ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗಿ
ಪುತ್ತೂರು: ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂಡಳಿ ಮತ್ತು ಯಕ್ಷಗಾನ ಕಲಾಕೂಟದ ವತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಮೂರ್ತಿ ಪ್ರತಿಷ್ಠಾಪನೆ ನಡೆದು, ಭಜನೆ, ಮಂಗಳಾರತಿ ಬಳಿಕ ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು. ಕಾರ್ಯಕ್ರಮದ ಪ್ರಯುಕ್ತ ವಿವಿಧ ಸ್ಪರ್ಧೆಗಳು, ಆಟೋಟ ಸ್ಪರ್ಧೆಗಳು ನಡೆಯಿತು.
ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಷಣ್ಮುಖದೇವ ಭಜನಾ ಮಂಡಳಿ ಮತ್ತು ಯಕ್ಷಗಾನ ಕಲಾಕೂಟದ ಅಧ್ಯಕ್ಷ ಮಂಜುನಾಥ್ ದುಗ್ಗಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಇಲ್ಲಿ ವಕೀಲರಾಗಿರುವ ಮೋಹಿತ್ ಕುಮಾರ್ ಕೆ ಕುಂಡಡ್ಕ, ಪೆರ್ಲಂಪಾಡಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ನೀಲಾವತಿ ಕೆ , ಹಿಂದೂ ಜಾಗರಣ ವೇದಿಕೆ ಪೆರ್ಲಂಪಾಡಿ ಘಟಕದ ಅಧ್ಯಕ್ಷ ಗಿರೀಶ್ ಪಾದೆಕಲ್ಲು ವಹಿಸಿದ್ದರು. ಭಜನಾ ಮಂದಿರದ ಸ್ಥಾಪಕ ಅಧ್ಯಕ್ಷ ಕೊರಗಪ್ಪ ಗೌಡ ಕುಂಟಿಕಾನ ಜೊತೆಗಿದ್ದರು. ಬಳಿಕ ನಡೆದ ವಿಜೃಂಭಣೆಯ ಶೋಭಾಯಾತ್ರೆಯಲ್ಲಿ ಭಾರತ್ ಮಾತಾ ಭಾವಚಿತ್ರದೊಂದಿಗೆ ಟ್ಯಾಬ್ಲೋ, ಗೊಂಬೆ ಕುಣಿತ, ಸಿಂಗಾರಿ ಮೇಳ, ಡಿಜೆ ಹಾಗೂ ಪೆರ್ಲಂಪಾಡಿ ಷಣ್ಮುಖದೇವ ಮಹಿಳಾ ಕುಣಿತ ಭಜನಾ ಮಂಡಳಿ, ಕೊಳ್ತಿಗೆ ಶ್ರೀ ಮಹಮ್ಮಾಯಿ ಕುಣಿತ ಭಜನಾ ತಂಡ ಹಾಗೂ ಶಾಲಾ ವಿದ್ಯಾರ್ಥಿಗಳು,ಸಾರ್ವಜನಿಕರಿಂದ ಕುಣಿತ ಭಜನೆ ತಂಡಗಳು ಮೆರುಗು ನೀಡಿದವು. ಶೋಭಾಯಾತ್ರೆಯ ಬಳಿಕ ಶ್ರೀ ದೇವರ ಮೂರ್ತಿ ಜಲಸ್ಥಂಭನಾ ನಡೆಯಿತು.