ರಾಮಕುಂಜ: ಇಲ್ಲಿನ ಸರಕಾರಿ ಹಿ.ಪ್ರಾ.ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಹಾಗೂ ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಆ.4ರಂದು ಶಾಲೆಯಲ್ಲಿ ನಡೆಯಿತು.
ಎಸ್ಡಿಎಂಸಿ ಅಧ್ಯಕ್ಷ ಜಕರಿಯ ಮುಸ್ಲಿಯಾರ್ರವರು ಅಧ್ಯಕ್ಷತೆ ವಹಿಸಿದ್ದರು. ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತ ಬರೆಂಬೆಟ್ಟು ಉದ್ಘಾಟಿಸಿದರು. 8 ವರ್ಷ ಶಿಕ್ಷಕರಾಗಿದ್ದು ವರ್ಗಾವಣೆಗೊಂಡ ಅರುಣ್ಕುಮಾರ್ ಶೇಟ್ ಎ.ಆರ್.ರವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಶಾಲೆಯ ಹಿರಿಯ ವಿದ್ಯಾರ್ಥಿಗಳಾಗಿದ್ದು ಪ್ರಸ್ತುತ ಉಪ್ಪಿನಂಗಡಿ ಮಾಲಿಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷರಾದ ಎಚ್.ಯೂಸುಫ್ ಹಾಜಿ, ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷರಾದ ಕೇಶವ್ ಗಾಂಧಿ ಪೇಟೆ ಹಾಗೂ ಅಕ್ಷರ ದಾಸೋಹ ಸಿಬ್ಬಂದಿಯಾಗಿದ್ದು ಸ್ವಯಂ ನಿವೃತ್ತಿ ಪಡೆದ ಹೂವಮ್ಮರವರನ್ನು ಶಾಲಾ ಎಸ್ಡಿಎಂಸಿ, ಪೋಷಕರ ಸಹಯೋಗದೊಂದಿಗೆ ಸನ್ಮಾನಿಸಲಾಯಿತು. ನಿವೃತ್ತ ಮುಖ್ಯಗುರು ಗುಮ್ಮಣ್ಣ ಗೌಡ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಮುಖ್ಯಗುರುಗಳ ಸಂಘದ ಜಿಲ್ಲಾ ಅಧ್ಯಕ್ಷರೂ ಆದ ಸವಣೂರು ಸರಕಾರಿ ಉ.ಹಿ.ಪ್ರಾ.ಶಾಲೆಯ ಮುಖ್ಯಗುರು ನಿಂಗರಾಜು ಕೆ.ಪಿ., ನೆಲ್ಯಾಡಿಯ ಉದ್ಯಮಿ ಕೆ.ಪಿ.ತೋಮಸ್, ಪೆರಾಬೆ ಶಾಲೆಯ ಮುಖ್ಯಶಿಕ್ಷಕಿ ಸುಚೇತ ಕುಮಾರಿ, ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಶಾಲೆಯ ಮುಖ್ಯಗುರು ವನಿತಾ, ಜಿಲ್ಲಾ ಉತ್ತಮ ಶಿಕ್ಷಕ ಪುರಸ್ಕೃತರೂ ಆದ ವಳಕಡಮ ಶಾಲೆಯ ಮುಖ್ಯಗುರು ನಾರಾಯಣ ಭಟ್ ಪಿ.ಎಸ್, ಶಾಲೆಯ ಹಿರಿಯ ವಿದ್ಯಾರ್ಥಿ, ಪತ್ರಕರ್ತ ನಝೀರ್ ಕೊಯಿಲ, ಎಸ್ಕೆಎಸ್ಎಸ್ಎಫ್ ಅಧ್ಯಕ್ಷ ಸಿದ್ದಿಕ್ ಎಸ್.ಕೆ.ಅವರು ಮಾತನಾಡಿ ಶುಭಹಾರೈಸಿದರು. ಎಸ್ಡಿಎಂಸಿ ನಿಕಟಪೂರ್ವ ಅಧ್ಯಕ್ಷ ಕರೀಮ್ ಹೇಂತಾರು, ಎಸ್ಡಿಎಂಸಿ ಉಪಾಧ್ಯಕ್ಷೆ ಸುಕನ್ಯ, ಸದಸ್ಯರಾದ ಅಹಮ್ಮದ್ ಕುಂಞ, ಇಸ್ಮಾಯಿಲ್ ಪಾಲ್ತಾಡಿ, ಇಸ್ಮಾಯಿಲ್, ಅಬ್ದುಲ್ಲಾ, ಬದ್ರುದ್ದೀನ್ ಮುಸ್ಲಿಯರ್, ಪೋಷಕರು ಉಪಸ್ಥಿತರಿದ್ದರು.
ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ ಭೇಟಿ:
ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ ರಾಮಕುಂಜರವರನ್ನು ಶಾಲಾ ಸಮಿತಿಯ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿಯ ಬಗ್ಗೆ ಮತ್ತು ಪ್ರೌಢಶಾಲೆ ಆರಂಭಿಸುವ ಕುರಿತ ಬೇಡಿಕೆಯ ಮನವಿಯನ್ನು ಕೃಷ್ಣಪ್ಪ ಅವರಿಗೆ ಸಲ್ಲಿಸಲಾಯಿತು. ಮುಖ್ಯಗುರು ಮಹೇಶ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಿಟಿ ಶಿಕ್ಷಕಿ ರಾಜಶ್ರೀ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ವಿಮಲಾ ವಂದಿಸಿದರು. ಸಹಶಿಕ್ಷಕರಾದ ಗುಲಾಬಿ, ಜಾನಕಿ, ಅತಿಥಿ ಶಿಕ್ಷಕಿಯರಾದ ಉಷಾ, ವಿನುತ, ಝಹೀರಾ, ಶಾಲಾ ನಾಯಕ ಅಫ್ನಾನ್ ಸಹಕರಿಸಿದರು. ಆಲಂಕಾರು, ರಾಮಕುಂಜ ಕ್ಲಸ್ಟರ್ನ ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಸಹಶಿಕ್ಷಕರು ಉಪಸ್ಥಿತರಿದ್ದರು.