ಡಾ.ದಿಶಾ ಎಮ್. ಶೆಟ್ಟಿಗೆ ಸ್ನಾತಕೋತ್ತರ ಎಮ್‌ಡಿ ಪರೀಕ್ಷೆಯಲ್ಲಿ ಏಳನೇ ರ‍್ಯಾಂಕ್

0

ಪುತ್ತೂರು: ರಾಜೀವಗಾಂಧಿ ಯುನಿವರ್ಸಿಟಿ 2022-23ನೇ ಸಾಲಿನಲ್ಲಿ ನಡೆಸಿದ ಸ್ನಾತಕೋತ್ತರ ಎಮ್‌ಡಿ ಪರೀಕ್ಷೆಯಲ್ಲಿ ಪಾಥೋಲಾಜಿ ವಿಭಾಗದಲ್ಲಿ ಮುಂಡಾಳಗುತ್ತು ಡಾ.ದಿಶಾ ಎಮ್. ಶೆಟ್ಟಿ ಏಳನೇ ರ‍್ಯಾಂಕ್ ಗಳಿಸಿದ್ದಾರೆ.

ಕೈಕಾರ ಪುಂಡಿಕಾಯಿ ಪಡ್ಡಂಬೈಲುಗುತ್ತು ಬಾಲಕೃಷ್ಣ ರೈ ಮತ್ತು ಮುಂಡಾಳಗುತ್ತು ವಿನುತ ಬಿ. ರೈ ದಂಪತಿಯ ಪುತ್ರಿಯಾದ ಇವರು ತೆಂಕಿಲ ವಿವೇಕಾನಂದ ಆಂಗ್ಲ ಮಾದ್ಯಮ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ಶಿಕ್ಷಣ, ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಮ್‌ಬಿಬಿಎಸ್ ಪದವಿ ಹಾಗೂ ಬೆಂಗಳೂರಿನ ಎಮ್‌ಎಸ್ ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ಪಾಥೋಲಾಜಿ((pathology)ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಶಿವಮೊಗ್ಗದ ಮೆಗ್ಗಾನ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸೀನಿಯರ್ ರೆಸಿಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here