ಕಲ್ಲಾರೆ ಶ್ರೀಮಾತಾ ಸೌಹಾರ್ದ ಸಹಕಾರಿ ಸಂಘದ ಏಳನೇ ಮಹಾಸಭೆ

0

111.6 ಕೋಟಿ ವ್ಯವಹಾರ , 11 ಲಕ್ಷ ಲಾಭ – ಅಧ್ಯಕ್ಷ ದಾಮೋದರ ಕುಲಾಲ್

ಪುತ್ತೂರು : ಇಲ್ಲಿನ ಕಲ್ಲಾರೆ ಮಹಾಲಕ್ಷ್ಮಿ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ , ಕಡಬದಲ್ಲೂ ಶಾಖೆ ಹೊಂದಿರುವ ಶ್ರೀ ಮಾತಾ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ 2022-23 ನೇ ಸಾಲಿನ ಏಳನೆಯ ವಾರ್ಷಿಕ ಮಹಾಸಭೆಯು ಸಹಕಾರಿಯ ಸಭಾಂಗಣದಲ್ಲಿ ಸೆ.3 ರಂದು ಅಧ್ಯಕ್ಷ ದಾಮೋದರ ಕುಲಾಲ್ ಇವರ ನೇತೃತ್ವದಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಸಹಕಾರಿಯು ಪ್ರಸಕ್ತ ಸಾಲಿನಲ್ಲಿ ರೂ.111.6 ಕೋಟಿ ವ್ಯವಹಾರನಡೆಸಿದ್ದು , ರೂ. 11 ಲಕ್ಷ ಲಾಭಗಳಿಸಿದೆಯೆಂದು ಮಹಾಸಭೆಯಲ್ಲಿ ಘೋಷಣೆ ಮಾಡಿದರು.ಸುಮಾರು 10 ಕೋಟಿ ರೂಪಾಯಿ ಸಾಲ ವಿತರಿಸಲಾಗಿದ್ದು , 8.5 ಕೋಟಿ ಸಾಲ ವಸೂಲಾತಿ ಬಂದಿರುತ್ತದೆ ಹಾಗೂ 10 ಕೋಟಿ ರೂಪಾಯಿ ಹೊರ ಬಾಕಿ ಸಾಲವಿದ್ದು , 13.8ಕೋ ರೂ ದುಡಿಯುವ ಬಂಡವಾಳ ಹೊಂದಿದೆ ಜೊತೆಗೆ ಸಹಕಾರಿಯೂ ಪ್ರಸ್ತುತ 3143 ಸದಸ್ಯರೂಗಳನ್ನೊಳಗೊಂಡಿದೆಯೆಂದು ಮಾಹಿತಿ ನೀಡಿದರು.

ಸಹಕಾರಿಯ ಉಪಾಧ್ಯಕ್ಷ ಅರುಣ್ ಕುಮಾರ್ ಆಳ್ವ , ನಿರ್ದೇಶಕ ಭಾಸ್ಕರ್ ಎಂ , ಶೇಶಪ್ಪ ನಾಯ್ಕ ,ತುಂಗಮ್ಮ ,ಹುಸೈನ್ ,ಹೇಮಾವತಿ ,ವಿದ್ಯಾ ,ಶಶಿಕಲಾ ,ಹಾಗೂ ಶಂಕರನಾರಾಯಣ ಭಟ್ ಸಹಿತ ಸಹಕಾರಿಯ ಸದಸ್ಯರು ಹಾಜರಿದ್ದರು. ಕಾರ್ಯದರ್ಶಿ ಶರತ್ ಕುಮಾರ್ ಸ್ವಾಗತಿಸಿದರು. ಕು.ಸ್ವಸ್ತಿಕಾ ಪ್ರಾರ್ಥನೆ ನೆರವೇರಿಸಿ ,ವಸಂತ ಮೂಲ್ಯ ವಂದಿಸಿದರು.

ಸಂಸ್ಥೆಯ ಸೇವೆಗಳು :
ಸಹಕಾರಿಯೂ ಸಂಪೂರ್ಣ ಗಣಕೀಕೃತ ಸೇವೆಗೆ ಆದ್ಯತೆ ನೀಡಿದ್ದು ,
ಗ್ರಾಹಕರ ಠೇವಣಿಗಳಿಗೆ ಆಕರ್ಷಕ ಬಡ್ಡಿ ,
ವಾಹನ ಖರೀದಿ ಸಾಲ ,ಅಡಮಾನ ಸಾಲ , ಜಾಮೀನು ಭದ್ರತೆ ಸಾಲ ,
ದೈನಿಕ ಠೇವಣಿ ಮೇಲಿನ ಸಾಲ, ಚಿನ್ನದ ಆಭರಣಗಳ ಮೇಲೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ವ್ಯವಸ್ಥೆಗಳಿದ್ದು ,
ಆರೋಗ್ಯ ವಿಮೆ ,ವಾಹನ ವಿಮೆ , ಪ್ರಾಪರ್ಟಿ ಮೇಲಿನ ವಿಮಾ ಸೌಲಭ್ಯಗಳೂ ಹಾಗೂ ಸದಸ್ಯರಿಗೆ ಆರ್ಟಿಜಿಎಸ್ ಸೇವೆ ,ನೆಫ್ಟ್ ಸೇವೆ ಮತ್ತು ಕೋರ್ ಬ್ಯಾಂಕಿಂಗ್ ಸೇವೆಯೂ ಕೂಡ ಸಹಕಾರಿಯಿಂದ ಸಿಗಲಿದ್ದು , ಈ ಮೊದಲಿನಂತಯೇ ಗ್ರಾಹಕರೆಲ್ಲಾ ಸಹಕಾರ ನೀಡುವಂತೆ ಆಧ್ಯಕ್ಷ ದಾಮೋದರ ಕುಲಾಲ್ ಕೋರಿದರು.

ಶೀಘ್ರದಲ್ಲೇ ಇನ್ನೆರಡೂ ಶಾಖೆಗಳು ಪ್ರಾರಂಭ…
ಕೆಲ ಸಮಯಗಳ ಹಿಂದೆ ಸಹಕಾರಿಯೂ ಚೊಚ್ಚಲ ಶಾಖೆಯೊಂದನ್ನು ಕಡಬದಲ್ಲಿ ಆರಂಭಿಸಿದ್ದು , ಇದೀಗ ಇನ್ನೂ ಹೆಚ್ಚಿನ ಸೇವೆಯನ್ನು ಗ್ರಾಹಕ ಜನತೆಗೆ ಒದಗಿಸೋ ಸಲುವಾಗಿ ಮೂಡಬಿದ್ರೆ ಹಾಗೂ ಮುಡಿಪು ಬಳಿ ಸಹಕಾರಿಯ ಇನ್ನೆರಡು ಶಾಖೆಗಳು ಆರಂಭಗೊಳ್ಳಲಿದ್ದು ,ನಿಮ್ಮೆಲ್ಲರ ಆಶೀರ್ವಾದ ,ಸಹಕಾರ ಸದಾ ನಮ್ಮ ಮೇಲಿರಲಿಯೆಂದು ಬಯಸುತ್ತೇವೆ.

ದಾಮೋದರ ಕುಲಾಲ್ , ಅಧ್ಯಕ್ಷರು , ಶ್ರೀ ಮಾತಾ ಸೌಹಾರ್ದ

LEAVE A REPLY

Please enter your comment!
Please enter your name here