ಉದನೆ: ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ, ಗುರುವಂದನೆ

0

ನೆಲ್ಯಾಡಿ: ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ಹಾಗೂ ಸೈಂಟ್ ಆಂಟನೀಸ್ ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನೆ ಕಾರ್ಯಕ್ರಮ ನಡೆಯಿತು.


ಬೆಳಿಗ್ಗೆ ವಾದ್ಯ ಘೋಷಗಳೊಂದಿಗೆ ವಿದ್ಯಾರ್ಥಿಗಳ ನೇತೃತ್ವದಲ್ಲಿ ಶಿಕ್ಷಕರನ್ನು ಮೆರವಣಿಗೆಯಲ್ಲಿ ಕರೆತಂದು ಪುಷ್ಪಾರ್ಚನೆ ಮಾಡಲಾಯಿತು. ಸಂಸ್ಥೆಯ ಸಂಚಾಲಕ ರೆ.ಫಾ ಹನಿ ಜೇಕಬ್‌ರವರು ಶಿಕ್ಷಕರನ್ನು, ಕಛೇರಿ ಸಿಬ್ಬಂದಿಗಳನ್ನು, ಶಾಲಾ ವಾಹನ ಚಾಲಕರನ್ನು, ಅಡುಗೆ ಸಹಾಯಕರನ್ನು ಶಾಲು ಹೊದಿಸಿ, ಕಾಣಿಕೆ ನೀಡಿ ಗೌರವಿಸಿದರು. ಬಳಿಕ ವಿದ್ಯಾರ್ಥಿಗಳು ಶಿಕ್ಷಕರಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಪಟ್ಟರು. ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ವಿವಿಧ ಮನರಂಜನಾ ಆಟ ನಡೆಸಿ ಬಹುಮಾನ ವಿತರಿಸಿದರು. ಮಧ್ಯಾಹ್ನ ನಂತರ ಸಭಾ ಕಾರ್ಯಕ್ರಮ ನೆರವೇರಿತು. ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿ ಸದಸ್ಯ ಕಮಾಂಡರ್ ಇ.ಪಿ.ಐಸಾಕ್ ಹಾಗೂ ಸಲೀಬಾ ಮ್ಯಾಥ್ಯೂ ಉಪಸ್ಥಿತರಿದ್ದರು.
ಹಿರಿಯ ನ್ಯಾಯವಾದಿ, ಸಂಸ್ಥೆಯ ಹಿತೈಷಿ ಶಿವಪ್ರಸಾದ್ ಪುತ್ತಿಲರವರು ಸಂಸ್ಥೆಯ ತ್ರೋಬಾಲ್ ಕ್ರೀಡಾಪಟುಗಳಿಗೆ 30,000 ರೂ.ವೆಚ್ಚದಲ್ಲಿ ಕ್ರೀಡಾ ಉಡುಪನ್ನು ಪ್ರಾಯೋಜಿಸಿ ಇದೇ ಸಂದರ್ಭದಲ್ಲಿ ಹಸ್ತಾಂತರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಿತು.

LEAVE A REPLY

Please enter your comment!
Please enter your name here