ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಪೊರೇಟ್ ಎಕ್ಸ್ ಪೆಕ್ಟೇಷನ್ ಕಾರ್ಯಕ್ರಮ

0

ಉತ್ತಮ ಸಂವಹನ ಕೌಶಲ್ಯ ಕಾರ್ಪೊರೇಟ್ ಜಗತ್ತಿಗೆ ಅನಿವಾರ್ಯ : ಲಲಿತ್ ಕುಮಾರ್ ರೈ

ಪುತ್ತೂರು: ಉತ್ತಮ ಸಂವಹನ ಕೌಶಲ್ಯ ಕಾರ್ಪೊರೇಟ್ ಜಗತ್ತಿಗೆ ಅನಿವಾರ್ಯ, ಉದ್ಯೋಗಾಕಾಂಕ್ಷಿಗಳು ತಮ್ಮ ವಿಚಾರವನ್ನು ವ್ಯಕ್ತಪಡಿಸುವ ಸಾಮರ್ಥ್ಯವನ್ನು ಹೊಂದಿರಬೇಕು ಎಂದು ಮಂಗಳೂರು ಇನ್ಫೋಸಿಸ್ ಐಬಿಪಿಎಂ ಮುಖ್ಯಸ್ಥ ಲಲಿತ್ ಕುಮಾರ್ ರೈ  ಹೇಳಿದರು.

ಪ್ರಸ್ತುತ ವಿದ್ಯಾರ್ಥಿಗಳು ಕೇವಲ ಪುಸ್ತಕದ ಓದಿಗೆ ಸೀಮಿತರಾಗುತ್ತಿದ್ದು, ಕಾರ್ಪೊರೇಟ್ ಜಗತ್ತು ಉದ್ಯೋಗ ಆಕಾಂಕ್ಷಿಗಳಿಂದ ಹಲವಾರು ವಿಷಯಗಳನ್ನು ಅಪೇಕ್ಷಿಸುತ್ತದೆ, ವಿದ್ಯಾರ್ಥಿಗಳು ಸಿಕ್ಕಿದ ವಾತಾವರಣಕ್ಕೆ ಹೊಂದಿಕೊಳ್ಳುವ ಗುಣವನ್ನು ಬೆಳೆಸಬೇಕು ಅದೇ ರೀತಿ ಪ್ರಸ್ತುತ ಜಗತ್ತಿನ ಆಗುಹೋಗುಗಳ ಮಾಹಿತಿಗಳನ್ನು ಗಳಿಸಲು ದಿನಪತ್ರಿಕೆಯನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಅವರು  ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿನ  ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶ ಆಯೋಜಿಸಿದ ‘” ಕಾರ್ಪೊರೇಟ್ ಎಕ್ಸ್ ಪೆಕ್ಟೇಷನ್ “ಎಂಬ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ವರದರಾಜ ಚಂದ್ರಗಿರಿ ಮಾತನಾಡಿ, ಹಿಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪದವಿ ಶಿಕ್ಷಣದ ನಂತರದ ದಿನಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದರು, ಆದರೆ ಪ್ರಸ್ತುತ ದಿನಗಳಲ್ಲಿ ಪದವಿಯ ನಂತರ ವಿದ್ಯಾರ್ಥಿಗಳು ಉದ್ಯೋಗ ಜಗತ್ತಿಗೆ ಕಾಲಿಟ್ಟು ಸಾಧನೆಯನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ, ವಿದ್ಯಾರ್ಥಿಗಳು ಔದ್ಯೋಗಿಕ ಜಗತ್ತಿನ ಸವಾಲುಗಳನ್ನು ಎದುರಿಸಲು ಬೇಕಾದ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಂಚಾಲಕ ಡಾ. ಕಾಂತೇಶ ಎಸ್, ಗ್ರಂಥಪಾಲಕ ರಾಮ ಕೆ, ವೃತ್ತಿ ಮಾರ್ಗದರ್ಶನ ಹಾಗೂ ಉದ್ಯೋಗ ಕೋಶದ ಸಂಚಾಲಕ ಪ್ರೊ. ಅನಂತ ಭಟ್, ವಾಣಿಜ್ಯ ವಿಭಾಗ ಮುಖ್ಯಸ್ಥ ಪ್ರೊ. ರಾಮಚಂದ್ರ ಡಿ, ವ್ಯವಹಾರ ಅಧ್ಯಯನ ಪ್ರಾಧ್ಯಾಪಕ ಡಾ. ಯೋಗೀಶ್ ಎಲ್ ಎನ್ ಮತ್ತು ಅಂತಿಮ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರೊ. ಅನಂತ ಭಟ್ ಸ್ವಾಗತಿಸಿದರು, ಅಂತಿಮ ಬಿಎ ವಿದ್ಯಾರ್ಥಿನಿ ರಮ್ಯಶ್ರೀ ಧನ್ಯವಾದ ಸಮರ್ಪಿಸಿದರು. ವಿದ್ಯಾಶ್ರೀ , ಸಮನ್ವಿ, ರಕ್ಷಿತಾ ಪ್ರಾರ್ಥಿಸಿದರು. ಪ್ಲೇಸ್ ಮೆಂಟ್ ಸೆಲ್ ವಿದ್ಯಾರ್ಥಿ ಸಂಚಾಲಕ ಅನನ್ಯ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here