ರೋಟರಿ ಸಿಟಿಯಿಂದ ಶಿಕ್ಷಕರ ದಿನಾಚರಣೆ-ಸನ್ಮಾನ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿ ವತಿಯಿಂದ ಸೆ.5 ರಂದು ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ದೈಹಿಕ ಶಿಕ್ಷಕಿ, ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ ರೈರವರು ಮಾತನಾಡುತ್ತಾ ತಮ್ಮ ಶಿಕ್ಷಕ ವೃತ್ತಿ ಜೀವನದ ಅನುಭವವನ್ನು ರೋಟರಿ ಸದಸ್ಯರೊಂದಿಗೆ ಹಂಚಿಕೊಂಡು ತಮ್ಮ ಸಾಧನೆಗೆ ಲಭಿಸಿರುವ ಪ್ರಶಸ್ತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 2023-24 ನೇ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶುಭಲತಾ ಹಾರಾಡಿರವರು ಮಾತನಾಡುತ್ತಾ, ತಮ್ಮ ಶಿಕ್ಷಕ ವೃತ್ತಿ ಜೀವನಕ್ಕೆ ದಾರಿದೀಪರಾಗಿರುವ ಎಲ್ಲಾ ಶಿಕ್ಷಕರನ್ನು ಸ್ಮರಿಸಿ ತಮ್ಮ ಈ ಸಾಧನೆಗೆ ಕಾರಣೀಭೂತರಾದ ಎಲ್ಲರನ್ನು ನೆನಪಿಸಿಕೊಂಡು ಎಲ್ಲರ ಸಹಕಾರದಿಂದ ಮುಖ್ಯೋಪಾಧ್ಯಾಯರಾಗಿ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ. ಈ ಪ್ರಶಸ್ತಿ ನನಗೆ ಮಾತ್ರವಲ್ಲದೆ ನನಗೆ ಸಹಕರಿಸಿದ ಎಲ್ಲರಿಗೂ ಸಂದಾಯವಾಗುತ್ತದೆ ಎಂದರು.

ರೋಟರಿ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್ ಮಾತನಾಡಿ, ಮನೆಯಲ್ಲಿ ತಾಯಿ ಗುರುವಾದರೆ ಶಾಲೆಯಲ್ಲಿ ಶಿಕ್ಷಕರು ಗುರುಗಳಾಗಿದ್ದಾರೆ. ಮಕ್ಕಳನ್ನು ತಿದ್ದಿ ತೀಡಿ ಅವರನ್ನು ಸಮಾಜದ ಉತ್ತಮ ಪ್ರಜೆಗಳಾಗಿ ನಿರ್ಮಿಸುವವರು ಶಿಕ್ಷಕರು. ಆದ್ದರಿಂದ ಶಿಕ್ಷಕರ ಸೇವೆಯನ್ನು ಎಂದಿಗೂ ಮರೆಯಬಾರದು ಎಂದರು.
ಸಭೆಯ ಅಧ್ಯಕ್ಷತೆಯನ್ನು ರೋಟರಿ ಸಿಟಿ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯ ಕಾರ್ತಿ ಪ್ರಾರ್ಥಿಸಿದರು. ಸದಸ್ಯೆ ಕೃಷ್ಣವೇಣಿ ಮುಳಿಯ ಹಾಗೂ ಆನ್ಸ್ ಗುರುವಂದನಾ ಗೀತೆ ಹಾಡಿದರು. ಕಾರ್ಯದರ್ಶಿ ಶ್ಯಾಮಲಾ ಶೆಟ್ಟಿ ವರದಿ ವಾಚಿಸಿದರು. ಮಾಜಿ ಅಧ್ಯಕ್ಷ ಧರ್ಣಪ್ಪ ಗೌಡ ವಂದಿಸಿದರು.

ಶಿಕ್ಷಕರಿಗೆ ಸನ್ಮಾನ:
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಕಲಾಶ್ರೀ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ನಯನಾ ವಿ.ರೈ, 2023-24ನೇ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪುರಸ್ಕೃತ ಶುಭಲತಾ ಹಾರಾಡಿರವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಅಲ್ಲದೆ ಕ್ಲಬ್ ನಲ್ಲಿನ ಶಿಕ್ಷಕ ರೊಟೇರಿಯನ್ಸ್, ಆನ್ಸ್ ಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here