ಸಂಪ್ಯ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ರೂ.3.59 ಲಕ್ಷ ಲಾಭ, ಶೇ.15 ಡಿವಿಡೆಂಡ್, ರೂ.1.09 ಬೋನಸ್

ಪುತ್ತೂರು: ಸಂಪ್ಯ ಹಾಲು ಉತ್ಪಾದಕರ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ.3,59,239.77ಲಾಭಗಳಿಸಿ ಸದಸ್ಯರಿಗೆ ಶೇ.15 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ‌ ಲೀಟರ್ ಹಾಲಿಗೆ ರೂ.1.09 ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಮೂಲಚಂದ್ರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಸೆ.8ರಂದು ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ವರದಿ ವರ್ಷದಲ್ಲಿ1,52,108.2 ಲೀಟರ್ ಹಾಲು ಖರೀದಿಸಿ 20,445.50 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಿದೆ. ಇದರಿಂದ ಸಂಘಕ್ಕೆ ರೂ.9,12,595 ಆದಾಯ ಬಂದಿರುತ್ತದೆ. 824.20 ಲೀಟರ್ ಮಾದರಿ ಹಾಲು ಆಗಿರುತ್ತದೆ. 570 ಕೆ.ಜಿ ಲವಣ ಮಿಶ್ರಣ ಮಾರಾಟ ಮಾಡಿದೆ. ಸಂಘದ ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು ರೂ.3,59,239.77 ನಿವ್ವಳ ಲಾಭಗಳಿಸಿದೆ. ಲೆಕ್ಕ ಪರಿಶೋಧನೆಯಲ್ಲಿ ಸಂಘವು ಎ ಶ್ರೇಣಿ ಪಡೆದುಕೊಂಡಿದೆ ಎಂದರು.
ದ.ಕ ಹಾಲು ಹೈನುಗಾರಿಕೆಗೆ ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್ ಮಾತನಾಡಿ, ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಅಧಿಕ ಲಾಭ ಪಡೆಯುವಂತೆ ತಿಳಿಸಿದರು.


ಬಹುಮಾನ ವಿತರಣೆ:
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ವಿಶಾಲಾಕ್ಷಿ ಕರಿಮುಗೇರು(ಪ್ರ), ಗೀತಾ ಕುಶಾಲಪ್ಪ ಗೌಡ ಬಾರಿಕೆ(ದ್ವಿ) ಹಾಗೂ ಎಲ್ಲಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.


ಉಪಾಧ್ಯಕ್ಷ ರಮಾನಂದ ಬಲ್ಯಾಯ, ನಿರ್ದೇಶಕರಾದ ಶಿವಪ್ರಸಾದ್ ಕೆ., ಗೀತಾ ಬಾರಿಕೆ, ಹೇಮಲತಾ ಕುಕ್ಕಾಡಿ, ಗಿರಿಜಾ ಉದಯಗಿರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ದೇಶಕ ವಿಜಯ ಬಿ.ಎಸ್. ಸ್ವಾಗತಿಸಿದರು. ಕಾರ್ಯದರ್ಶಿ ರಜತ ವರದಿ,‌ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ಶಂಕರನಾರಾಯಣ ಭಟ್ ಕೆ.ವಂದಿಸಿದರು. ಸಹಾಯಕಿ ಪ್ರೇಮ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here