ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0

ಪುತ್ತೂರು: ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯು ನಡೆಯಿತು. ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಸೈಂಟ್ ಅನ್ಸ್ ಡಿ.ಎಡ್ ಕಾಲೇಜಿನ ಗೌರವ ಕನ್ನಡ ಉಪನ್ಯಾಸಕ ಉಮೇಶ್ ಕಾರಂತ ಮಾತನಾಡಿ “ಶಿಕ್ಷಕರ ದಿನಾಚಣೆಯಂದು ನಾವು ಮಹತ್ವವಾದ ವಿಚಾರಗಳನ್ನು ತಿಳಿದುಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳು ಸಚ್ಚಾರಿತ್ರ್ಯವನ್ನ, ಸದಾಚಾರವನ್ನು ಹೊಂದಿ ದೇಶದ ಸತ್ಪ್ರಜೆ ಬಾಳಬೇಕು. ಇದಕ್ಕೆ ಗುರುಗಳ ಮಾರ್ಗದರ್ಶನ ಅಗತ್ಯ. ಶಿಕ್ಷಕರನ್ನು ಸದಾ ಗೌರವಿಸುತ್ತಾ ಸ್ಮರಿಸುತ್ತಾ ಅವರ ಮಾರ್ಗದರ್ಶನ ಪಡೆಯುತ್ತಿದ್ದರೆ ವಿದ್ಯಾರ್ಥಿಗಳು ಮುಂದೆ ಗುರುಗಳೇ ಆಗುತ್ತಾರೆ. ಈ ರೀತಿಯಾದಂತಹ ಸಂಸ್ಕಾರ ಅವರಲ್ಲಿ ಬೆಳಗುತ್ತದೆ” ಎಂದು ಹೇಳಿದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದಂತಹ ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಕೆ ಎಸ್ ಅವರು ಮಾತನಾಡಿ” ಶಿಕ್ಷಕರ ತ್ಯಾಗ ಮನೋಭಾವನೆ ವಿದ್ಯಾರ್ಥಿಗಳನ್ನು ಸದಾ ಕಾಲ ಯಶಸ್ಸಿನ ಕಡೆಗೆ ತಗೊಂಡು ಹೋಗುತ್ತದೆ. ಶಿಕ್ಷಕರನ್ನ ನೋಡಿ ವಿದ್ಯಾರ್ಥಿಗಳು ಕಲಿಯುತ್ತಾರೆ. ಇಂತಹ ಶ್ರೇಷ್ಠ ಗುಣಗಳನ್ನ ಮೈಗೂಡಿಸಿಕೊಂಡಿರುವ ಎಲ್ಲ ಶಿಕ್ಷಕರನ್ನು ಸ್ಮರಿಸುವಂತದ್ದು ನಮ್ಮೆಲ್ಲರ ಕರ್ತವ್ಯ” ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿ ಅದಂತಹ ತನ್ಸಿಫ್ ಮತ್ತು ಪ್ರೌಢಶಾಲೆಯ ಶ್ರವಣ್ ಶಿಕ್ಷಕರ ದಿನಾಚರಣೆಯ ಕುರಿತಾಗಿ ಭಾಷಣವನ್ನು ಮಾಡಿದರು.”


ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಕೆ ಮತ್ತು ಪ್ರೌಢಶಾಲಾ ವಿಭಾಗದ ಮುಖ್ಯ ಗುರು ಸತೀಶ್ ಭಟ್ ಸಂದರ್ಭೋಚಿತವಾಗಿ ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಲಕ್ಷ್ಮಿನಾರಾಯಣರಾವ್ ಅತೂರು ಸ್ವಾಗತಿಸಿ, ಹರ್ಷ ಮತ್ತು ಬಳಗ ಪ್ರಾರ್ಥಿಸಿ, ಕಾಲೇಜು ವಿದ್ಯಾರ್ಥಿನಿ ಶ್ರೀರಕ್ಷಾ ವಂದಿಸಿ, ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಚಿನ್ಮಯಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here