಣ್ ಕುಮಾರ್ ಬಲ್ನಾಡು(ಪುತ್ತೂರು ನಗರ), ಅಣ್ಣಿ ಪೂಜಾರಿ ಅನಂತಿಮಾರ್(ಪುತ್ತೂರು ಗ್ರಾಮಾಂತರ), ಅಶೋಕ್ ಕುಮಾರ್ ಪಡ್ಪು(ಉಪ್ಪಿನಂಗಡಿ), ಡಾ.ಸದಾನಂದ ಕುಂದರ್(ನೆಲ್ಯಾಡಿ), ಮಾಧವ ಪೂಜಾರಿ ರೆಂಜ(ಆರ್ಯಾಪು), ಜಯಂತ್ ಕೆಂಗುಡೇಲು(ಕುಂಬ್ರ), ಯತೀಶ್ ಪೂಜಾರಿ ಕಾವು(ಬಡಗನ್ನೂರು), ಶಿವಕುಮಾರ್ ಆನಡ್ಕ(ನರಿಮೊಗರು), ಸಂತೋಷ್ ಪೂಜಾರಿ ಮರಕ್ಕಡ(ಸವಣೂರು), ದಯಾನಂದ ಆಲಂಕಾರು(ಆಲಂಕಾರು), ಸುಂದರ ಪೂಜಾರಿ ಅಂಗಣ(ಕಡಬ), ಸತೀಶ್ ಕೆ.ಐತೂರು, ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳಾದ ಮಹಿಳಾ ಘಟಕದ ಅಧ್ಯಕ್ಷೆ ವಿಮಲ ಸುರೇಶ್, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ಬಾಯಾರು, ಯುವವಾಹಿನಿ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಮನೋಹರ್ ಕುಮಾರ್, ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿ, 51 ವಿವಿಧ ಗ್ರಾಮ ಸಮಿತಿ ಅಧ್ಯಕ್ಷರಾದ ಕೇಶವ ಪೂಜಾರಿ ಬೆದ್ರಾಳ(ಪುತ್ತೂರು ನಗರ), ಚಂದ್ರಶೇಖರ(ಬಲ್ನಾಡು), ಚಂದಪ್ಪ ಪೂಜಾರಿ(ಬುಳೇರಿಕಟ್ಟೆ), ಕೇಶವ ಪಿ(ಕೊಡಿಪ್ಪಾಡಿ), ಪ್ರಕಾಶ್ ಪೂಜಾರಿ(ಕೆಮ್ಮಿಂಜೆ), ವಾಸು ಕೆ(ಪಡ್ನೂರು), ಭಾಸ್ಕರ ಬಿ(ಚಿಕ್ಕಮುಡ್ನೂರು), ವಸಂತ ಪೂಜಾರಿ(ಬೆಳ್ಳಿಪ್ಪಾಡಿ), ಜಯಪ್ರಕಾಶ್ ಕೆ(ಕೋಡಿಂಬಾಡಿ), ವಸಂತ ಪೂಜಾರಿ(ಕಬಕ), ವಸಂತ ಕುಕ್ಕುಜೆ(ಉಪ್ಪಿನಂಗಡಿ), ನವೀನ್ ಪಿ(ಹಿರೇಬಂಡಾಡಿ), ಸೋಮಸುಂದರ(ಬಜತ್ತೂರು), ಅಜಿತ್ ಕುಮಾರ್(ಗೋಳಿತೊಟ್ಟು), ಮಾಧವ ಪೂಜಾರಿ(ಶಿರಾಡಿ), ಶ್ರೀನಿವಾಸ ಸಿ(ಇಚ್ಲಂಪಾಡಿ), ಮೋಹನ್ ಕುಮಾರ್(ನೆಲ್ಯಾಡಿ), ರವಿ ಸುವರ್ಣ(ಆರ್ಯಾಪು), ಶಶಿಧರ್ ಕಿನ್ನಿಮಜಲು(ಕುರಿಯ), ಚಿದಾನಂದ ಸುವರ್ಣ(ಕುಂಜೂರುಪಂಜ), ವಿಠಲ ಪೂಜಾರಿ(ಬೆಟ್ಟಂಪಾಡಿ), ವಿಶ್ವನಾಥ ಪೂಜಾರಿ(ಪಾಣಾಜೆ), ರಮೇಶ್ ಪೂಜಾರಿ(ನಿಡ್ಪಳ್ಳಿ), ಉಮೇಶ್ ಕುಮಾರ್(ಒಳಮೊಗ್ರು), ಬಾಲಕೃಷ್ಣ ಪಿ(ಕೆಯ್ಯೂರು), ಬಾಲಪ್ಪ ಸುವರ್ಣ(ಕೆದಂಬಾಡಿ), ಲಿಂಗಪ್ಪ ಪೂಜಾರಿ(ಕೊಳ್ತಿಗೆ), ಭರತ್ ಪೂಜಾರಿ(ಅರಿಯಡ್ಕ), ಕರುಣಾಕರ್ ಸಾಲ್ಯಾನ್(ಪಾಲ್ತಾಡಿ), ಜನಾರ್ದನ ಪೂಜಾರಿ(ಸುಳ್ಯಪದವು), ನಾರಾಯಣ ಪೂಜಾರಿ(ನೆಟ್ಟಣಿಗೆ ಮುಡ್ನೂರು), ಮೋನಪ್ಪ ಪೂಜಾರಿ(ಕಾವು), ವೇದನಾಥ ಸುವರ್ಣ(ನರಿಮೊಗರು), ವಿನಯ ಜಿ(ಆನಡ್ಕ), ರವಿಕುಮಾರ್ ಕೆ(ಶಾಂತಿಗೋಡು), ರಾಮಕೃಷ್ಣ ಎಸ್.ಡಿ(ಸರ್ವೆ), ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್(ಮುಂಡೂರು), ಸತೀಶ್ ಕುಮಾರ್ ಕೆಡೆಂಜಿ(ಕುದ್ಮಾರು), ಗಂಗಾಧರ ಸುಣ್ಣಾಟೆ(ಸವಣೂರು), ದಿನೇಶ್ ಕೇಪುಳು(ಆಲಂಕಾರು), ಪುರುಷೋತ್ತಮ(ಹಳೇನೇರಂಕಿ), ವೇಣುಗೋಪಾಲ್ ಪೂಜಾರಿ(ರಾಮಕುಂಜ), ಹರ್ಷಿತ್ ಮಾಯಿಲ್ಗ(ಪೆರಾಬೆ), ಹರೀಶ್(ಬಲ್ಯ), ಲಕ್ಷ್ಮೀಶ ಬಂಗೇರ(ಕಡಬ), ಸುರೇಶ್ ಎಸ್(ಕೋಡಿಂಬಾಳ), ವಸಂತ ಪೂಜಾರಿ(ನೂಜಿಬಾಳ್ತಿಲ), ಸಂಜೀವ ಪೂಜಾರಿ(ರೆಂಜಿಲಾಡಿ), ಧನಂಜಯ(ಬಂಟ್ರ-ಐತೂರು-೧೦೨ ನೆಕ್ಕಿಲಾಡಿ), ನೋಣಯ್ಯ ಕೆ(ಕೊಂಬಾರು)ರವರುಗಳನ್ನು ಗುರುತಿಸಿ ಗೌರವಿಸಲಾಯಿತು.

