ಮುರುಳ್ಯ ಗ್ರಾ. ಪಂ. ನಲ್ಲಿ ಪೋಷಣ್ ಅಭಿಯಾನ, ಸಮುದಾಯ ಆಧಾರಿತ ಕಾರ್ಯಕ್ರಮ

0

ಆರೋಗ್ಯಕರ ಬೆಳವಣಿಗೆಯನ್ನು ಸಾಧಿಸಲು ಆಹಾರ ಮುಖ್ಯ- ಭಾಗೀರಥಿ ಮುರುಳ್ಯ

ಕಾಣಿಯೂರು: ಆರೋಗ್ಯಕರ ಬೆಳವಣಿಗೆ ಮತ್ತು ಬೆಳವಣಿಗೆಯನ್ನು ಸಾಧಿಸಲು, ಮಾನವ ದೇಹವು ಸಾಕಷ್ಟು ಪೋಷಣೆಯನ್ನು ಪಡೆಯಬೇಕು ಮತ್ತು ದೇಹಕ್ಕೆ ಅಗತ್ಯವಾದ ಪೋಷಣೆಯನ್ನು ಒದಗಿಸುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ದ.ಕ. ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಅಂಗನವಾಡಿ ಕೇಂದ್ರದ ವತಿಯಿಂದ ಮುರುಳ್ಯ ಗ್ರಾಮ ಪಂಚಾಯತ್ ನಲ್ಲಿ ನಡೆದ ಪೋಷಣ್ ಅಭಿಯಾನ ದಡಿಯಲ್ಲಿ ಸಮುದಾಯ ಆಧಾರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.


ಪೌಷ್ಟಿಕ ಆಹಾರ ಎಲ್ಲರ ಅಗತ್ಯತೆಯಾಗಿದೆ. ಪ್ರತಿಯೊಬ್ಬರು ಆರೋಗ್ಯದಿಂದಿರಲು, ರೋಗಗಳನ್ನು ತಡೆಗಟ್ಟಲು ಜೀವನದಲ್ಲಿ ಪ್ರಗತಿ ಸಾಧಿಸಲು ಪೌಷ್ಟಿಕ ಆಹಾರದ ಅಗತ್ಯತೆ ಬಹಳವಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾ. ಪಂ.ಅಧ್ಯಕ್ಷೆ ವನಿತಾ ಸುವರ್ಣ,ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಸದಸ್ಯರಾದ ಸುಂದರ ಗೌಡ ಶೇರ, ಮೋನಪ್ಪ ಅಲೆಕ್ಕಿ, ಎಸ್, ಸೀತಾ, ಶೀಲಾವತಿ ಗೊಳ್ತಿಲ, ಮುರುಳ್ಯ ಸಿ. ಎ ಬ್ಯಾಂಕ್ ನಿರ್ದೇಶಕ ವಸಂತ ನಡುಬೈಲು,ತಾಲೂಕು ಸಮುದಾಯ ಅರೋಗ್ಯ ಕೇಂದ್ರದ ಪ್ರಮೀಳಾ, ಪಂಚಾಯತ್ ಪಿಡಿಓ ಪುವಪ್ಪ ಗೌಡ, ಕಾರ್ಯದರ್ಶಿ ಸೀತಾರಾಮ ಗೌಡ ಉಪಸ್ಥಿತರಿದ್ದರು. ಹೇಮಾ ಹುದೇರಿ, ಗೀತಾ ಕಳತ್ತಜೆ ಸ್ವಾಗತಿಸಿ, ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here