





ಪುತ್ತೂರು; ಮಹಿಳೆಯೋರ್ವರಿಗೆ ಜೀವ ಬೆದರಿಕೆ ಒಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
ಕೊಳ್ತಿಗೆ ಗ್ರಾಮದ ಸ್ಥಳಮನೆ ನಿವಾಸಿ ರಾಜೇಶ್ ಶೆಟ್ಟಿ ಎಂಬವರ ಪತ್ನಿ ಚಿತ್ರಪ್ರಭಾ ಶೆಟ್ಟಿ ಎಂಬವರಿಗೆ ಸ್ಥಳೀಯ ನಿವಾಸಿ ರತೀಂದ್ರ ಶೆಟ್ಟಿಯವರ ಪುತ್ರಿ ಕನ್ಯಾ ಪಿ ಆರ್ ಮತ್ತು ಪತ್ನಿ ಜಯಶ್ರೀ ಆರ್ ಶೆಟ್ಟಿ ಎಂಬವರು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವುದಾಗಿ ಬೆಳ್ಳಾರೆ ಠಾಣೆಗೆ ದೂರು ನೀಡಲಾಗಿತ್ತು. ಪೊಲೀಸರು ಇಬ್ಬರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.