ಮಾಜಿ ಅಧ್ಯಕ್ಷರುಗಳಿಗೆ/ನಿ.ಪೂರ್ವ ಪದಾಧಿಕಾರಿಗಳಿಗೆ ಗೌರವ:
ಸಂಘದ ಅಧ್ಯಕ್ಷರಾಗಿ ಸಂಘವನ್ನು ಮುನ್ನೆಡೆಸಿಕೊಂಡು ಬಂದಿರುವ ಮಾಜಿ ಅಧ್ಯಕ್ಷರುಗಳಾದ ಬಾಳಪ್ಪ ಪೂಜಾರಿ ಕೇಪುಳು, ಕೆ.ಪಿ ದಿವಾಕರ್, ಜಯಂತ್ ನಡುಬೈಲು, ವಿಜಯ ಕುಮಾರ್ ಸೊರಕೆರವರುಗಳನ್ನು ಹಾಗೂ ಬಿಲ್ಲವ ಸಂಘದ ನಿಕಟಪೂರ್ವ ಪದಾಧಿಕಾರಿಗಳಾದ ಡಾ.ಸದಾನಂದ ಕುಂದರ್(ಉಪಾಧ್ಯಕ್ಷ), ಚಂದ್ರಕಲಾ ಮುಕ್ವೆ(ಉಪಾಧ್ಯಕ್ಷೆ), ಹೊನ್ನಪ್ಪ ಪೂಜಾರಿ ಕೈಂದಾಡಿ(ಗುರುಮಂದಿರ ಕಾರ್ಯನಿರ್ವಹಣಾಧಿಕಾರಿ), ಮನೋಹರ್(ವಿದ್ಯಾನಿಧಿ ಸಂಚಾಲಕ)ರವರುಗಳನ್ನು ಗುರುತಿಸಿ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ:
ಎಸೆಸ್ಸೆಲ್ಸಿ ಸಾಧಕರಾದ ಹಿಮಾನಿ ಎ.ಸಿ, ಆತ್ಮಿ ಕೆ, ಗ್ರೀಷ್ಮಾ ಡಿ, ಅಶ್ವಿತಾ, ಜ್ಯೋತ್ಸ್ನಾ,ಮಾನ್ವಿತಾ ಎಸ್., ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಾಧಕರಾದ ಸಂಜನಾ ಕೆ, ಅರ್ಪಿತಾ ಎ, ಯಜ್ಞಶ್ರೀ ಜೆ.ಜೆ, ಆಶಿಕಾ ಜಿ, ಶ್ರಾವ್ಯ, ದೃಶ್ಯ ಡಿ.ಕೆ, ಕೃತಿಕಾ ಎ, ತೇಜಸ್, ರಿಶಿತಾ ಸಿ.ಸನಿಲ್, ಶ್ರೀಮಾ ಅಂಚನ್, ಆಶೀಶ್ ಕುಮಾರ್ ಬಿ, ಪ್ರತೀಕ ಎ, ಕೀರ್ತಿಕಾ ಎ, ರಿತೇಶ್ ಬಿ, ರಶ್ಮಿ ಎಸ್.ಎಸ್, ದಿಶಾ ಕೆ, ಬಿ.ಪಿ ಸಪ್ತಮಿ, ಮನೀಷ್, ಮಾನ್ಯ ಸಿ.ಎಸ್, ರಕ್ಷಿತಾ ಕೆ., ಪದವಿ ಪರೀಕ್ಷೆಯಲ್ಲಿ ಅಭಿಷೇಕ್, ಪೂಜಾಲಕ್ಷ್ಮೀ ಸಿ.ಎಸ್, ಯುಕ್ತ ಜಗನ್ನಾಥ್, ತ್ರಿಷಾ ಎನ್.ಎಸ್, ಅಕ್ಷತ ಕೆ, ಲಿಖಿನ್, ಅಮಿತ ವಿ.ಎಂ., ಸ್ನಾತಕೋತ್ತರ ಪದವಿಯಲ್ಲಿ ದೀಪಾ ಸಿ, ಶೋಷನ್ ಕುಮಾರ್, ಸೋನಾಲ್ ಯು.ಜಿ, ಅನೂಪ್ ಕೆ.ವಿರವರುಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ರಾಜ್ಯ/ರಾಷ್ಟ್ರಮಟ್ಟದ ಸಾಧಕರಿಗೆ ಅಭಿನಂದನೆ:
