ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಮಂಡಿಸಿದ ಹಿನ್ನಲೆ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾದ ವತಿಯಿಂದ ಸೆ.21ರಂದು ಬಿಜೆಪಿ ಕಚೇರಿಯಲ್ಲಿ ಹರ್ಷಾಚರಣೆ ಮತ್ತು ಅಭಿನಂದನಾ ಸಭೆ ನಡೆಯಿತು.
ಜಿ.ಪಂ ಅಧ್ಯಕ್ಷರುಗಳಾದ ಆಶಾ ತಿಮ್ಮಪ್ಪ ಗೌಡ, ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜಯಂತಿ ನಾಯಕ್, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್ ಶೆಟ್ಟಿ, ಗ್ರಾಮಾಂತರ ಮಂಡಲದ ಮಹಿಳಾ ಮೋರ್ಚಾದ ಅಧ್ಯಕ್ಷ ಯಶಸ್ವಿನಿ ಶಾಸ್ತ್ರಿ, ಗ್ರಾಮಾಂತರ ಮಂಡಲದ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಶೋಧ ಕೆ ಗೌಡ, ಬಿಜೆಪಿ ಗ್ರಾಮಾಂತರ ಹಾಗೂ ನಗರ ಮಂಡಲದ ಪದಾಧಿಕಾರಿಗಳು, ನಗರ ಸಭಾ ಸದಸ್ಯರು, ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಮೋರ್ಚಾ ಹಾಗೂ ಪ್ರಕೋಷ್ಟಗಳ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.