





ಪುತ್ತೂರು: ವೈದ್ಯಕೀಯ ತಜ್ಞ ಡಾ|ನಝೀರ್ ಅಹಮ್ಮದ್ ಡಯಾಬೆಟ್ಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವುಗಳ ಸಹಯೋಗದಲ್ಲಿ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣಾ ಶಿಬಿರ, ಉಚಿತ ಮಧುಮೇಹ(GRBS), HBA1C ಮತ್ತು ನ್ಯೂರೋಪತಿ ತಪಾಸಣೆಯು ಸೆ.13 ರಂದು ಕಲ್ಲಾರೆ ಕೃಷ್ಣಾ ಆರ್ಕೆಡ್ನಲ್ಲಿರುವ ಡಾ|ನಝೀರ್ ಅಹಮ್ಮದ್ರವರ ಕ್ಲಿನಿಕ್ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.


ಅತಿಯಾದ ದಣಿವು, ಸುಸ್ತು, ನಿತ್ರಾಣ, ಮಲಬದ್ಧತೆ ಅಥವಾ ಅತಿಸಾರ, ಶೀತಕ್ಕೆ ಅಥವಾ ತಾಪಕ್ಕೆ ಅಲರ್ಜಿ, ಕೂದಲು ಉದುರುವಿಕೆ, ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆ ಕಷ್ಟವಾಗುವುದು, ತೂಕ ಹೆಚ್ಚಾಗುವುದು ಅಥವಾ ಕಡಿಮೆ ಆಗುವುದು, ಹೆಂಗಸರಿಗೆ ಅತಿಯಾದ ಮಾಸಿಕ ಸ್ರಾವ ಅಥವಾ ನಿಯಮ ತಪ್ಪಿದ ಮಾಸಿಕ ಸ್ರಾವ, ಮೃದುವಾದ ಕರ್ಕಶ ಸ್ವರ, ಗಂಟಲಿನಲ್ಲಿ ಊದುಕೊಳ್ಳುವಿಕೆ, ಅಧಿಕ ಎದೆ ಬಡಿತ ಅಥವಾ ರಕ್ತದೊತ್ತಡವುಳ್ಳವರು ಶಿಬಿರದಲ್ಲಿ ಪಾಲ್ಗೊಂಡು ಡಾ.ನಝೀರ್ ಅಹಮದ್ ರವರಲ್ಲಿ ಸಲಹೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ಸುಜಿತ್ ರೈ, ಕೋಶಾಧಿಕಾರಿ ಸಂಕಪ್ಪ ರೈ, ಬುಲೆಟಿನ್ ಎಡಿಟರ್ ಬಾಲಕೃಷ್ಣ ಆಚಾರ್, ರೋಟರ್ಯಾಕ್ಟ್ ಪುತ್ತೂರು ಕಮ್ಯೂನಿಟಿ ಸರ್ವಿಸ್ ನಿರ್ದೇಶಕ, ಉಪಸ್ಥಿತರಿದ್ದರು. ಮೆಕ್ಲಾಯಿಡ್ ಕಂಪೆನಿ, ಎರಿಸ್ ಫಾರ್ಮಾ ಕಂಪೆನಿ, ಎಸ್.ಆರ್.ಎಲ್ ಲ್ಯಾಬ್, ಎಂಕ್ಯೂರ್ ಫಾರ್ಮಾ ಕಂಪೆನಿ, ಡಾ.ನಝೀರ್ ಅಹಮದ್ ಡಯಾಬೆಟ್ಸ್ ಸೆಂಟರ್ ನ ಸಿಬ್ಬಂದಿ ಸಹಕರಿಸಿದರು.





ಪಾಲ್ಗೊಂಡ ಫಲಾನುಭವಿಗಳು..
ಥೈರಾಯಿಡ್ ಪರೀಕ್ಷೆ-50 ಮಂದಿ
HBA1C-20 ಮಂದಿ
ಮಧುಮೇಹ-50 ಮಂದಿ
ನ್ಯೂರೋಪತಿ ಪರೀಕ್ಷೆ-10 ಮಂದಿ