ಸಮಾಜ ಬಾಂಧವರಾಗಿದ್ದು ವಿವಿಧ ಕ್ರೀಡೆಗಳಲ್ಲಿ ಪ್ರಜ್ವಲಿಸಿದ ಶ್ರೇಯಸ್(ತ್ರೋಬಾಲ್), ಶ್ರೇಯಾ ಸಿ.ಪಿ(ನೃತ್ಯ, ಸಂಗೀತಾ, ಕೀಬೋರ್ಡ್, ಕವನ ರಚನೆ, ಚಿತ್ರಕಲೆ), ಖುಷಿ ಬಿ.ಎಸ್(ಖೋ ಖೋ, ಯಕ್ಷಗಾನ, ಜಾನಪದ ನೃತ್ಯ, ಕಬಡ್ಡಿ, ವಾಲಿಬಾಲ್), ಭವಿತ್ ಕುಮಾರ್(ಪೋಲ್ ವಾಲ್ಟ್), ಚೈತನ್ಯ ಎಂ.ಎಸ್(ಹರ್ಡಲ್ಸ್), ಸಾನ್ವಿ ಎಸ್.ಪಿ(ರಾಷ್ಟ್ರೀಯ ವಿಜ್ಞಾನ ಅಧಿವೇಶನ)ರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

ಟಾಪರ್‌ರವರಿಗೆ ಪ್ರತಿಭಾ ಪುರಸ್ಕಾರ:
ಎಸೆಸ್ಸೆಲ್ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಟಾಪರ್ ಎನಿಸಿದ ದೀಪಾ ಪಿ(ಎಂಟೆಕ್), ಅಭಿಷೇಕ್ ಎ(ಪದವಿ), ಸಂಜನಾ ಕೆ(ಪಿಯುಸಿ), ಅರ್ಪಿತಾ ಎ.ಸಿ(ಎಸೆಸ್ಸೆಲ್ಸಿ), ಹಿಮಾನಿ ಎ.ಸಿ(ಎಸೆಸ್ಸೆಲ್ಸಿ), ಆತ್ಮಿ ಕೆ(ಎಸೆಸ್ಸೆಲ್ಸಿ)ರವರಯಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಜನಾರ್ದನ ಪದಡ್ಕರವರು ಪುರಸ್ಕೃತರ ಪರಿಚಯ ಮಾಡಿದರು.

ಹಿರಿಯ ಸಾಧಕರಿಗೆ ಗೌರವ:
ಸಮಾಜ ಬಾಂಧವರಾಗಿದ್ದು, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ಇಲ್ಲಿ ತೋಟದ ಬೆಳೆಗಳು, ಸಾಂಬಾರ ಔಷಧೀಯ ಮತ್ತು ಸುಗಂಧ ದ್ರವ್ಯ ಬೆಳೆಗಳ ವಿಜ್ಞಾನ ವಿಭಾಗದ ಎಂ.ಎಸ್ಸಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ ನರಿಮೊಗರು ಕೈಪಂಗಳ ಬೊಳ್ಳಮೆ ಶಿವಮ್ಮ ಜೆ ಮತ್ತು ಪದ್ಮಪ್ಪ ಪೂಜಾರಿಯವರ ಪುತ್ರಿ ಚೈತ್ರಾ ಕೆ, ಮಂಗಳೂರು ವಿಶ್ವವಿದ್ಯಾನಿಲಯದ ಹಿಂದಿ ವಿಭಾಗದ ಡಾ. ನಾಗರತ್ನರವರ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದ ಕೂಡಮರ ಪ್ರವೀಣ್ ಕುಮಾರ್‌ರವರ ಪತ್ನಿ ಲತಾ ಪ್ರವೀಣ್ ಕುಮಾರ್, ಕೋಲಾರದಲ್ಲಿ ರಾಜ್ಯಮಟ್ಟದ 41ನೇ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ ಜಾವೆಲಿನ್, ರಿಲೇ ಹಾಗೂ ಡಿಸ್ಕಸ್ ತ್ರೋನಲ್ಲಿ ಚಿನ್ನದ ಪದಕ ಪಡೆದ ಸವಣೂರು ಗ್ರಾಮದ ಕೇಕುಡೆ ನಿವಾಸಿ ಪುಷ್ಪಾವತಿರವರುಗಳನ್ನು ಗೌರವಿಸಲಾಯಿತು. ಪುತ್ತೂರು ಬಿಲ್ಲವ ಸಂಘದ ಮಾಜಿ ಉಪಾಧ್ಯಕ್ಷೆ ವೇದಾವತಿರವರು ಸಾಧಕರ ಪಟ್ಟಿ ವಾಚಿಸಿದರು.

