ಅಕ್ಷಯ ಕಾಲೇಜಿನಲ್ಲಿ 169ನೇ ನಾರಾಯಣ ಗುರುಜಯಂತಿ ಆಚರಣೆ

0

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್(ರಿ) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ ಆ.31ರಂದು IQAC ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಬ್ರಹ್ಮಶ್ರೀ ಸಾರಾಯಣ ಗುರುಗಳ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ದೀಪಪ್ರಜ್ವಲನೆಯ ಮೂಲಕ ಉದ್ಘಾಟಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಜಯನಗರ ಪುತ್ತೂರು ಇದರ ಮುಖ್ಯೋಪಾಧ್ಯಾಯರಾದ ರಮೇಶ್ ಉಳಯ ಅವರು ಶ್ರೀನಾರಾಯಣ ಗುರುಗಳ ಜನನ, ಅವರು ನಡೆದು ಬಂದ ಹಾದಿ, ಅವರ ತತ್ವ ಸಂದೇಶಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಹೇಳುತ್ತಾ ಮನುಷ್ಯ ವಿದ್ಯೆಯಿಂದ ಸ್ವತಂತ್ರರಾಗಬೇಕು, ಸಂಘಟನೆಯಿಂದ ಪ್ರಬಲರಾಗಬೇಕು. ಸಂಘರ್ಷದ ಬದುಕನ್ನು ತ್ಯಜಿಸಿ ಮನಸ್ಸಿನ ಮಾತುಗಳಿಂದ ಸಜ್ಜನರಾಗೋಣ ಎನ್ನುವ ಗುರುಗಳ ಸಂದೇಶವನ್ನು ಉಲ್ಲೇಖಿಸಿದರು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಯಂತ್ ನಡುಬೈಲು ಅವರು ವಿದ್ಯಾರ್ಥಿಗಳಲ್ಲಿ ನಾರಾಯಣ ಗುರುಗಳ ತತ್ವ ಮತ್ತು ಸಂದೇಶಗಳ ಅರಿವು ಮೂಡಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳ ಆಚರಣೆ ವಿದ್ಯಾಸಂಸ್ಥೆಯಲ್ಲಿ ಅತೀ ಮುಖ್ಯ ಎಂದರು.
ವೇದಿಕೆಯಲ್ಲಿ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿಯಾದ ಕಲಾವತಿ, ಪ್ರಾಂಶುಪಾಲ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ ಉಪಸ್ಥಿತರಿದ್ದರು. ಕು. ಪ್ರಕೃತಿ ಇವರು ಪ್ರಾರ್ಥಿಸಿ, ರಾಷ್ಟ್ರೀಯ ಸೇವಾಯೋಜನಾಧಿಕಾರಿ ಕಿಶೋರ್ ಕುಮಾರ್ ರೈ ಕೆ ಮತ್ತು IQAC ಸಂಯೋಜಕ ರಾಕೇಶ್ ಕೆ ವಂದಿಸಿದರು. ಉಪನ್ಯಾಸಕಿಯಾದ ಕು.ದೀಪ್ತಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here