ಪುತ್ತೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಾಲಯದಲ್ಲಿ ಶ್ರಾವಣ ತಿಂಗಳ 3 ನೇ ಶನಿವಾರದ ಪ್ರಯುಕ್ತ ಸೆ. 2 ರಂದು ತೀರ್ಥಸ್ನಾನ ನಡೆಯಿತು.
ಕುದ್ಮಾರು, ಬೆಳಂದೂರು, ಕಾಯಿಮಣ, ಚಾರ್ವಾಕ, ದೋಳ್ಪಾಡಿ, ಕಾಣಿಯೂರು, ಸವಣೂರು, ಅಲಂಕಾರು ಭಾಗದ ನೂರಾರು ಮಂದಿ ತೀರ್ಥ ಸ್ಥಾನಗೈದರು. ಬೆಳಿಗ್ಗೆ 7 ಗಂಟೆಗೆ ತೀರ್ಥಸ್ಥಾನ ಆರಂಭಗೊಂಡಿತು. ಸುಮಾರು 10 ಕೋಟಿ ರೂ, ವೆಚ್ಚದಲ್ಲಿ ಬರೆಪ್ಪಾಡಿ ದೇವಾಲಯ ಜೀರ್ಣೋದ್ಧಾರ ಗೊಳ್ಳಲಿದ್ದು, ಕಡಬ, ಪುತ್ತೂರು ಹಾಗೂ ಸುಳ್ಯ ತಾಲೂಕಿನ ಅತೀ ಪವಿತ್ರವಾದ ದೇವಾಲಯ ಇದಾಗಿದ್ದು, ದೇವಾಲಯದಲ್ಲಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ನಡೆಯುವ ತೀರ್ಥಸ್ಥಾನಕ್ಕೆ ವಿಶೇಷ ಮಹತ್ವ ಮತ್ತು ನಂಬಿಕೆ ಇದೆ. ದೇವಾಲಯದ ಅನುವಂಶೀಯ ಮೊಕ್ತೇಸರರಾಗಿರುವ, ಅರ್ಚಕ ಜನೇಶ್ ಭಟ್ ಬರೆಪ್ಪಾಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ ಹಾಗೂ ಸದಸ್ಯರುಗಳು ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ,ಸದಸ್ಯರು, ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.