ಗ್ರಾ.ಪಂ ಪದಾಧಿಕಾರಿಗಳಿಗೆ ಗೌರವ:
ಸಮಾಜ ಬಾಂಧವರಾಗಿದ್ದು ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಹುದ್ದೆಯನ್ನು ಅಲಂಕರಿಸಿರುವ ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಕಾಂತಾಳಿಕೆ, ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಕೌಕ್ರಾಡಿ ಗ್ರಾ.ಪಂಬ ಅಧ್ಯಕ್ಷ ಲೋಕೇಶ್ ಬಾಣಜಾಲು, ಉಪಾಧ್ಯಕ್ಷ ವನಿತಾ ಎಂ, ಕೊಯಿಲ ಗ್ರಾ.ಪಂನ ಅಧ್ಯಕ್ಷೆ ಸುಚೇತ ಹಳೇನೇರಂಕಿ, ಉಪಾಧ್ಯಕ್ಷ ಯತೀಶ್ ಕುಮಾರ್ ಎಸ್.ಎಚ್, ಬೆಳಂದೂರು ಗ್ರಾ.ಪಂನ ಅದ್ಯಕ್ಷೆ ಪಾರ್ವತಿ ಮರಕ್ಕಡ, ಉಪಾಧ್ಯಕ್ಷ ಜಯಂತ ಅಭೀರ, ಕೊಡಿಪ್ಪಾಡಿ ಗ್ರಾ.ಪಂ ಅಧ್ಯಕ್ಷ ಸೋಮಶೇಖರ್ ಕೊಡಿಪ್ಪಾಡಿ, ಐತೂರು ಗ್ರಾ.ಪಂ ಅಧ್ಯಕ್ಷೆ ವತ್ಸಲ, ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್.ಎಸ್.ಡಿ, ನರಿಮೊಗರು ಗ್ರಾ.ಪಂ ಅಧ್ಯಕ್ಷೆ ಹರಿಣಿ, ಕರ್ನೂರು ಗ್ರಾ.ಪಂನ ಅಧ್ಯಕ್ಷೆ ತ್ರಿವೇಣಿ ಪಳ್ಳತ್ತಾರು, ಶಿರಾಡಿ ಗ್ರಾ.ಪಂ ಅಧ್ಯಕ್ಷ ಕಾರ್ತಿಕೇಯನ್, ನೂಜಿಬಾಳ್ತಿಲ ಗ್ರಾ.ಪಂನ ಅಧ್ಯಕ್ಷೆ ಚಂದ್ರಾವತಿ, ಆಲಂಕಾರು ಗ್ರಾ.ಪಂ ಉಪಾಧ್ಯಕ್ಷ ರವಿ ಪೂಜಾರಿ ಕುಜಲಡ್ಕ,ಹಿರೇಬಂಡಾಡಿ ಗ್ರಾ.ಪಂ ಉಪಾಧ್ಯಕ್ಷೆ ಶಾಂಭವಿ ಸುರೇಶ್, ಬೆಟ್ಟಂಪಾಡಿ ಗ್ರಾ.ಪಂ ಉಪಾಧ್ಯಕ್ಷ ಮಹೇಶ್ ಕುಮಾರ್ ಕೋರ್ಮಂಡ, ಬಜತ್ತೂರು ಗ್ರಾ.ಪಂ ಉಪಾಧ್ಯಕ್ಷೆ ವಿಮಲ, ಕುಟ್ರುಪ್ಪಾಡಿ ಗ್ರಾ.ಪಂ ಉಪಾಧ್ಯಕ್ಷೆ ಯಶೋಧ ಕೆ, ಗೋಳಿತ್ತೊಟ್ಟು ಗ್ರಾ.ಪಂ ಉಪಾಧ್ಯಕ್ಷ ಕೆ.ಬಾಬು ಪೂಜಾರಿ, ಕೆಯ್ಯೂರು ಗ್ರಾ.ಪಂ ಉಪಾಧ್ಯಕ್ಷೆ ಸುಮಿತಾ ದಿವಾಕರ್ ರವರುಗಳನ್ನು ಗೌರವಿಸಲಾಯಿತು.


