





ಉಪ್ಪಿನಂಗಡಿ: ಕಟ್ಟಡಕ್ಕೆ ಅಕ್ರಮ ಪ್ರವೇಶ ಮಾಡಿ ಹಾನಿಗೊಳಿಸಿದ್ದಲ್ಲದೆ, ಕೊಲೆ ಬೆದರಿಕೆಯೊಡ್ಡಿದ ಬಗ್ಗೆ ನೆಕ್ಕಿಲಾಡಿ ಗ್ರಾಮದ ಜಗಜೇವನ ರೈ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಆರೋಪಿಗಳಾದ ಸುದರ್ಶನ್, ತಿಮ್ಮಪ್ಪ ಗೌಡ, ವಸಂತ ಕುಂಟಿನಿ, ರವಿನಂದನ್ ಹೆಗ್ಡೆ, ನಾಗರಾಜ, ಶರೀಫ್ ಹಾಗೂ ಇತರರು ತನಗೆ ಸೇರಿದ ಕಟ್ಟಡಕ್ಕೆ ಅಕ್ರಮ ಪ್ರವೇಶ ಮಾಡಿ ಮೂರು ಕಂಬಗಳನ್ನು ಬೀಳಿಸಿ, ಕಟ್ಟಡದ ಹಂಚುಗಳಿಗೆ ಹಾನಿ ಮಾಡಿದ್ದಲ್ಲದೆ, ಕಟ್ಟಡದ ಒಳಗೆ ಮಳೆ ನೀರು ಬೀಳುವಂತೆ ಮಾಡಿ ನಷ್ಟ ಉಂಟು ಮಾಡಿದ್ದಾರೆ. ಇವರ ಈ ಕೃತ್ಯವನ್ನು ವಿರೋಧಿಸಿದಾಗ ತನ್ನ ಮೇಲೆ ಆರೋಪಿಗಳು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














