ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಖೋ ಖೋ ಪಂದ್ಯಾಟ-ಹಳೆನೇರೆಂಕಿ ಶಾಲಾ ಬಾಲಕ, ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ

0

ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಇವರ ಆಶ್ರಯದಲ್ಲಿ 34 ನೆಕ್ಕಿಲಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಖೋ ಖೋ ಪಂದ್ಯಾಟದ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಹಳೆನೇರೆಂಕಿ ಸರಕಾರಿ ಉನ್ನತ ಹಿ.ಪ್ರಾ.ಶಾಲಾ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಬಾಲಕರ ವಿಭಾಗದಲ್ಲಿ ಶಾಲೆಯ 7ನೇ ತರಗತಿಯ ಜಯೇಶ, ನೂತನ್, ಪ್ರಜ್ವಲ್, ಪೃಥ್ವಿರಾಜ್, ಪ್ರಥಮ್, ಚೈತ್ರೇಶ್, ಶ್ರವಣ್, ಸೃಜನ್, 6ನೇ ತರಗತಿಯ ಅನುದೀಪ್, ದಿಶಾನ್, ಕಿಶಾನ್, ಎಂ.ಅಕ್ಷಯ್ ಗೌಡ, ಶಮಾಮ್ ಅಹಮ್ಮದ್ ತಂಡವನ್ನು ಪ್ರತಿನಿಧಿಸಿದ್ದರು. ಬಾಲಕಿಯರ ವಿಭಾಗದಲ್ಲಿ 7ನೇ ತರಗತಿಯ ಜೋತಿಕಾ, ಜೀವಿಕಾ, ಮೇಘಶ್ರೀ, ನಂದಿತಾ, ತನ್ವಿ, ಕೃತಿಕಾ, ಅಶ್ವಿತಾ, 6ನೇ ತರಗತಿಯ ರಿಶಿಕಾ, ಚರಣ್ಯ, ಹೇಮಾನ್ಯ, ಕೀರ್ತನಾ ಪ್ರತಿನಿಧಿಸಿದ್ದರು. ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾದ ಲಿಖಿತ್, ಅಶ್ಪಲ್, ಕೃತಿಯವರು ಜಿಲ್ಲಾ ಮಟ್ಟದಲ್ಲಿ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಮಾಧವ ಗೌಡರವರು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿದ್ದರು. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡ, ಸಹಾಯಕ ಶಿಕ್ಷಕಿ ಅಕ್ಷತಾ ಕೆ.ತರಬೇತಿ ನೀಡಿದ್ದರು. ಶಾಲಾ ಮುಖ್ಯಶಿಕ್ಷಕ ವೈ.ಸಾಂತಪ್ಪ ಗೌಡ, ಶಿಕ್ಷಕರಾದ ಶಶಿಕಲಾ, ಗೀತಾಕುಮಾರ್, ಮಯೂರ್ ಪಿ., ನವೀನ ಎ.,ಮಾರ್ಗದರ್ಶನ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಗೌಡ ಮರಂಕಾಡಿಯವರು ಪ್ರೋತ್ಸಾಹಿಸಿದರು. ಆಲಂಕಾರು ಜೇಸಿಐ ಅಧ್ಯಕ್ಷ ಲಕ್ಮೀನಾರಾಯಣ ಅಲೆಪ್ಪಾಡಿಯವರು ಮಕ್ಕಳಿಗೆ ಹಣ್ಣು ಹಂಪಲು ನೀಡಿ ಸಹಕರಿಸಿದರು.

LEAVE A REPLY

Please enter your comment!
Please enter your name here