ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾಂಪಸ್ ನಿರ್ದೇಶಕ ವಂ| ಫಾ| ಸ್ಟಾನಿ ಪಿಂಟೊ ವಹಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಿರ್ದಿಷ್ಟಗುರಿ, ಸಾಧಿಸುವ ಛಲ, ಪ್ರಾಮಾಣಿಕ ಪ್ರಯತ್ನ ಇದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು. ಶಿಕ್ಷಕರು ತಮ್ಮ ಜೀವನವನ್ನು ರೂಪಿಸಲು ತಮ್ಮನ್ನು ತಾವೇ ಅರ್ಪಿಸಿಕೊಳ್ಳುತ್ತಾರೆ ಎಂದರು.
ಶಾಲಾ ಹಿರಿಯ ಶಿಕ್ಷಕಿ ಐವಿ ಗ್ರೆಟ್ಟಾ ಪಾಯಸ್ ಗೌರವ ಅತಿಥಿಯಾಗಿ ವಿದ್ಯಾರ್ಥಿಗೆ ವಿವೇಕ ಕೊಟ್ಟು ಜ್ಞಾನದ ದೀವಿಗೆ ಹಚ್ಚಿ, ಅರಿವಿನ ಕಿಡಿ ಹೊತ್ತಿಸಿ, ಬಾಳಲ್ಲಿ ಬೆಳಕು ಹರಿಸುವವರೆ ನಿಜವಾದ ಶಿಕ್ಷಕರು, ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂದು ಹೇಳಿದರು.ಅತಿಥಿಯಾಗಿ ಆಗಮಿಸಿದ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಟ್ ಡಿ ಸೋಜಾ ಮಾತನಾಡಿ ಶಿಕ್ಷಕರು ಸಮಾಜದ ಅತ್ಯಂತ ಜವಾಬ್ದಾರಿಯುತ ಸದಸ್ಯರು ಎಂದು ಹೇಳಿದರು.
ಶಾಲೆಯ ಮುಖ್ಯ ಗುರುಗಳಾದ ವಂ| ಫಾ| ಮ್ಯಾಕ್ಸಿಂ ಡಿ ಸೋಜಾ ಎಂ.ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸರ್ವಗುಣ ಸಂಪನ್ನರಾಗಿ, ಶಿಸ್ತಿನಿಂದ ವರ್ತಿಸಿ, ಶಿಕ್ಷಕರನ್ನು, ಹಿರಿಯರನ್ನು ಗೌರವಿಸಿ, ವಿದ್ಯಾರ್ಜನೆಪಡೆದು, ಸುಸಂಸ್ಕೃತರಾಗಿ ಉತ್ತಮ ಫಲಿತಾಂಶದೊಂದಿಗೆ ವ್ಯಕ್ತಿತ್ವವನ್ನು ಕಟ್ಟಿಕೊಂಡರೆ ಅದುವೇ ಶಿಕ್ಷಕರಿಗೆ ಕೊಡುವ ಬಹುಮಾನ ಎಂದು ಕರೆಯಿತ್ತರು.
ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಮೌರಿಸ್ ಕುಟಿನ್ಹಾ ಅವರು ಎಲ್ಲಾ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು.ಶಾಲೆಯ ಎಲ್ಲಾ ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ವರ್ಗದ ಸದಸ್ಯರು ಹಾಗೂ ಶಾಲಾ ನಾಯಕ ಅದ್ವಿತ್ ರೈ ಈ ಸಭೆಯಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
,ಹತ್ತನೇ ತರಗತಿಯ ತನ್ವಿ ಶಿಕ್ಷಕ ದಿನಾಚರಣೆಯ ಮಹತ್ವದ ಬಗ್ಗೆ ಹೇಳಿದಳು.ನಂತರ ಶಿಕ್ಷಕರಿಗೆ ಶುಭಾಶಯ ಗೀತೆಯನ್ನು ವಿದ್ಯಾರ್ಥಿಗಳು ಹಾಡಿದರು. ಕ್ರೀಡಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳಾದ ಕ್ಯಾಂಪಸ್ ನಿರ್ದೇಶಕ ವಂ| ಫಾ| ಸ್ಟಾನಿ ಪಿಂಟೊ ಬಹುಮಾನವನ್ನು ವಿತರಿಸಿದರು.
ಮುಖ್ಯಶಿಕ್ಷಕರು ಎಲ್ಲಾಶಿಕ್ಷಕ ಶಿಕ್ಷಕೇತರ ವರ್ಗಕ್ಕೆ ಆಡಳಿತ ಮಂಡಳಿಯ ವತಿಯಿಂದ ಕಿರುಕಾಣಿಕೆಯನ್ನು ನೀಡಿದರು.ಶಾಲಾ ವಿದ್ಯಾರ್ಥಿ ನಾಯಕ ಅದ್ವಿತ್ ರೈ ಸ್ವಾಗತಿಸಿ, ಶಾಲಾ ಉಪನಾಯಕಿ ಶ್ರೀಶಾ ಆರ್.ಎಸ್. ವಂದಿಸಿ, ಧನ್ಯಶ್ರೀ ನಿರೂಪಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ಜರುಗಿತು.ಎಲ್ಲಾ ಶಿಕ್ಷಕ ವೃಂದದವರು ಸಹಕರಿಸಿದರು.