ಸಹಕಾರ:
ತಾಲೂಕಿನ 51 ಬಿಲ್ಲವ ಗ್ರಾಮ ಸಮಿತಿ, ಬಿಲ್ಲವ ಮಹಿಳಾ ವೇದಿಕೆ ಪುತ್ತೂರು, ಯುವವಾಹಿನಿ ಪುತ್ತೂರು ಘಟಕ, ಉಪ್ಪಿನಂಗಡಿ ಹಾಗೂ ಕಡಬ ಘಟಕಗಳು, ಪುತ್ತೂರು ಬಿಲ್ಲವ ವಿದ್ಯಾರ್ಥಿ ಸಂಘದ ಸಹಕಾರದಲ್ಲಿ ಕಾರ್ಯಕ್ರಮ ನಡೆಯಿತು.
ಬೆಂಗಳೂರಿನ ಆನನ್ಯ ಎಂಟರ್‌ಪ್ರೈಸಸ್‌ನ ನಟೇಶ್ ಪೂಜಾರಿ ಪುಳಿತ್ತಡಿರವರು ಸಂದರ್ಭೋಚಿತವಾಗಿ ಮಾತನಾಡಿದರು. ಗುರುಜಯಂತಿಗೆ ಹಣದ ಹಾಗೂ ವಸ್ತು ರೂಪದಲ್ಲಿ ನೆರವು ನೀಡಿದ ದಾನಿಗಳಿಗೆ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿಯವರು ಶಾಲು ಹೊದಿಸಿ, ಹೂ ನೀಡಿ ಗೌರವಿಸಿದರು. ಪೂಜಾ ವಸಂತ್ ಮತ್ತು ಬಳಗ ಪ್ರಾರ್ಥಿಸಿದರು. ಪುತ್ತೂರು ಬಿಲ್ಲವ ಸಂಘದ ಕಾರ್ಯದರ್ಶಿ ಚಿದಾನಂದ ಸುವರ್ಣ ಸ್ವಾಗತಿಸಿ, ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್ ವಂದಿಸಿದರು. ಉಪಾಧ್ಯಕ್ಷೆ ವಿಮಲಾ ಸುರೇಶ್, ಜೊತೆ ಕಾರ್ಯದರ್ಶಿ ದಯಾನಂದ ಕರ್ಕೇರ, ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿ, ಸದಸ್ಯರಾದ ಸಜ್ಜನ್ ಕುಮಾರ್, ರಾಜೇಶ್ ಪೂಜಾರಿ, ಉಮೇಶ್ ಬಾಯಾರು, ರವಿ ಕಲ್ಕಾರ್‌ರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಪ್ರಾಸ್ತಾವಿಕವಾಗಿ ಮಾತನಾಡಿದರು. ಸನ್ಮಾನಿತರ ಸನ್ಮಾನ ಪತ್ರವನ್ನು ಮೋನಪ್ಪ ಪೂಜಾರಿ ಕಾವು, ಬಾಲಕೃಷ್ಣ ಕೊಡಿಪ್ಪಾಡಿ, ಉಮೇಶ್ ಬಾಯಾರುರವರು ವಾಚಿಸಿದರು. ಪುತ್ತೂರು