ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೋಟಿ ಜಪಯಜ್ಞ ಆರಂಭಿಸಿದ ಶಾಸಕ ಅಶೋಕ್ ಕುಮಾರ್ ರೈ -ಲೋಕಕಲ್ಯಾಣಕ್ಕಾಗಿ ಮಳೆ ಬರುವಂತೆ ಪ್ರಾರ್ಥನೆ

0

ಸೆ.10 ಕ್ಕೆ ಮಹಾಜಪದೊಂದಿಗೆ ವರುಣ ಜಪ – ಕೇಶವ ಪ್ರಸಾದ್ ಮುಳಿಯ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೆ.2 ರಿಂದ ಉದಯ ಕಾಲದಲ್ಲಿ ಆರಂಭಗೊಂಡ ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞವನ್ನು ಶಾಸಕ ಆಶೋಕ್ ಕುಮಾರ್ ರೈ ಕೂಡಾ ಮನೆಯಲ್ಲಿ ಮಾಡುವ ಸಂಕಲ್ಪದಂತೆ ಬೆಳಿಗ್ಗೆ ದೇವಳದ ಸನ್ನಿಧಾನದಲ್ಲಿ ಜಪ ಯಜ್ಞ ಆರಂಭಿಸಿದರು. ಇದೇ ಸಂದರ್ಭದಲ್ಲಿ ಅವರು ಲೋಕಕಲ್ಯಾಣಾರ್ಥವಾಗಿ ಮಳೆ, ಗಾಳಿ, ಬೆಳಕು ಇರಬೇಕು. ಈ ಬಾರಿ ಮಳೆ ಕಡಿಮೆಯಾಗಿದ್ದು ಮಳೆಗಾಗಿ ಎಲ್ಲರು ಪ್ರಾರ್ಥನೆ ಮಾಡುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಸುದೇಶ್ ಶೆಟ್ಟಿ, ರಿತೇಶ್ ಶೆಟ್ಟಿ, ಸುದೇಶ್ ಚಿಕ್ಕಪುತ್ತೂರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಸೆ.10 ಕ್ಕೆ ಮಹಾಜಪದೊಂದಿಗೆ ವರುಣ ಜಪ
ಶಾಸಕರು ವರುಣನ ಕೃಪೆಗೆ ಪ್ರಾರ್ಥಿಸಿದಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೆ.10 ಕ್ಕೆ ಏಕಾದಶ ಕೋಟಿ ಮಹಾಲಿಂಗೇಶ್ವರ ಮಹಾಜಪ ಯಜ್ಞ ನಡೆಯಲಿದ್ದು ಅದೇ ದಿನ 1008 ನಾರಿಕೇಳ ಅಭಿಷೇಕ ಹಾಗು ವರುಣ ಜಪವನ್ನೂ ಮಾಡಲಾಗುವುದು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here