ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ (ಕೆಎಂಜೆ) ರೆಂಜ ಸರ್ಕಲ್ ವತಿಯಿಂದ `ದ್ವೇಷ ಬಿಟ್ಟು ದೇಶ ಕಟ್ಟು’ ಎಂಬ ಘೋಷಣೆಯೊಂದಿಗೆ ಪ್ರಜಾ ಭಾರತ ಕಾರ್ಯಕ್ರಮ ನಡೆಯಿತು.
ನಿವೃತ್ತ ಮುಖ್ಯೋಪಾಧ್ಯಾಯರಾದ ಮಂಜುಳಗಿರಿ ವೆಂಕಟ್ರಮಣ ಭಟ್ ಮಾತನಾಡಿ ದೇವರೊಬ್ಬನೇ, ಹಲವು ನಾಮಗಳು ಮಾತ್ರ, ನನ್ನನ್ನು ನನ್ನ ಮಕ್ಕಳು ಅಪ್ಪನೆಂದೂ, ತಮ್ಮಂದಿರು ಅಣ್ಣನೆಂದೂ, ಕೆಲವರು ಭಾವ, ಅಳಿಯ ಈ ರೀತಿ ಇನ್ನಿತರ ನಾಮಗಳಿಂದ ಕರೆದರೂ ನಾನು ಒಬ್ಬನೇ ಅಲ್ಲವೇ, ಅದೇ ಪ್ರಕಾರ ಮುಸಲ್ಮಾನರು ಅಲ್ಲಾಹು ಎನ್ನುವಾಗ , ನಾವು ಬ್ರಹ್ಮ ಎನ್ನುತ್ತೇವೆ, ಅವನ ಸೃಷ್ಟಿಗಳಾದ ನಾವೆಲ್ಲರೂ ಒಂದೇ, ಭಾರತೀಯರಾಗಿ ಒಗ್ಗಟ್ಟಾಗಿ ಬಾಳುವ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎ.ಎಂ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು ಮಾತನಾಡಿ ನಮ್ಮ ಬಾಲ್ಯ ಕಾಲದಲ್ಲಿ ಪರಸ್ಪರ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಜಾತಿ, ಧರ್ಮ ಬೇಧ ಭಾವವಿಲ್ಲದೆ ಎಷ್ಟು ಅನ್ಯೋನ್ಯತೆಯಿಂದ ನಾವಿದ್ದೆವು, ಅದೇ ರೀತಿ ನಮ್ಮ ಮುಂದಿನ ತಲೆಮಾರಿನ ಪೀಳಿಗೆಯನ್ನು ಇರುವಂತೆ ಮಾಡಲು ನಾವು ಮುಂದಾಗಬೇಕೆಂದು ಅವರು ಹೇಳಿದರು.
ಆದಾಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ರಾಮ್ ಕುಮಾರ್ ಆರ್ಲಪದವು, ಗ್ರಾ.ಪಂ ಸದಸ್ಯ ಅಬೂಬಕರ್ ಕಲ್ಲಪದವು, ಪಾಣಾಜೆ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಈಶ್ವರ ಭಟ್ ಕಡಂದೆಲ್, ಆರ್ಲಪದವು ವಿವೇಕ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ಅಧ್ಯಕ್ಷ ಶಾಹುಲ್ ಹಮೀದ್ ಜಾಲಗದ್ದೆ ಮೊದಲಾದವರು ಮಾತನಾಡಿದರು.
ಹುಸೈನ್ ಮುಈನಿ ಮಾರ್ನಾಡ್ ಮುಖ್ಯ ಭಾಷಣ ಮಾಡಿದರು.ಅಬ್ಬಾಸ್ ಮದನಿ ರೆಂಜ ಕಾರ್ಯಕ್ರಮ ಉದ್ಘಾಟಿಸಿದರು. ಮೂಸ ಮದನಿ ಕಕ್ಕೂರು ದುಆ ನೇರವೇರಿಸಿದರು.
ಅಬ್ಬಾಸ್ ಹಾಜಿ ಮಣ್ಣಾಪು, ರಝಕ್ ಬದ್ರಿಯಾ ಅಬ್ದುರಹ್ಮಾನ್ ಮಣ್ಣಾಪು , ಅಬೂಬಕರ್ ಆರ್ಲಪದವು, ಅಬ್ದುಲ್ಲ ಮದನಿ ಇರ್ದೆ, ಶರೀಫ್ ಕಡಮಾಜೆ, ಪಿ ವೈ ಮುಹಮ್ಮದ್ ಮದನಿ ಇರ್ದೆ ಮೊದಲಾದವರು ಉಪಸ್ಥಿತರಿದ್ದರು.
ಅಬ್ದುಲ್ಲ ಕುಂಞಿ ಮಾಸ್ಟರ್ ಸ್ವಾಗತಿಸಿದರು. ಕಾರ್ಯದರ್ಶಿ ಪಿ ಐ ಮುಹಮ್ಮದ್ ಮದನಿ ಇರ್ದೆ ಕಾರ್ಯಕ್ರಮ ನಿರೂಪಿಸಿದರು.