ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂರು ದಿನಗಳ ಕಾರ್ಯಾಗಾರ

0

ಸ್ವಉದ್ಯೋಗಕ್ಕೆ ಅಪರಿಮಿತ ಅವಕಾಶಗಳು:ಅರವಿಂದ ಬಾಳೇರಿ

ಪುತ್ತೂರು: ಸ್ವ ಉದ್ಯೋಗಕ್ಕೆ ವಿಪುಲವಾದ ಅವಕಾಶಗಳಿದ್ದು ಅದಕ್ಕೆ ಪೂರಕವಾದ ತಿಳುವಳಿಕೆ ಮತ್ತು ತರಬೇತಿಯನ್ನು ಪಡೆದಲ್ಲಿ ಇಂದಿನ ಯುವ ಸಮೂಹ ಸ್ವಉದ್ಯೋಗದಲ್ಲಿ ಅದ್ಭುತ ಯಶಸ್ಸು ಗಳಿಸಬಹುದೆಂದು ಸಿಡಾಕ್, ಮಂಗಳೂರು ವಲಯದ ಜಂಟಿ ನಿರ್ದೇಶಕ ಅರವಿಂದ ಬಾಳೇರಿ ಅಭಿಪ್ರಾಯಪಟ್ಟರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಎಲ್ಲಿ ಸಿಡಾಕ್ ಹಾಗೂ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಉದ್ಯೋಗ ಕೌಶಲ ಕೇಂದ್ರ ಜಂಟಿಯಾಗಿ ಆಯೋಜಿಸಿದ ಮೂರು ದಿನಗಳ ಕಾರ್ಯಾಗಾರದ  ಉದ್ಘಾಟನಾ ಸಮಾರಂಭದಲ್ಲಿ ಸೆ.14ರಂದು ಮಾತನಾಡಿದರು. ಜಿಲ್ಲಾ ಕೌಶಲ್ಯ  ಅಭಿವೃದ್ಧಿ ಅಧಿಕಾರಿಯಾಗಿರುವ ಸತ್ಯಲತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತರಬೇತಿಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

14,15,16ರಂದು ನಡೆದ ಕಾರ್ಯಾಗಾರಗಳಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅಧ್ಯಕ್ಷತೆಯನ್ನು ವಹಿಸಿದ್ದರು, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಎಂಬಿಎ ವಿಭಾಗದ ಮುಖ್ಯಸ್ಥರಾದ ಪ್ರೊ.  ಜೈ ಕಿಶನ್ ಭಟ್, ಸ್ವಉದ್ಯೋಗದ ಬಗ್ಗೆ ನಿಧಿ ಫುಡ್ ಪ್ರಾಡಕ್ಟ್ಸ್ ನ ಮಾಲಕ ರಾಧಾಕೃಷ್ಣ , ಯುವಶಕ್ತಿ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಶ್ರೀಕಾಂತ್ ಪೂಜಾರಿ ಬಿರಾವು, ಪಿಎಂ ಎಫ್ಎಂಇ ಇದರ ಜಿಲ್ಲಾ ಸಲಹೆಗಾರ ಸತೀಶ್ ಮಾಬೆನ್,ಜಿಲ್ಲಾ ಸಹಾಯಕ ಸಾಂಖ್ಯಿಕ ಅಧಿಕಾರಿ ವಿಜಯಲಕ್ಷ್ಮಿ ,ಮರಿಕೆ ಕೆಮಿಕಲ್ಸ್ ಇದರ ಮಾಲಕರಾದ ಕೀರ್ತನ್ ಬಿ, ಹಣಕಾಸಿನ ಅರಿವು ಸಲಹೆಗಾರ್ತಿ ಉಷಾ ನಾಯಕ್ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.

ಸಮಾರೋಪ ಸಮಾರಂಭದಲ್ಲಿ ತರಬೇತಿಯಲ್ಲಿ ಪಾಲುಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.ವೇದಿಕೆಯಲ್ಲಿ ಐ ಕ್ಯು ಎ ಸಿ ಸಂಚಾಲಕ ಡಾ ಕಾಂತೇಶ ಎಸ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರಾಮಚಂದ್ರ ಡಿ, ನಿರ್ವಹಣಾ ಶಾಸ್ತ್ರ ವಿಭಾಗ ಮುಖ್ಯಸ್ಥ ಮಂಜುಳಾದೇವಿ ಪಿ,  ನಿಯೋಜನಾ ಕೋಶದ ಸಂಚಾಲಕ ಅನಂತ ಭಟ್, ಉದ್ಯೋಗ ಕೌಶಲ್ಯ ಕೇಂದ್ರ ಇದರ ಸಾಂಖ್ಯಿಕ ಅಧಿಕಾರಿ ವಿಜಯಲಕ್ಷ್ಮಿ, ಕೆನರಾ ಬ್ಯಾಂಕ್ ಬೆಳ್ತಂಗಡಿ ಇದರ ಹಣಕಾಸು ಅರಿವಿನ ಸಲಹೆಗಾರ್ತಿ ಉಷಾ ನಾಯಕ್ , ಉಪನ್ಯಾಸಕ ವೃಂದ, ಕಾಲೇಜು ವೃಂದ  ಉಪಸ್ಥಿತರಿದ್ದರು.ಪ್ರೊ. ರಾಮಚಂದ್ರ ಡಿ ಸ್ವಾಗತಿಸಿ, ಡಾ. ಕಾಂತೇಶ ಎಸ್ ವಂದಿಸಿ, ನಿಯೋಜನ ಕೋಶದ ವಿದ್ಯಾರ್ಥಿ ಸಂಚಾಲಕ ಕಿರಣ್ ಕೆ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here