ಪುತ್ತೂರು: ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕಡಬ, ಪಶು ಚಿಕಿತ್ಸಾಲಯ ಕಲ್ಲುಗುಡ್ಡೆ, ಗ್ರಾಮ ಪಂಚಾಯತ್ ನೂಜಿಬಾಳ್ತಿಲ ಇವುಗಳ ಸಹಯೋಗದೊಂದಿಗೆ ಶ್ವಾನಗಳಿಗೆ ಹುಚ್ಚು ನಾಯಿ ರೋಗ ನಿರೋಧಕ ಉಚಿತ ಲಸಿಕಾ ಶಿಬಿರ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಸೆ.11ರಂದು ನಡೆಯಿತು. ಗ್ರಾ.ಪಂ ವಠಾರದಲ್ಲಿ ಲಸಿಕಾ ಶಿಬಿರಕ್ಕೆ ಚಾಲನೆ ನೀಡಲಾಯಿತು.
ನೂಜಿಬಾಳ್ತಿಲ ಗ್ರಾ.ಪಂ ಅಧ್ಯಕ್ಷೆ ಚಂದ್ರಾವತಿ, ಉಪಾಧ್ಯಕ್ಷ ಚಂದ್ರಶೇಖರ ಹಳೆನೂಜಿ, ಪಿಡಿಓ ಗುರುವ ಎಸ್, ಕಡಬ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಜಿತ್ ಎಂ.ಸಿ, ಕಲ್ಲುಗುಡ್ಡೆ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಡಾ. ಮಲ್ಲಿಕಾ ಎನ್, ಪಶು ವೈದ್ಯ ಪರೀಕ್ಷಕ ರವೀಂದ್ರ ಅರಿಗ, ಕಡಬ ಪಶು ಆಸ್ಪತ್ರೆಯ ಅಧಿಕಾರಿ ವಿಶ್ವನಾಥ್, ನೆಲ್ಯಾಡಿ ಪಿವಿಸಿ ಡಿ ದರ್ಜೆ ನೌಕರ ಉದಯಶಂಕರ್, ಕಡಬ ಪಶು ಆಸ್ಪತ್ರೆಯ ಡಿ ದಜೆರ್ಯಯ ನೌಕರ ರವಿತೇಜ,ಗ್ರಾಪಂ ಸದಸ್ಯ ಪಿ.ಜೆ ಜೋಸೆಫ್, ನೂಜಿಬಾಳ್ತಿಲ ಗ್ರಾ.ಪಂ ಪಶುಸಖಿ ಶೀಲಾವತಿ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.