ಸವಣೂರು ವಿದ್ಯಾರಶ್ಮಿಯಲ್ಲಿ ಆಧ್ಯಾತ್ಮಿಕ ಶಿಕ್ಷಣ ಶಿಬಿರ

0

ಸವಣೂರು: ಶ್ರೀ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು ಹಾಗೂ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಸವಣೂರು ಇವರ ಜಂಟಿ ಆಶ್ರಯದಲ್ಲಿ ಭಗವಾನ್ ಶ್ರೀ. ಸತ್ಯಸಾಯಿ ಬಾಬಾರವರ ದಿವ್ಯ ಅನುಗ್ರಹದೊಂದಿಗೆ ವಿದ್ಯಾರಶ್ಮಿ ಪದವಿ ಕಾಲೇಜಿನ ವಿದ್ಯಾಸಿಂಚನ ಸಭಾಂಗಣದಲ್ಲಿ 2 ದಿನಗಳ ಆಧ್ಯಾತ್ಮಿಕ ಶಿಕ್ಷಣ ಶಿಬಿರ ಸೆ.8,9ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ದಕ್ಷಿಣ ಕನ್ನಡ ಜಿಲ್ಲೆ ಇದರ ಜಿಲ್ಲಾ ಅಧ್ಯಕ್ಷ ಪ್ರಸನ್ನ ಎನ್.ಭಟ್ ಮಾತನಾಡಿ ಸರ್ವಧರ್ಮ ಸಮನ್ವತೆಯ ಮಹತ್ವದ ಕುರಿತು ಶಿಭಿರಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ಇಡಿ. ಅಶ್ವಿನ್ ಎಲ್ ಶೆಟ್ಟಿಯವರು ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆಗೆ ಆಧ್ಯಾತ್ಮಿಕ ಶಿಕ್ಷಣವು ಪೂರಕವಾದದ್ದು, ಇದು ನಮ್ಮನ್ನು ಸನ್ಮಾರ್ಗದ ಕಡೆಗೆ ಕೊಂಡೊಯ್ಯುತ್ತದೆ ಎಂದು ನುಡಿದರು.

ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಸ್ವಾಗತಿಸಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ. ವಂದಿಸಿದರು.ಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾ ಶೈಕ್ಷಣಿಕ ಸಂಯೋಜಕಿ ಮೂಕಾಂಬಿಕಾ ಎನ್.ರಾವ್ , ಕರ್ನಾಟಕ ಇದರ ರಾಜ್ಯ ಎಜ್ಯುಕೇರ್ ಸಂಯೋಜಕ ಜಗನ್ನಾಥ ನಾಡಿಗೇರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ನಂತರ ನಡೆದ ಆಧ್ಯಾತ್ಮಿಕ ಶಿಕ್ಷಣ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿ ಸತ್ಯಸಾಯಿ ಸೇವಾ ಸಂಸ್ಥೆಗಳು ಕರ್ನಾಟಕ ಇದರ ರಾಜ್ಯ ಎಜ್ಯುಕೇರ್ ಸಂಯೋಜಕರಾದ ಜಗನ್ನಾಥ್ ನಾಡಿಗೇರ್ ಮೌಲ್ಯಾಧಾರಿತ ಸಮಾಜ ಮತ್ತು ಸತ್ಯಸಾಯಿ ಪ್ರೇರಣ, ಎಸ್.ಡಿ.ಎಂ ಕಾನೂನು ಮಹಾವಿದ್ಯಾಲಯ ಮಂಗಳೂರು ಇದರ ಸಹಾಯಕ ಪ್ರಾಧ್ಯಾಪಕ ಡಾ. ಸಂತೋಷ್ ಪ್ರಭು ಇವರು ವಿದ್ಯಾರ್ಥಿ ಜೀವನದಲ್ಲಿ ಆಧ್ಯಾತ್ಮಿಕತೆ, ಸಂಸ್ಕೃತ ವಿಧ್ವಾಂಸ ವಿಘ್ನೆಷ್ ಮಾನವ ಜನ್ಮ, ಭಾರತೀಯರ ಮೂಲ ಚಿಂತನೆ,ಪುತ್ತೂರು ಸುದಾನ ಪ್ರೌಢಶಾಲೆ ಶಿಕ್ಷಕಿ ಕವಿತಾ ಅಡೂರು ಬಾಳಿಗೊಂದು ನಂಬಿಕೆ, ಸಂತಫಿಲೋಮಿನಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಸುಬೇರ್ ಕುರಾನ್ ಸಂದೇಶದ ಬಗ್ಗೆ, ಬೆಳ್ತಂಗಡಿ ನಿವೃತ್ತ ಪ್ರಾಂಶುಪಾಲ ಪ್ರೊ. ಎ ಕೃಷ್ಣಪ್ಪ ಪೂಜಾರಿ ಇವರು ರಾಮಾಯಣದ ಆದರ್ಶಗಳು,ಪ್ರಾಂಶುಪಾಲರು ಸಂತಫಿಲೋಮಿನ ಪದವಿಪೂರ್ವ ಕಾಲೇಜು ಪುತ್ತೂರಿನ ಅಶೋಕ ರಯಾನ್ ಕ್ರಾಸ್ತಾ ಇವರು ಸಹಬಾಳ್ವೆಯ ಸಮಾಜಕ್ಕೆ ಕ್ರೈಸ್ತ ತತ್ವಗಳು, ಶ್ರೀ.ಸತ್ಯಸಾಯಿ ಸೇವಾಸಂಸ್ಥೆಗಳು ಕರ್ನಾಟಕ ಇದರ ರಾಜ್ಯ ಶೈಕ್ಷಣಿಕ ಸಂಯೋಜಕರಾದ ಸುರೇಶ್ ಶೆಟ್ಟಿ ಇವರು ಸರ್ವಧರ್ಮ ಸಮನ್ವಯದ ಕುರಿತು ಮಾಹಿತಿಯನ್ನು ನೀಡಿದರು.

ಇದೇ ಸಂದರ್ಭದಲ್ಲಿ ಚೈತ್ರಿಕಾ ಅಜಯರಾಮ್ ಕೋಡಿಬೈಲು ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ.ಕೆ.ಸೀತಾರಾಮ ರೈ ಇವರು ಜಗತ್ತಿನ ಎಲ್ಲಾ ಧರ್ಮಗಳಲ್ಲೂ ಒಳಿತಿನ ಬೋಧನೆಗಳಿವೆ ಎಲ್ಲಾ ಧರ್ಮೀಯರು ಒಳಿತನ್ನೇ ಬಯಸುತ್ತಾರೆ. ಸೇವೆಯೇ ನಮ್ಮ ಬದುಕಿನ ಮೂಲ ಉದ್ದೇಶವೆಂದು ನುಡಿದರು.

ತೃತೀಯ ಬಿ.ಎ ವಿದ್ಯಾರ್ಥಿಯಾದ ಶೋಭಿತಾ ರವರ ಪ್ರಾರ್ಥಿಸಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಪ್ರತಿಭಾ ಭಟ್ ಸ್ವಾಗತಿಸಿ ,ಶ್ರೀ. ಸತ್ಯಸಾಯಿ ಸೇವಾಸಮಿತಿ ಪುತ್ತೂರಿನ ಸಂಚಾಲಕ ರಘುನಾಥ ರೈ ವಂದಿಸಿದರು. ನಿರೂಪಣೆಯನ್ನು ತೃತೀಯ ಬಿ.ಎ ವಿದ್ಯಾರ್ಥಿಯಾದ ಶಮೀರ್ ಹಾಗೂ ತೃತೀಯ ಬಿ.ಕಾಂ ನ ವಿದ್ಯಾರ್ಥಿಯಾದ ಸಿ.ಜೆ ಮಹಮ್ಮದ್ ಸಾಧಿಕ್ ನಿರ್ವಹಿಸಿದರು.

LEAVE A REPLY

Please enter your comment!
Please enter your name here