ಬಿಲ್ಲವ ಸಂಘದ ಮಾಜಿ ಕಾರ್ಯದರ್ಶಿ ಶಶಿಧರ್ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು. ಬಾಬು ಪೂಜಾರಿ ಇದ್ಪಾಡಿ, ನವೀನ್ ಹಿರೇಬಂಡಾಡಿ, ಸದಾನಂದ ಕುಮಾರ್ ಮಡ್ಯೊಟ್ಟು, ಸುಂದರ ಪೂಜಾರಿ ಮರ್ದಾಳ, ಅವಿನಾಶ್ ಹಾರಾಡಿ, ಅಶೋಕ್ ಕೆಯ್ಯೂರು, ಅಂಕಿತಾ, ಶ್ರದ್ಧಾ, ಜಯರಾಂ ಬಿ.ಎಸ್ ಕೆಮ್ಮಿಂಜೆ, ಅಜಿತ್ ಕುಮಾರ್ ಪಾಲೇರಿ, ಜನಾರ್ಧನ ಪೂಜಾರಿ ಪದಡ್ಕ, ನಾರಾಯಣ ಪೂಜಾರಿ ಇರ್ದೆ, ಮಾಧವ ಸಾಲಿಯಾನ್ ಕುರೆಮಜಲು, ಚಂದಪ್ಪ ಪೂಜಾರಿ ಬುಳೇರಿಕಟ್ಟೆ, ಕೃಷ್ಣಪ್ಪ ಕಲಾವಿದ, ಕೇಶವ ಪಿ.ಕೊಡಿಪ್ಪಾಡಿ, ಉಷಾ ಅಂಚನ್, ಅನೂಪ್ ಕುಮಾರ್ ಎಸ್,ರವರು ವಿವಿಧ ವಿಭಾಗಗಳಲ್ಲಿ ಸಹಕರಿಸಿದರು. ಮಾಜಿ ಅಧ್ಯಕ್ಷ ವರದರಾಜ್ ಸಹಿತ ೫೧ ಗ್ರಾಮ ಸಮಿತಿ ಪದಾಧಿಕಾರಿಗಳು, ಸದಸ್ಯರು, ಸಂಘ-ಸಂಸ್ಥೆ ಪ್ರತಿನಿಧಿಗಳು, ವಲಯ ಸಂಚಾಲಕರು, ಸಮಾಜ ಬಾಂಧವರು ಉಪಸ್ಥಿತರಿದ್ದರು. ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು.

250 ವಿದ್ಯಾರ್ಥಿಗಳು.. ರೂ.೫ ಲಕ್ಷ ವೆಚ್ಚ..
ಬಿಲ್ಲವ ಸಮಾಜದ ಬಡ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ, ಸಹಾಯಧನ, ಪ್ರತಿಭಾ ಪುರಸ್ಕಾರ ಇತ್ಯಾದಿ ಉದ್ಧೇಶಗಳಿಗಾಗಿ ಸ್ಥಾಪಿಸಿದ ವಿನೂತನ ವಿದ್ಯಾನಿಧಿ ಯೋಜನೆಯಡಿಯಲ್ಲಿ ಸುಮಾರು 250 ವಿದ್ಯಾರ್ಥಿಗಳಿಗೆ ಸುಮಾರು ರೂ.5 ಲಕ್ಷ ವೆಚ್ಚದಲ್ಲಿ ವಿದ್ಯಾನಿಧಿಯನ್ನು ನೀಡಲಾಗಿದೆ ಎಂದು ವಿದ್ಯಾನಿಧಿ ಯೋಜನೆಯ ಸಂಚಾಲಕ ಡಾ.ಸದಾನಂದ ಕುಂದರ್‌ರವರು ತಿಳಿಸಿದರು.

