ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗೋಪೂಜಾ ಮಂಟಪ ಉದ್ಘಾಟನೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗೋಪೂಜಾ ಮಂಟಪ ಉದ್ಘಾಟನೆಯು ಸೆ.4ರಂದು ಬೆಳಿಗ್ಗೆ ದೇವಳದ ಹೊರಾಂಗಣದಲ್ಲಿ ನಡೆಯಿತು.


ದ್ವಾರಕಾ ಕನ್ಸ್ಟ್ರಕ್ಷನ್‌ನ ಮಾಲಕ ಗೋಪಾಲಕೃಷ್ಣ ಭಟ್ ಅವರು ಗೋಪೂಜಾ ಮಂಟಪ ಉದ್ಘಾಟಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ಶೇಖರ್ ನಾರಾವಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಪ್ರಥಮ ಗೋಪೂಜೆ ಪ್ರಾಯೋಜಕ ಕಹಳೆ ನ್ಯೂಸ್‌ನ ಶ್ಯಾಮ್‌ಸುದರ್ಶನ್ ಭಟ್ ಹೊಸಮೂಲೆ ದಂಪತಿ ಉಪಸ್ಥಿತರಿದ್ದರು.

ಭಕ್ತರ ಸದುದ್ದೇಶ ಈಡೇರಿಕೆ
ಮನೆಯಲ್ಲಿ ಕಾರ್ಯಕ್ರಮಗಳಾದಾಗ ವೈದಿಕರು ನಮ್ಮ ಮೂಲಕ ಗೋಗ್ರಾಸ ಇರಿಸುವ ಸಂಪ್ರದಾಯ ಇರುತ್ತದೆ. ಆದರೆ ಬಹುತೇಕ ಮನೆಗಳಲ್ಲಿ ಗೋವುಗಳು ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ದೇವಸ್ಥಾನಕ್ಕೆ ಗೋಗ್ರಾಸದ ಬಾಬ್ತು ಕಾಣಿಕೆ ಸಮರ್ಪಣೆ ಮಾಡುವ ಮೂಲಕ ಗೋಗ್ರಾಸ ಅರ್ಪಣೆ ಮಾಡಲು ಅವಕಾಶವಿದೆ. ಇದು ನಿಜವಾಗಿ ಗೋವಿಗೆ ಸಮರ್ಪಣೆ ಆಗುತ್ತದೆ. ಹಾಗಾಗಿ ಗೋ ಮಂಟಪ ಭಕ್ತರ ಸದುದ್ದೇಶ ಈಡೇರಿಕೆ ಆಗಿದೆ.
ಕೇಶವಪ್ರಸಾದ್ ಮುಳಿಯ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

LEAVE A REPLY

Please enter your comment!
Please enter your name here