ನಾಟಿವೈದ್ಯೆ ರೇವತಿ ಬಾಳಪ್ಪ ಪೂಜಾರಿ ತಿಂಗಳಾಡಿ ನಿಧನ

0

ಪುತ್ತೂರು: ಹಿರಿಯ ನಾಟಿ ವೈದ್ಯರಾಗಿದ್ದ, ತಿಂಗಳಾಡಿ ಸಮೀಪದ ಕನ್ನಡಮೂಲೆ ದಿ. ಬಾಳಪ್ಪ ಪೂಜಾರಿ ಅವರ ಪತ್ನಿ ರೇವತಿ ಬಾಳಪ್ಪ ಪೂಜಾರಿ (76.ವ) ಅವರು ಸೆ.7ರಂದು ಸಂಜೆ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ತಮ್ಮ ತಾಯಿಯಿಂದ ಬಳುವಳಿಯಾಗಿ ಬಂದಿದ್ದ ನಾಟಿ ವೈದ್ಯಕೀಯ ವಿದ್ಯೆಯ ಮೂಲಕ ಸಾವಿರಾರು ಮಂದಿಗೆ ನಾಟಿ ಮದ್ದು ನೀಡುತ್ತಿದ್ದರು. ಇವರ ಸೇವೆಯನ್ನು ಗುರುತಿಸಿ ಕೆದಂಬಾಡಿ ಬಿಲ್ಲವ ಗ್ರಾಮ ಸಮಿತಿಯೂ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಗೌರವಿಸಿದ್ದರು. ಪತ್ರಕರ್ತ ಸುಧಾಕರ ಸುವರ್ಣ ಸೇರಿದಂತೆ ನಾಲ್ವರು ಪುತ್ರರು, ಪುತ್ರಿ, ಅಳಿಯ, ಸೊಸೆಯಂದಿರು, ಒಂಭತ್ತು ಮೊಮ್ಮಕ್ಕಳು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here