ಸಾಧಕರಿಗೆ ಸನ್ಮಾನ..
ಕರ್ನಾಟಕ ಸರಕಾರದಿಂದ ಪ್ರತಿಷ್ಟಿತ ಡಾ.ಬಿ.ಸಿ ರಾಯ್ ರಾಜ್ಯ ಪ್ರಶಸ್ತಿ ಪಡೆದ ಖ್ಯಾತ ಮೂತ್ರರೋಗ ತಜ್ಞರಾದ ಡಾ.ಸದಾನಂದ ಪೂಜಾರಿ, ಕರ್ನಾಟಕ ಸರಕಾರದಿಂದ ಪ್ರತಿಷ್ಟಿತ ಸಹಕಾರ ರತ್ನ ಪ್ರಶಸ್ತಿ ಪಡೆದ ಆತ್ಮಶಕ್ತಿ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಪುತ್ತೂರು ಬಿಲ್ಲವ ಸಂಘದಿಂದ ಗೌರವ ಪೂರ್ವಕವಾಗಿ ನೀಡಲಾದ ನಿಸ್ವಾರ್ಥ ಸಮಾಜ ಸೇವಕ ಪ್ರಶಸ್ತಿಯನ್ನು ಪಿ.ಆನಂದ ಟೈಲರ್‌ರವರುಗಳಿಗೆ ನೀಡಿ ಸನ್ಮಾನಿಸಲಾಯಿತು

ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮ..
ಬೆಳಿಗ್ಗೆ ಅರ್ಚಕ ಸಾಯಿ ಶಾಂತಿ ಸರಪಾಡಿ ನೇತೃತ್ವದಲ್ಲಿ ಪ್ರಾರ್ಥನೆ, ಪಂಚಾಮೃತಾಭಿಷೇಕ, ಬಳಿಕ ಆಲಂಕಾರು, ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು. ಪ್ರಸಾದ ಭೋಜನ ಬಳಿಕ ಯುವವಾಹಿನಿ ಪುತ್ತೂರು ಘಟಕದ ಪ್ರಾಯೋಜಕತ್ವದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

-ಕಾರ್ಯಕಾರಿ ಸಮಿತಿಗೆ ಆಯ್ಕೆಯಾದವರಿಗೆ ಗೌರವ
-ಮಾಜಿ ಅಧ್ಯಕ್ಷರುಗಳಿಗೆ/ನಿ.ಪೂರ್ವ ಪದಾಧಿಕಾರಿಗಳಿಗೆ ಗೌರವ
-ಸಾಧಕರಿಗೆ ಪ್ರತಿಭಾ ಪುರಸ್ಕಾರ
-ರಾಜ್ಯ/ರಾಷ್ಟ್ರಮಟ್ಟದ ಸಾಧಕರಿಗೆ ಅಭಿನಂದನೆ
-ಟಾಪರ್‌ರವರಿಗೆ ಪ್ರತಿಭಾ ಪುರಸ್ಕಾರ
-ಹಿರಿಯ ಸಾಧಕರಿಗೆ ಗೌರವ
-ಗ್ರಾ.ಪಂ ಪದಾಧಿಕಾರಿಗಳಿಗೆ ಗೌರವ

ಇಲ್ಲಿದೆ ಸುದ್ದಿ ಯೂಟ್ಯೂಬ್ ಚಾನೆಲ್ ನೇರಪ್ರಸಾರ

LEAVE A REPLY

Please enter your comment!
Please enter your name here