ಜಿಲ್ಲಾಮಟ್ಟದ ಗಣಿತ – ವಿಜ್ಞಾನ ಹಾಗೂ ಸಂಸ್ಕೃತಿ ಜ್ಞಾನ – ಮಹೋತ್ಸವ

0

ನಮ್ಮಲ್ಲಿ ಪ್ರಶ್ನಿಸುವ ಮನೋಭಾವ ಸದಾ ಜಾಗೃತವಾಗಿರಬೇಕು – ಡಾ| ಕೆ. ಗಣೇಶ್ ರಾಜ್(ನಿವೃತ್ತ ವಿಜ್ಞಾನಿ) ಜಿಯೋಸ್ಪೇಶಿಯಲ್ ವಿಭಾಗ ಇಸ್ರೋ ಬೆಂಗಳೂರು

ಪುತ್ತೂರು: ವಿದ್ಯಾರ್ಥಿ ಬದುಕಿನಲ್ಲಿ ಕುತೂಹಲ ಪ್ರವೃತ್ತಿ ಮತ್ತು ಪ್ರಶ್ನಿಸುವ ಮನೋಭಾವ ಇರಲೇಬೇಕು, ಸೋಲಿಗೆ ಧೃತಿಗೆಡದೆ, ವಿಷಯಜ್ಞಾನದ ಆಳವಾದ ಅಧ್ಯಯನ, ಕುತೂಹಲ ಪ್ರವೃತ್ತಿಬೆಳೆಸಿಕೊಳ್ಳಬೇಕು’ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ವಿದ್ಯಾಭಾರತಿಯ ಜಿಲ್ಲಾಮಟ್ಟದ ಗಣಿತ-ವಿಜ್ಞಾನ ಹಾಗೂ ಸಂಸ್ಕೃತಿ ಜ್ಞಾನ ಪರಿಚಯ ಸ್ಪರ್ಧಾಮೇಳ ’ಅನುರಣನ’ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಜಿಯೋಸ್ಫೇಶಿಯಲ್, ಇಸ್ರೋ ಬೆಂಗಳೂರು ಇಲ್ಲಿನ ನಿವೃತ್ತ ವಿಜ್ಞಾನಿ ಡಾ. ಕೆ ಗಣೇಶ್ ರಾಜ್ ನುಡಿದರು.

ಅಭ್ಯಾಗತರಾಗಿ ಆಗಮಿಸಿದ ಶಾಲಾ ಹಿರಿಯ ವಿದ್ಯಾರ್ಥಿ ಜಯದೇವ ಶಿವತ್ತಾಯ ಪಿ , ಸೀನಿಯರ್ ಅಸೋಸಿಯೇಟ್ ಕನ್ಸಲ್‌ಟೆನ್ಸಿ ವಿಭಾಗ, ಇನ್ಫೋಸಿಸ್, ಮುಡಿಪು ಇವರು ಕಾರ್ಯಕ್ರಮವನ್ನುಉದ್ಘಾಟಿಸಿ ’ಗುರಿ ಎಷ್ಟು ಮುಖ್ಯವೋ ಗುರಿ ಸಾಧಿಸುವ ಪಥ ಅಷ್ಟೇ ಮುಖ್ಯ, ಪ್ರಯತ್ನ ಸತತವಾಗಿರಲಿ’ ಎಂದು ನುಡಿದರು.
ಸಭಾಧ್ಯಕ್ಷತೆಯನ್ನು ವಹಿಸಿದ ಶಾಲಾ ಆಡಳಿತ ಮಂಡಳಿ ಸದಸ್ಯ ತಿರುಮಲೇಶ್ವರ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ, ಸಂಚಾಲಕ ವಸಂತ ಸುವರ್ಣ, ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯಗುರು ಆಶಾ ಬೆಳ್ಳಾರೆ ಸ್ವಾಗತಿಸಿ, ವಿದ್ಯಾಭಾರತಿ ಗಣಿತ-ವಿಜ್ಞಾನ ವಿಭಾಗದ ಆಯೋಜಕ ರಘುರಾಮ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಕೃತಿ ಜ್ಞಾನ ವಿಭಾಗದ ಆಯೋಜಕ ಗಣೇಶ್ ವಾಗ್ಲೆ ವಂದಿಸಿದರು. ಶಿಕ್ಷಕಿ ವೀಣಾಕುಮಾರಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here