ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2023-24 ನೇ ಸಾಲಿನ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ತ್ರೋಬಾಲ್ ಪಂದ್ಯಾಟವು ಸೆ.೯ರಂದು ನಡೆಯಿತು.
ಶಾಲಾ ಆಡಳಿತ ಮಂಡಳಿಯ ಖಜಾಂಜಿ ಪ್ರಭಾಕರ ಶೆಟ್ಟಿಯವರು ಪಂದ್ಯಾಟವನ್ನು ನೆರವೇರಿಸಿದರು.
ಸಂಸ್ಥೆಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಧರ್ ಶೆಟ್ಟಿ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸೋಲು ಗೆಲುವನ್ನು ಸ್ಪರ್ದಾಳುಗಳು ಸಮಾನವಾಗಿ ಸ್ವೀಕರಿಸಬೇಕೆಂದು ತಿಳಿಸಿದರು. ವಿಟ್ಲದ ದೈಹಿಕ ಶಿಕ್ಷಣ ನೋಡೆಲ್ ಅಧಿಕಾರಿ ರಾಜೇಂದ್ರ ರೈ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಜಿಲ್ಲಾ ದೈನಿಕ ಶಿಕ್ಷಣ ಸಂಘದ ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಉಮಾನಾಥ ರೈ, ವಿಟ್ಲ ಸಂಪನ್ಮೂಲ ಅಧಿಕಾರಿ ಬಿಂದು, ಪ್ರಾಂಶುಪಾಲರಾದ ಜಯರಾಮ ರೈ, ಉಪ ಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು.
ಹತ್ತನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಸಹ ಶಿಕ್ಷಕರಾದ ಗೀತಾ ಸ್ವಾಗತಿಸಿದರು, ಸೌಮ್ಯ ಸಾವಿತ್ರಿ ವಂದಿಸಿದರು, ಕವಿತಾ ಎಸ್ ಗೌಡ ಕಾರ್ಯಕ್ರಮ ನಿರೂಪಿಸಿದರು.ಜೇಸಿ ಸಂಸ್ಥೆಯ ದೈಹಿಕ ಶಿಕ್ಷಕ ಭಾನುಪ್ರಕಾಶ್ ಹಾಗೂ ಶಶಿಕಲಾ ಸಹಕರಿಸಿದರು.
ಬಾಲಕರ ವಿಭಾಗದಲ್ಲಿ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ, ವಿಜಯಡ್ಕ ಸಂತ ಲಾರೆನ್ಸ್ ಪ್ರೌಢಶಾಲೆ ದ್ವಿತೀಯ,
ಬಾಲಕಿಯರ ವಿಭಾಗ ಪ್ರಥಮ ಶ್ರೀ ಸರಸ್ವತಿ ವಿದ್ಯಾಲಯ, ಕನ್ಯಾನ. ದ್ವಿತೀಯ ಸರಕಾರಿ ಹಿರಿಯ ಪ್ರೌಡಶಾಲೆ, ಸೂರ್ಯ ಪಡೆದುಕೊಂಡಿತು.