ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ- ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ, ಬಾಲಕರ ತಂಡ ದ್ವಿತೀಯ

0

ಆಲಂಕಾರು: ಸುಬ್ರಮಣ್ಯ ಕುಮಾರಸ್ವಾಮಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಹಾಗೂ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಪಿಯುಸಿ ವಿದ್ಯಾರ್ಥಿಗಳಾದ ತೃಪ್ತಿ ಬಿ, ಅನುಷಾ ಎಮ್, ಧನ್ಯಶ್ರೀ, ದೀಕ್ಷಾ, ರೂಪಿಕ ಬಿ, ಕೃತಿ ಕೆ ಎಸ್, ಚೈತ್ರ, ಹರ್ಷ, ಹರ್ಷಿತ, ಶ್ರಾವ್ಯ ಐ, ಟಿ.ಶರತ್ ಕುಮಾರ್, ಪ್ರಮೀತ್ ಡಿಸೋಜ, ಪವನ್ ಕೆ, ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಶಿವಪ್ರಸಾದ್, ಉದಿತ್ ಕುಮಾರ್ ಎನ್, ಪುನೀತ್, ಸುಶಾಂತ್, ತಂಡವನ್ನು ಪ್ರತಿನಿಧಿಸಿದ್ದರು. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕಶ್ರೇಯಸ್ಸು ರೈ ಅವರು ತರಬೇತಿ ನೀಡಿದ್ದರು. ಆಶಾ ಡಿ.ಜಿ ಸಮಾಜಶಾಸ್ತ್ರ ಉಪನ್ಯಾಸಕಿ ತಂಡದ ಮೇಲ್ವಿಚಾರಕರಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here